ಬೈಕು ಮಗುಚಿ ಗಾಯ
ದಿನಾಂಕ 21/05/2017 ರಂದು ಹುಣಸೂರು ನಿವಾಸಿ ಸಂದೇಶ್ ಮತ್ತು ಅವರ ಸ್ನೇಹಿತರು ಕಾಲೇಜಿಗೆ ರಜೆ ಇದ್ದ ಕಾರಣ ಬೈಕ್ ನಲ್ಲಿ ಹುಣಸೂರಿನಿಂದ ಸಂದೇಶ್ರವರ ತೋಟದ ಮನೆ ಇರುವ ಬೆಕ್ಕೆಸೊಡ್ಲೂರಿಗೆ ಹೋಗಿ ಅಲ್ಲೇ ಇದ್ದು ದಿನಾಂಕ 22/05/2017 ರಂದು ಬೆಳಗಿನ ಜಾವಸ್ನೇಹಿತರೊಂದಿಗೆ ಮೈಸೂರಿಗೆ ಬೈಕ್ ನಲ್ಲಿ ಹೋಗುತ್ತಿರುವಾಗ ಸಂದೇಶ್ನ ಸ್ನೇಹಿತ ಕೀರ್ತಿ ಎಂಬುವವನು ಕೆಎ-09-ಹೆಚ್ ಎಪ್ 08- ರ ಬೈಕಿನಲ್ಲಿ ಒಬ್ಬನೇ ಹೋಗುತ್ತಿದ್ದು ಗೋಣಿಕೊಪ್ಪದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ತನ್ನ ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಬಲ ಬದಿಗೆ ಆಯ ತಪ್ಪಿ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ದಿನಾಂಕ 21/05/2017 ರಂದು ಹುಣಸೂರು ನಿವಾಸಿ ಸಂದೇಶ್ ಮತ್ತು ಅವರ ಸ್ನೇಹಿತರು ಕಾಲೇಜಿಗೆ ರಜೆ ಇದ್ದ ಕಾರಣ ಬೈಕ್ ನಲ್ಲಿ ಹುಣಸೂರಿನಿಂದ ಸಂದೇಶ್ರವರ ತೋಟದ ಮನೆ ಇರುವ ಬೆಕ್ಕೆಸೊಡ್ಲೂರಿಗೆ ಹೋಗಿ ಅಲ್ಲೇ ಇದ್ದು ದಿನಾಂಕ 22/05/2017 ರಂದು ಬೆಳಗಿನ ಜಾವಸ್ನೇಹಿತರೊಂದಿಗೆ ಮೈಸೂರಿಗೆ ಬೈಕ್ ನಲ್ಲಿ ಹೋಗುತ್ತಿರುವಾಗ ಸಂದೇಶ್ನ ಸ್ನೇಹಿತ ಕೀರ್ತಿ ಎಂಬುವವನು ಕೆಎ-09-ಹೆಚ್ ಎಪ್ 08- ರ ಬೈಕಿನಲ್ಲಿ ಒಬ್ಬನೇ ಹೋಗುತ್ತಿದ್ದು ಗೋಣಿಕೊಪ್ಪದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ತನ್ನ ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಬಲ ಬದಿಗೆ ಆಯ ತಪ್ಪಿ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪಾದಚಾರಿಗೆ ಕಾರು ಡಿಕ್ಕಿ
ದಿನಾಂಕ 22/05/2017 ರಂದು ಸಂಜೆ ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ಜವರ, ಅವರ ತಂದೆ ಮುತ್ತ ಹಾಗೂ ಭಾವ ರಾಜು ರವರು ಅತ್ತೂರು ಗ್ರಾಮದ ನ್ಯಾಯಬೆಲೆ ಅಂಗಡಿಗೆ ಹೋಗಿ ವಾಪಾಸ್ಸು ನಡೆದುಕೊಂಡು ಹೋಗುತ್ತಿರುವಾಗ ಅಮ್ಮಣಿಚಂಡ ಬಿ ಅಜಿತ್ ತೋಟದ ಹತ್ತಿರ ರಸ್ತೆಯಲ್ಲಿ ಕೆಎ12-ಜೆಡ್-8835 ರ ಕಾರಿನ ಚಾಲಕ ಕುಪ್ಪಂಡ ಟೌವ್ ಉತ್ತಪ್ಪ ಎಂಬಾತನು ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಜವರರವರ ತಂದೆ ಮುತ್ತರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮುತ್ತರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಕಲಿ ಬಿಲ್, ಭಾರಿ ವಂಚನೆ
ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿರುವ ಎ.ಪಿ.ಸಿ.ಎಂ.ಎಸ್ ಸೊಸೈಟಿಯಲ್ಲಿ ದಿನಾಂಕ 01-04-2013 ರಿಂದ 23-09-2016 ರ ವರೆಗೆ ಗುಮಾಸ್ತನಾಗಿದ್ದ ಎಂ.ಯು ಅಚ್ಚಯ್ಯ ನವರು ಸಂಘದ ಗೊಬ್ಬರ ಶಾಖೆಗೆ ಹಾಗೂ ಹತ್ಯಾರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಗೊಬ್ಬರದ ಹಣವನ್ನು ನಕಲು ಬಿಲ್ ಸೃಷ್ಠಿಸಿ ಮೂಲ ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಕಡಿತಗೊಳಿಸಿ ದೈನಂದಿನ ಹಣವನ್ನು ಸಂಘಕ್ಕೆ ಜಮಾ ಮಾಡದೇ ಒಟ್ಟು ಅಂದಾಜು 66,77, 000=00(ಅರವತ್ತಾರು ಲಕ್ಷದ ಎಪ್ಪತ್ತೇಳು ಸಾವಿರ) ರೂಪಾಯಿಯಷ್ಟು ದುರುಪಯೋಗಪಡಿಸಿಕೊಂಡು ಎ.ಪಿ.ಸಿ.ಎಂ.ಎಸ್. ಸೊಸೈಟಿಗೆ ಮೋಸ ಮಾಡಿರುವುದಾಗಿ ಸಂಘದ ಅಧ್ಯಕ್ಷ ಅಯ್ಯಣ್ಣ ಎಂಬವರು ನೀಡಿದ ದೂರಿನ ಮೇರೆಗ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕರಿಮೆಣಸು ಕಳವು
ದಿನಾಂಕ: 20-05-2017 ಹಾಗೂ 21-05-2017 ರ ನಡುವೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಬೇಗೂರು ನಾಣಚ್ಚಿ ಗ್ರಾಮದಲ್ಲಿರುವ ಆನಂದ್ ಪ್ರಹ್ಲಾದ್ ಎಂಬವರ ಉಗ್ರಾಣಕ್ಕೆ ಯಾರೋ ಕಳ್ಳರು ಗೋಡಾನ್ ನ ಮೇಲ್ಚಾವಣೆಗೆ ಅಳವಡಿಸಿದ್ದ ಶೀಟನ್ನು ತೆಗೆದು ಗೋಡಾನ್ ಒಳನುಗ್ಗಿ ಅಲ್ಲಿ ತುಂಬಿಸಿಟ್ಟಿದ್ದ ಕರಿಮೆಣಸು ಪೈಕಿ ಎರಡು ಚೀಲದಲ್ಲಿ ತುಂಬಿಸಿಟ್ಟಿದ್ದ ಸುಮಾರು ರೂ 24,000/- ಮೌಲ್ಯದ 50 ಕೆ.ಜಿ.ಯಷ್ಟು ಒಣಗಿದ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹತ್ಯೆ
ದಿನಾಂಕ 21/05/2017ರಂದು ಪೊನ್ನಂಪೇಟೆ ಬಳಿಯ ದೇವರಪುರ ನಿವಾಸಿ ಮಹದೇವ ಎಂಬಾತನು ರಾತ್ರಿ ವೇಳೆ ತನ್ನ ಪತ್ನಿ ಮಲ್ಲಿಗಾರವರ ಮೇಲೆ ಮದ್ಯಪಾನ ಮಾಡಲು ಹಣ ನೀಡದ ಕಾರಣಕ್ಕೆ ಜಗಳವಾಡಿ ಸೌದೆ ತುಂಡಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದು ಮಲ್ಲಿಗಾರವರು ಮೃತರಾಗಿರುವುದಾಗಿ ಮಹೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಲಾರಿ ಡಿಕ್ಕಿ, ಸಾವು
ದಿನಾಂಕ 22/5/17 ರಂದು ಶಿರಂಗಾಲ ನಿವಾಸಿ ಅಮಿತ್ ಎಂಬವರು ಅವರ ತಂದೆ ಧರ್ಮಪ್ಪ ರವರೊಂದಿಗೆ ಕೆಎ 12 ಕೆ 3589 ರ ಬೈಕ್ ನಲ್ಲಿ ಕುಶಾಲನಗರಕ್ಕೆ ಬಂದು ಹೊಲ ಬಿತ್ತನೆ ಮಾಡಲು ಜೋಳ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಶಿರಂಗಾಲಕ್ಕೆ ವಾಪಾಸ್ಸು ಹೋಗುತ್ತಿರುವಾಗ ಕಣಿವೆ ಗಾಮದಲ್ಲಿರುವ ಸರ್ಕಾರಿ ಶಾಲೆಯ ಹತ್ತಿರ ಎದುರುಗಡೆಯಿಂದ ಬಂದ ಕೆಎ 12 8488 ರ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಧರ್ಮಪ್ಪನವರು ಚಾಲನೆ ಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಧರ್ಮಪ್ಪನವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಆಸ್ಪತ್ರೆಗೆ ಕಳುಹಿಸಿದ್ದು ಧರ್ಮಪ್ಪನವರು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿಯ ಮೇಲೆ ಹಲ್ಲೆ
ದಿನಾಂಕ 22/05/2017ರಂದು ಸೋಮವಾರಪೇಟೆ ಬಳಿಯ ಹೊನ್ನವಳ್ಳಿ ನಿವಾಸಿ ಲಕ್ಷ್ಮಯ್ಯ ಎಂಬವರು ದನಗಳನ್ನು ಹೊಡೆದುಕೊಂಡು ಮನೆಯ ಕಡೆ ಬರುತ್ತಿರುವಾಗ ಅದೇ ಗ್ರಾಮದ ನಿವಾಸಿ ಮಂಜುನಾಥ ಎಂಬವರು ಬಂದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಲಕ್ಷ್ಮಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಯುವಕನ ಮೇಲೆ ಹಲ್ಲೆ
ದಿನಾಂಕ 22/05/2017ರಂದು ಸುಂಟಿಕೊಪ್ಪ ನಗರದ ಮಧುರಮ್ಮ ಬಡಾವಣೆ ನಿವಾಸಿ ಪಾಂಡ್ಯನ್ ಎಂಬವರು ಅವರ ಮನೆಯ ಪಕ್ಕದ ರಸ್ತೆಯಲ್ಲಿ ನಿಂತಿದ್ದಾಗ ಜಯೇಂದ್ರ ಎಂಬವರು ಅವರ ಜೀಪನ್ನು ಚಾಲಿಸಿಕೊಂಡು ಬಂದಾಗ ಪಾಂಡ್ಯನ್ರವರು ಜೀಪನ್ನು ನಿಧಾನಕ್ಕೆ ಚಾಳಿಸುವಂತೆ ಹೇಳಿದ ಕಾರಣಕ್ಕೆ ಜಯೇಂದ್ರ ಮತ್ತು ಹರ್ಷ ಎಂಬವರು ಸೇರಿಕೊಂಡು ಪಾಂಡ್ಯನ್ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.