Wednesday, May 17, 2017

ಅನುಮಾನಾಸ್ಪದ ವ್ಯಕ್ತಿಯ ಬಂಧನ

                   ದಿನಾಂಕ 16-05-2017 ರಂದು ಮಡಿಕೇರಿ ನಗರ ಠಾಣೆಯ ಸಿಬ್ಬಂದಿಯವರಾದ  ಸುಬ್ಬಯ್ಯ ಮತ್ತು ಮಧುಸೂದನ್ ರವರು ಅಪರಾಧ ಪತ್ತೆ ಕರ್ತವ್ಯದ ಸಂಬಂದ  ಮಡಿಕೇರಿ ನಗರದಲ್ಲಿ ಸಂಚರಿಸಿಕೊಂಡಿರುವಾಗ್ಗೆ ಮಡಿಕೇರಿ ನಗರದ ಕೊಹಿನೂರು ರಸ್ತೆಯ ಕೂರ್ಗ್ ಫುಡ್ ಹೋಟೆಲ್ ಹತ್ತಿರ ಜಾರ್ಖಂಡ್ ರಾಜ್ಯದ, ಸಾಬೇರ ಗ್ರಾಮದ ನಿವಾಸಿ ತರುಣ್ ಎಂಬುವವರು ಸಂಶಯಾಸ್ಪದವಾಗಿ ಸುತ್ತಾಡಿಕೊಂಡಿರುವುದು ಕಂಡುಬಂದು ಆತನನ್ನು ವಿಚಾರಮಾಡಿದಾದ ಸಮರ್ಪಕವಾದ ಉತ್ತರ ನೀಡದೇ ಇದ್ದು ಯಾವುದೋ ಕೃತ್ಯ ಎಸಗುವ ಸಂಭವವಿರುವುದಾಗಿ ಠಾಣೆಗೆ ಹಾಜರುಪಡಿಸಿದ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವ್ಯಕ್ತಿಯ ಮೇಲೆ ಹಲ್ಲೆ

                        ಹಣದ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ. ವಿರಾಜಪೇಟೆ ನಗರದ ನಿವಾಸಿಯಾದ ಹ್ಯಾರಿಸ್ ಎಂಬುವವರು ದಿನಾಂಕ 16-5-2017 ರಂದು ನೆಲ್ಲಿ ಹುದಿಕೇರಿಯ ಕಾರ್ನರ್ ಕೆಫೆಯಲ್ಲಿ ಕೆಲಸ ಮುಗಿಸಿ ವಿರಾಜಪೇಟೆಗೆ ತೆರಳಲು ಬಸ್ಸು ನಿಲ್ದಾಣದಲ್ಲಿ ನಿಂತಿರುವಾಗ ಗೂಡುಗದ್ದೆಯ ನಿವಾಸಿ ಸೂರಿ ಎಂಬುವವರು ಹಣದ ವಿಚಾರದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.