Sunday, April 9, 2017

ಜೀಪಿಗೆ ಲಾರಿ ಡಿಕ್ಕಿ
           ಜೀಪಿಗೆ ಲಾರಿ ಡಿಕ್ಕಿಯಾಗಿ ಜೀಪಿನಲ್ಲಿದ್ದವರಿಗೆ ಗಾಯವಾದ ಘಟನೆ ಕುಶಾಲನಗರದ ನಿಸರ್ಗಧಾಮದ ಹತ್ತಿರ ವರದಿಯಾಗಿದೆ. ದಿನಾಂಕ 8-4-2017 ರಂದು ರಾಮನ್ ಎಂಬುವವರು ನಂಜರಾಯಪಟ್ಟಣದಿಂದ ಜೀಪಿನಲ್ಲಿ ಕೆಲಸದವರಾದ ಪಾರ್ವತಿ, ರತ್ನ, ಶಾಂತ ಹಾಗೂ ಮಂಜುಳರವರನ್ನು ಕರೆದುಕೊಂಡು ಹೋಗುತ್ತಿರುವಾಗ ಕುಶಾಲನಗರದ ನಿಸರ್ಗಧಾಮದ ಹತ್ತಿರ ತಲುಪುವಾಗ ಎದುರುಗಡೆಯಿಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಜೀಪಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪು ಚಾಲಕ ರಾಮನ್, ಪಾರ್ವತಿ, ರಾಜಮ್ಮ ಹಾಗೂ ಮಂಜುಳರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಆಟೋ ರಿಕ್ಷಾ ಅಪಘಾತ ವ್ಯಕ್ತಿಯ ದುರ್ಮರಣ
               ಆಟೋ ರಿಕ್ಷಾ ಮಗುಚಿ ಬಿದ್ದು ಪ್ರಯಾಣಿಕ ಮೃತಪಟ್ಟ ಘಟನೆ ಶನಿವಾರಸಂತೆಯಲ್ಲಿ ವರದಿಯಾಗಿದೆ. ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಶ್ರೀಮತಿ ಶಾಂತರವರು ಶನಿವಾರಸಂತೆ ನಗರದಿಂದ ಪ್ರಯಾಣಿಕರಾದ ಮುತ್ತಯ್ಯ, ಪಂಚಾಕ್ಷರಿಯವರೊಂದಿಗೆ ಚಿನ್ನಳ್ಳಿಗೆ ಆಟೋ ರಿಕ್ಷಾದಲ್ಲಿ ಹೋಗುತ್ತಿರುವಾಗ ಚಿನ್ನಳ್ಳಿ ರಸ್ತೆಯ ಚಂದ್ರೇಗೌಡರವರ ಮನೆಯ ಹತ್ತಿರ ತಲುಪುವಾಗ ರಸ್ತೆಗೆ ನಾಯಿ ಅಡ್ಡ ಬಂದು ಆಟೋ ರಿಕ್ಷಾ ದ ಚಕ್ರಕ್ಕೆ ಸಿಲುಕಿ ಆಟೋ ಚಾಲಕ ಸೋಮಣ್ಣನವರ ನಿಯಂತ್ರಣ ತಪ್ಪಿ ಆಟೋ ಮಗುಚಿ ಬಿದ್ದು ಗಾಯಗಳಾಗಿದ್ದು ಹಾಸನದ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪಂಚಾಕ್ಷರಿಯವರು ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ
            ದಿನಾಂಕ 8-4-2017 ರಂದು ಕೊಡ್ಲಿಪೇಟೆಯ ಲಕ್ನಿ ಗ್ರಾಮದ ನಿವಾಸಿಯಾದ ಬಸವರಾಜು ಎಂಬುವವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿಗಳಾದ ಗಿರೀಶ, ಹಾಲಪ್ಪ, ಕುಮಾರ, ಯೋಗೇಶ್, ಈಶ್ವರ, ಭರತ್ ಹಾಗೂ ಭವ್ಯರವರು ಮನೆಯ ಹತ್ತಿರ ಬಂದು ಚರಣ್ ಕುಮಾರ್ ರವರ ಗದ್ದೆಗೆ ಹಾಕಿದ ಮೆಣಸಿನ ಗಿಡಗಳನ್ನು ಮತ್ತು ಪೈಪುಗಳನ್ನು ಕತ್ತರಿಸಿದ್ದೀಯಾ ಎಂದು ಹೇಳಿ ಜಗಳ ತೆಗೆದು ಎಲ್ಲರೂ ಸೇರಿ ಹಲ್ಲೆ ನಡೆಸಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಳು ಮೆಣಸು ಕಳವು
            ಮನೆಯಲ್ಲಿ ಶೇಖರಿಸಿಟ್ಟಿದ್ದ ಕಾಳು ಮೆಣಸು ಕಳುವಾದ ಘಟನೆ ಹೆಗ್ಗಳ ಗ್ರಾಮದಲ್ಲಿ ವರದಿಯಾಗಿದೆ. ಹೆಗ್ಗಳ ಗ್ರಾಮದ ನಿವಾಸಿಯಾದ ವಿಠಲಶೆಟ್ಟಿಯವರು ದಿನಾಂಕ 2-4-2017 ರಂದು ಉಜಿರೆಗೆ ಹೋಗಿ ದಿನಾಂಕ 7-4-2017 ರಂದು ವಾಪಾಸ್ಸು ಮನೆಗೆ ಬಂದಿದ್ದು, ದಿನಾಂಕ 8-4-2017 ರಂದು ಮೆಣಸನ್ನು ಶೇಖರಿಸಿಟ್ಟಿದ್ದ ಕೋಣೆಯನ್ನು ತೆರೆದು ನೋಡಿದಾಗ ಕರಿಮೆಣಸನ್ನು ಶೇಖರಿಸಿಟ್ಟಿದ್ದ ಕೊಠಡಿಯ ಒಳಗೆ ಕಳ್ಳರು ನುಗ್ಗಿ ಸುಮಾರು 45 ಕೆ ಜಿ ಯಷ್ಟು ತೂಕದ ಕರಿಮೆಣಸನ್ನು ಕಳವು ಮಾಡಿರುವುದಾಗಿ ಕೊಟ್ಟ ಪುಕಾರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.