Monday, May 8, 2017

 ಪತ್ರಿಕಾ ಪ್ರಕಟಣೆ 
ನಾಗರಿಕ ಬಂದೂಕು ತರಬೇತಿ ಶಿಬಿರ
ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್‌ ನ ಆರ್‌ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಅರ್ಜಿ ಶುಲ್ಕ                      : ರೂ.10
ಸಂಪರ್ಕ ಸಂಖ್ಯೆ                : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು     : ಶ್ರೀ ತಿಮ್ಮಪ್ಪ, ಪೊಲೀಸ್‌ ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ           : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್‌ಪೋರ್ಟ್‌ ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
 

ಮನೆ ಕಳವು
                          ಭಾಗಮಂಡಲ ಬಳಿಯ ಬೇಂಗೂರು ನಿವಾಸಿ ದಮಯಂತಿ ಎಂಬವರು ದಿನಾಂಕ 06/05/2017ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿ ಮನೆಯ ಕೋಣೆಯ ಬೀರುವಿನಲ್ಲಿಟ್ಟಿದ್ದ ಸುಮಾರು ರೂ. 16,000/- ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ 
                           ದಿನಾಂಕ 06/05/2017ರಂದು ಭಾಗಮಂಡಲ ಬಳಿಯ ಕುಂದಚೇರಿ ನಿವಾಸಿ ಕೆ.ಪಿ.ಪುನೀತ್‌ ಮತ್ತು ಅವತ ತಾಯಿ ಗೌರಮ್ಮ ಎಂಬವರು ಮದುವೆ ಸಮಾರಂಭವೊಂದಕ್ಕೆ ಹೋಗಿದ್ದಾಗ ಗ್ರಾಮದ ನಿವಾಸಿಗಳಾದ ಕೆದಂಬಾಡಿ ಗಿರಿ, ಕೆದಂಬಾಡಿ ಶೇಖರ, ಆಮೆಮನೆ ಶೇಖರ ಮತ್ತು ಇತರ 7 ಜನರು ಸೇರಿಕೊಂಡು ಹಳೆ ವೈಷಮ್ಯದ ಕಾರಣಕ್ಕೆ ಪುನೀತ್‌, ಗೌರಮ್ಮ ಮತ್ತು ಮಹೇಶ್‌ ಎಂಬವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ
                        ದಿನಾಂಕ 07/05/2017ರಂದು ಸೋಮವಾರಪೇಟೆ ಬಳಿಯ ಹರಗ ನಿವಾಸಿ ರಮೇಶ ಎಂಬವರು ಚಂದಾನಿ ಬಾಣೆ ಎಂಬಲ್ಲಿ ಮದುವೆಗೆ ಹೋಗಿ ವಾಪಾಸು ಅವರ ಸ್ಕೂಟರ್ ಸಂಖ್ಯೆ ಕೆಎ-12-ಜೆ-8436ರಲ್ಲಿ ಬರುತ್ತಿರುವಾಗ ತಾಕೇರಿ ಗ್ರಾಮದ ಅಂಚೆ ಕಚೇರಿ ಬಳಿ ಯಾವುದೋ ಒಂದು ವಾಹನ ರಮೇಶರವರ ಸ್ಕೂಟರ್‌ಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಡಿಕ್ಕಿಯಾದ ಪರಿಣಾಮ ತೀವ್ರವಾಘಿ ಗಾಯಗೊಂಡ ರಮೇಶರವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                        ದಿನಾಂಕ  07/05/2017ರಂದು ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ಆಲೆಕಟ್ಟೆ ರಸ್ತೆ ನಿವಾಸಿ ಭಾಗ್ಯಲಕ್ಷ್ಮಿ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ರಸ್ತೆಯಲ್ಲಿರುವ ಸಾರ್ವಜನಿಕ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಜನವರಿ ತಿಂಗಳಿನಲ್ಲಿ ಅವರ ಒಬ್ಬನೇ ಮಗ ರಂಜಿತ್‌ ಎಂಬಾತನು  ಜಾಂಡೀಸ್‌ ಕಾಯಿಲೆಯಿಂದ ಮೃತನಾದ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                       ದಿನಾಂಕ 07/05/2017ರಂದು ಯಸಳೂರು ಹೋಬಳಿಯ ಹೊಸೂರು ಗ್ರಾಮದ ನಿವಾಸಿ ಜಗದೀಶ ಎಂಬವರು ಶನಿವಾರಂಸತೆ ನಗರಕ್ಕೆ ಬಂದು ನಗರದ ಯಶಸ್ವಿ ಕಲ್ಯಾಣ ಮಂಟಪದ ಬಳಿ ಇರುವ ಹೋಟೆಲ್‌ ಒಂದರಲ್ಲಿ ಊಟ ಮಾಡುತ್ತಿರುವಾಗ ಶನಿವಾರಸಂತೆ ನಗರದ ನಿವಾಸಿ ಜೀವ ಯಾನೆ ಬೋಟಿ ಎಂಬಾತನು ಬಂದು ಮೇಜಿನ ಮೇಲಿದ್ದ ಜಗದೀಶರವರ ಮೊಬೈಲ್‌ ಫೋನನ್ನು ತೆಗೆದುಕೊಂಡ ಬಗ್ಗೆ ಕೇಳಿದ ಕಾರಣಕ್ಕೆ ಜೀವ ಯಾನೆ ಬೋಟಿಯು ಜಗದೀಶರವರ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.