Thursday, May 11, 2017


ಪತ್ರಿಕಾ ಪ್ರಕಟಣೆ
ನಾಗರಿಕ ಬಂದೂಕು ತರಬೇತಿ ಶಿಬಿರ
ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್‌ ನ ಆರ್‌ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ : ರೂ.10
ಸಂಪರ್ಕ ಸಂಖ್ಯೆ : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು : ಶ್ರೀ ತಿಮ್ಮಪ್ಪ, ಪೊಲೀಸ್‌ ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್‌ಪೋರ್ಟ್‌ ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 
ಅಕ್ರಮ ಮದ್ಯ ವಶ
                       ದಿನಾಂಕ 10/05/2017ರಂದು ಕುಶಾಲನಗರ ಗ್ರಾಮಾಂತರ ಠಾಣಾ ಪಿಎಸ್‌ಐ ಜೆ.ಇ.ಮಹೇಶ್‌ರವರು ಬ್ಯಾಡಗೊಟ್ಟ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಬ್ಯಾಡಗೊಟ್ಟ ಗ್ರಾಮದಲ್ಲಿರುವ ನಿರಾಶ್ರಿತರ ಶಿಬಿರದ ಬಳಿ ಅದೇ ಗ್ರಾಮದ ನಿವಾಸಿ ಎಂ.ಟಿ.ಜೀವನ್‌ ಎಂಬಾತನು ಅನುಮಾನಾಸ್ಪದವಾಗಿ ನಿಂತಿದ್ದು ಆತನನ್ನು ಪರಿಶೀಲಿಸಿದಾಗ ಆತನ ಬಳಿ ಸುಮಾರು ರೂ.  1008 ಮೌಲ್ಯದ ಅಕ್ರಮ ಮದ್ಯವು ಪತ್ತೆಯಾಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಯುವಕ ಆತ್ಮಹತ್ಯೆ
                      ದಿನಾಂಕ 10/05/2017ರಂದು ಶನಿವಾರಸಂತೆ ಬಳಿಯ ಮಾದೇಗೋಡು ನಿವಾಸಿ ಜಯಪ್ಪ ಎಂಬವರು ಪತ್ನಿಯೊಂದಿಗೆ ಶನಿವಾರಸಂತೆ ನಗರಕ್ಕೆ ಹೋಗಿದ್ದಾಗ ಮನೆಯಲ್ಲಿ ಅವರ ಮಗ ಎಂ.ಜೆ.ನವೀನ ಎಂಬಾತನು ಸೀರೆಯಿಂದ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ನವೀನನು ಸುಮಾರು 2 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ, ಕೊಲೆ ಯತ್ನ 
                        ದಿನಾಂಕ 10/05/2017ರಂದು ಶ್ರೀಮಂಗಲ ಬಳಿಯ ಕೋಣಗೇರಿ ನಿವಾಸಿ ಅಜ್ಜಿಕುಟ್ಟಿರ ಗಿರೀಶ ಎಂಬವರು ಅವರು ಶುಂಠಿ ಕೃಷಿ ಮಾಡಿದ್ದ ಹೊಲಕ್ಕೆ ಭೇಟಿ ನೀಡಿ ಕೆಎ-12-ಪಿ-774 ರ ಕಾರಿನಲ್ಲಿ ಮರಳಿ ಅವರ ಮನೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಅಜ್ಜಿಕುಟ್ಟಿರ ಉತ್ತಪ್ಪ, ರಾಕೇಶ್‌ ಮತ್ತು ರೋಷನ್‌ ಎಂಬವರು ಜೀಪಿನಲ್ಲಿ ಬಂದು ಗಿರೀಶ್‌ರವರನ್ನು ಅಡ್ಡಗಟ್ಟಿ ಹಳೆಯ ವೈಷಮ್ಯದಿಂದ ಜಗಳವಾಡಿ ಗಿರೀಸ್‌ರವರ ಮೇಲೆ ಕತ್ತಿ ಮತ್ತು ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಬೈಕು ಡಿಕ್ಕಿ
                      ದಿನಾಂಕ 10/052017ರಂದು ಅಣ್ಣಪ್ಪ ಎಂಬವರು ಕೆಎ-19-ಎಡಿ-1111ರ ಬಸ್ಸನ್ನು ಮಡಿಕೇರಿಯಿಂದ ಬಿಳಿಗೇರಿ ಕಡೆಗೆ ಚಾಲಿಸಿಕೊಂಡು ಹೋಗುತ್ತಿರುವಾಗ ಮೇಕೇರಿ ಬಳಿ ಎದುರುಗಡೆಯಿಂದ ರಜೀಶ್‌ ಎಂಬಾತನು ಕೆಎ-19-ಇಎ-2216ರ ಮೋಟಾರು ಸೈಕಲನ್ನು ಅತಿ ವೇಗ ಮತ್ತು ಆಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಆತನು ತೀವ್ರತರವಾಗಿ ಗಾಯಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.