Friday, May 5, 2017

ವ್ಯಕ್ತಿ ಆತ್ಮಹತ್ಯೆ
                  ಪೊನ್ನಂಪೇಟೆ ಬಳಿಯ ಮತ್ತೂರು ನಿವಾಸಿ ಪೊಕಳಿಚಂಡ  ಜ್ಯೋತಿ ಎಂಬವರ ಪತಿ ದೇವಯ್ಯನವರು ಅತಿಯಾದ ಮದ್ಯವ್ಯಸನಿಯಾಗಿದ್ದು ಎಷ್ಟೇ ಬುದ್ದಿ ಹೇಳಿದರೂ ಕೇಳದೆ ಇದ್ದುದರಿಂದ ಜ್ಯೋತಿಯವರು ಬೇಸರಗೊಂಡು ದಿನಾಂಕ 01/05/2017ರಂದು ತವರು ಮನೆಗೆ ಹೋಗಿದ್ದು ದಿನಾಂಕ 04/05/2017ರಂದು  ಜ್ಯೋತಿಯವರ ಭಾವ ನಟೇಶ ಎಂಬವರು ದೂರವಾಣಿ ಕರೆ ಮಾಡಿ ಆಕೆಯ ಪತಿ ದೇವಯ್ಯನವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ ಮೇರೆಗೆ ಸಂಬಂಧಿಕರೊಂದಿಗೆ ಧಾವಿಸಿ  ನೋಡಿದಾಗ ಪುತ್ತಾಮನೆ ಬೋಸ್‌ ಎಂಬವರ ಕೆರೆಯಲ್ಲಿ  ದೇವಯ್ಯನವರ  ಮೃತ ದೇಹ ತೇಲುತ್ತಿದ್ದು ಅತಿಯಾದ ಮದ್ಯಪಾನದ ಕಾರಣದಿಂದ ದೇವಯ್ಯನವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತರಿಂದ ಮನೆಗೆ ಗುಂಡು
                  ಕೇರಳದ ಕಾಸರಗೋಡು ನಿವಾಸಿ ಸ್ಟೀಫನ್‌ ಎಂಬವರು ಭಾಗಮಂಡಲ ಬಳಿಯ ಕೋರಂಗಾಲ ಗ್ರಾಮದಲ್ಲಿ ಖರೀದಿಸಿದ ಮನೆಯ ನವೀಕರಣ ಕೆಲಸಕ್ಕೆಂದು ಹರೀಶ್‌ ಮತ್ತು ಬಿಜು ಎಂಬವರನ್ನು ಮನೆಯಲ್ಲಿ ನೇಮಿಸಿದ್ದು  ದಿನಾಂಕ 04/05/2017ರ ಮಧ್ಯರಾತ್ರಿ ಯಾರೋ ಅಪರಿಚಿತರು ಮನೆಯ ಕಿಟಕಿಗೆ ಗುಂಡು ಹಾರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ  ಅಪಘಾತ
                      ದಿನಾಂಕ 03/05/2017ರಂದು ವಿರಾಜಪೇಟೆ ಬಳಿಯ ಪಾಲಂಗಾಲ ನಿವಾಸಿ ಕೆ.ಪಿ.ಮಂಜುನಾಥ್ ಎಂಬವರು ಅವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಎ-9019ರಲ್ಲಿ ಅವರ ಸಂಬಂಧಿಕ ವಸಂತರವರ ಕೆಲಸದವರಾದ ಈಶ್ವರ ಮತ್ತು ಇನ್ನಿಬ್ಬರನ್ನು ಕರೆದುಕೊಂಡು ಪಾಲಂಗಾಲದಿಂದ ಚೆಯ್ಯಂಡಾಣೆ ಕಡೆಗೆ ಹೋಗುತ್ತಿರುವಾಗ ಪಾಲಂಗಾಲದ ಸರ್ಕಾರಿ ಶಾಲೆಯ ಬಳಿ ಎದುರುಗಡೆಯಿಂದ ಕೆಎ-12-ಎ-3854ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಥರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಣತರವರಿಗೆ ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 04/05/2017ರಂದು ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ನಿವಾಸಿ ಎ.ಪಿ.ರಮೇಶ ಎಂಬವರು 7ನೇ ಹೊಸಕೋಟೆಯ ಉಪ್ಪುತೋಡು ಎಂಬಲ್ಲಿ ತೊಂಡೂರು ಗ್ರಾಮದ ನಿವಾಸಿ ಅರಸು ಎಂಬಾತನು ಒಂದು ಬೈಕಿನಲ್ಲಿ ಬಂದು ಹಳೆ ದ್ವೇಷದಿಂದ ರಮೇಶರವರ ಜೊತೆಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ
                       ವಿರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಿಂದ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ದಿನಾಂಕ 04/05/2017ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಪಿಎಸ್‌ಐ ಎಂ.ನಂಜುಂಡಸ್ವಾಮಿಯವರು ಕಂಡಂಗಾಲ ಗ್ರಾಮಕ್ಕೆ ಹೋಗುತ್ತಿರುವಾಗ ಬಿಟ್ಟಂಗಾಲ ಸಮೀಪ ಕೆಎ-12-ಎ-4190ರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮರಳು ಸಮೇತ ಲಾರಿಯನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನೆ ತಿವಿದು ಕಾವಾಡಿ ಸಾವು
                       ದಿನಾಂಕ 04/05/2017ರಂದು ಸಿದ್ದಾಪುರ ಬಳಿಯ ದುಬಾರೆ ಆನೆ ಶಿಬಿರದಲ್ಲಿ ಕಾವಾಡಿಯಾಗಿ ಕೆಲಸ ಮಾಡುತ್ತಿದ್ದ ಮಣಿಯ ಎಂಬವರು ಕಾರ್ತಿಕ ಎಂಬ ಸಾಕಾನೆಗೆ ತಿನ್ನಲು ಕುಸರೆಯನ್ನು ನೀಡುತ್ತಿರುವಾಗ ಆನೆ ಅಚಾನಕ್ಕಾಗಿ ದಂತದಿಂದ ಮಣಿಯರವರನ್ನು ತಿವಿದು ತೀವ್ರವಾಗಿ ಗಾಯಗೊಳಿಸಿದ್ದು  ಗಂಭೀರವಾಗಿ ಗಾಯಗೊಂಡ ಕಾವಾಡಿ ಮಣಿಯರವರನ್ನು ಸಿದ್ದಾಪುರ ಆಸ್ಪತ್ರೆಗೆ ಸಾಗಿಸಿದಾಗ ಮಣಿಯ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.