Thursday, May 4, 2017

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 02/05/2017ರಂದು ಶನಿವಾರಸಂತೆ  ಬಳಿಯ ಗಂಗಾವರ ನಿವಾಸಿ ಮಲ್ಲೇಶ ಎಂಬವರ ಮನೆಗೆ ಅದೇ ಗ್ರಾಮದ ನಿಂಗರಾಜು, ರಾಜ, ರತ್ನ ಮತ್ತು ದೊರೆ ಎಂಬವರು ಅಕ್ರಮವಾಗಿ ಪ್ರವೇಶಿಸಿ ಹಳೆ ವೈಷಮ್ಯದಿಂದ ಮಲ್ಲೇಶರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ 
                     ದಿನಾಂಕ 03/05/2017ರಂದು ಸೋಮವಾರಪೇಟೆ ಬಳಿಯ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ದಿವಾಕರ ಎಂಬವರು ಭುವಂಗಾಲ ಗ್ರಾಮದ ಸುದೀಪ್‌ ಎಂಬವರ ಮನೆಗೆ ಶುಂಠಿ ಬೀಜ ತರಲೆಂದು ಹೋಗಿ ಸುದೀಪ್‌ರವರ ಹೊಲಕ್ಕೆ ಹೋಗಿ ವಾಪಾಸು ಬರುತ್ತಿರುವಾಗ ದಾರಿಯಲ್ಲಿ ಸುದೀಪ್‌ರವರ ಚಿಕ್ಕಪ್ಪ ರಾಜಣ್ಣ ಹಾಗೂ ಆತನ ಪತ್ನಿ ಮಣಿ ಎಂಬವರು ದಾರಿ ತಡೆದು  ದಿವಾಕರರವರೊಂದಿಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ
                     ದಿನಾಂಕ 03/05/2017ರಂದು ಸೋಮವಾರಪೇಟೆ ಬಳಿಯ ಭುವಂಗಾಲ ಗ್ರಾಮದಲ್ಲಿ ದಿಲೀಪ್‌ ಕುಮಾರ್‌  ಸಿಂಗ್‌ ಎಂಬವರು ವಿದ್ಯುತ್‌ ವ್ಯವಸ್ಥೆಯ ದುರಸ್ಥಿ ಮಾಡಿಸುತ್ತಿರುವಾಗ ಅದೇ ಗ್ರಾಮದ ಸುಬ್ರಮಣಿ ಎಂಬವರು ಬಂದು ದಿಲೀಪ್‌ ಕುಮಾರ್‌ರವರೊಂದಿಗೆ ಜಗಳವಾಡಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್ ಡಿಕ್ಕಿ
                  ದಿನಾಂಕ 03/05/2017ರಂದು ಸೋಮವಾರಪೇಟೆ ಬಳಿಯ ಹಿರಿಕರ ನಿವಾಸಿ ಕುಮಾರ ಎಂಬವರು ಕೆಲಸಕ್ಕೆಂದು ಅವರ  ಮೋಟಾರು ಬೈಕಿನಲ್ಲಿ ಹೋಗಿ ವಾಪಾಸು ಮನೆಗೆ ಬರುತ್ತಿರುವಾಗ ಹೊನ್ನವಳ್ಳಿ ಎಂಬಲ್ಲಿ ಎದುರುಗಡೆಯಿಂದ ಭಕ್ತ ಕುಮಾರ ಎಂಬವರು ಕೆಎ-12-ಕೆ-1297ರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕುಮಾರರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಕುಮಾರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                      ದಿನಾಂಕ 02/05/2017ರಂದು ಶನಿವಾರಸಂತೆ ಬಳಿಯ ದೊಡ್ಡಕೊಡ್ಲಿ ನಿವಾಸಿ ಮಂಜು ಎಂಬವರು ಅವರ ಮನೆಯಲ್ಲಿ ಮಾಡಿಗೆ ನೇಣು ಬಿಗಿದುಕೊಂಡಿದ್ದು ಚಿಕಿತ್ಸೆಗಾಗಿ  ಹಾಸನದ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 03/05/2017ರಂದು ಮೃತರಾಗಿರುವುದಾಗಿದೆ. ಮಂಜುರವರು ವ್ಯವಸಾಯಕ್ಕೋಸ್ಕರ ಬ್ಯಾಂಕಿನಿಂದ ಸಾಲ ಮಾಡಿ ಎರಡು ಕೊಳವೆ ಬಾವಿ ತೋಡಿಸಿದ್ದು ಎರಡರಲ್ಲೂ ನೀರು  ಬಾರದೆ ನಷ್ಟವಾಗಿರುವ ಕಾರಣ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರ ಬಹುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.