Saturday, May 20, 2017

ಪತ್ರಿಕಾ ಪ್ರಕಟಣೆ: 
        ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರೀಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ದಿ:22.05.2017 ರಿಂದ 27.05.2017ರವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ದಿ:22.05.2017ರಂದು ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನಾ ಸಮಾರಂಭವನ್ನು ಮಡಿಕೇರಿ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಕೊಡಗು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರು ಉದ್ಘಾಟಿಸಲಿದ್ದು, ಈ ತರಬೇತಿಗೆ ಮಡಿಕೇರಿ ತಾಲ್ಲೂಕಿನ 18 ಮಂದಿ, ಸೋಮವಾರಪೇಟೆ ತಾಲ್ಲೂಕಿನ 12 ಮಂದಿ ಮತ್ತು ವಿರಾಜಪೇಟೆ ತಾಲ್ಲೂಕಿನ 03 ಮಂದಿ ಅಭ್ಯರ್ಥಿಗಳು ಸೇರಿ ಒಟ್ಟು 27 ಮಂದಿ ಪುರುಷರು ಹಾಗು 06 ಮಂದಿ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವ್ಯಕ್ತಿಯ ಆತ್ಮ ಹತ್ಯೆ
      ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಬಾಡಗ ಎಂಬಲ್ಲಿ ವರದಿಯಾಗಿದೆ. ಬಾಡಗ ಗ್ರಾಮದ ಮುಕ್ಕಾಟಿರ ಉತ್ತಯ್ಯ ನವರ ಲೈನ್ ಮನೆಯಲ್ಲಿ ವಾಸವಿದ್ದ ಶಂಕರ ಎಂಬುವವರು ದಿನಾಂಕ 18-5-2017 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಂಗಡಿಗೆ ನುಗ್ಗಿ ನಗದು ಕಳವು:   
 
ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎನ್.ಹೆಚ್.ರಿಯಾಜ್ ಎಂಬವರ ಅಂಗಡಿಯ ರೋಲಿಂಗ್ ಶೆಟ್ಟರ್ಸ್ ನ್ನು ಮೇಲಕ್ಕೆತ್ತಿ ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾಯರ್ ನಿಂದ 2000 ರೂ. ನಗದು ಮತ್ತು 2000 ರೂ. ಮೌಲ್ಯದ ಸಿಗರೇಟನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲದೆ ಅದೇ ಕಟ್ಟಡದ ಮೇಲ್ಬಾಗದಲ್ಲಿರುವ ನವರತ್ನ ಜ್ಯುವೆಲ್ಲರಿಯ ರೋಲಿಂಗ್ ಶೆಟ್ಟರ್ಸ್ ನ್ನು ಯಾವುದೋ ಆಯುಧದಿಂದ ಮೇಲೆಕ್ಕೆತ್ತಿ ಕಳ್ಳತನ ಮಾಡಲು ಯತ್ನಿಸಿದ್ದು ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವೈನ್  ಅಂಗಡಿ ಕಳವು:
     ವೈನ್ ಅಂಗಡಿಗೆ ಕಳ್ಳರು ನುಗ್ಗಿ ನಗದು ಕಳ್ಳತನ ಮಾಡಿದ ಘಟನೆ ಸಿದ್ದಾಪುರ ನಗರದಲ್ಲಿ ನಡೆದಿದೆ. ಸಿದ್ದಾಪುರ ನಗರದ ನಿವಾಸಿ ಅಜಯ್ ಕುಮಾರ್ ಎಂಬವರಿಗೆ ಸೇರಿದ ಬ್ರಾಂಡಿ ಅಂಗಡಿಗೆ ದಿನಾಂಕ 18-5-2017 ರಂದು ರಾತ್ರಿ ನುಗ್ಗಿದ ಕಳ್ಳರು ಡ್ರಾಯರ್ ನಿಂದ 75,000 ರೂ. ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂಗಡಿ ಮಾಲಿಕ ಅಜಯ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ ಬೈಕ್ ಸವಾರ ಸಾವು:
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಜೋಡುಪಾಲ – ಮದೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎನ್.ಎಲ್. 02 ಎನ್ -8309 ನಂಬರಿನ ಕಂಟೈನರ್ ಲಾರಿಯೊಂದು ಕೆಎ-21 ಆರ್-5429 ರ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸುಳ್ಯ ತಾಲೋಕಿನ ಆಲಟ್ಟಿ ಗ್ರಾಮದ ನಿವಾಸಿ ಜಯರಾಮ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸಿ.ಎ. ಮಹಮ್ಮದ್ ಮನ್ಸೂರ್ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.