Monday, May 1, 2017

ಬೈಕಿಗೆ ಕಾರು ಡಿಕ್ಕಿ
                      ದಿನಾಂಕ 29/04/2017ರಂದು ಮಾದಾಪುರ ನಿವಾಸಿ ಸತೀಶ್‌ ಎಂಬವರು ಅವರ ಸ್ನೇಹಿತ ವಸಂತ ಎಂಬವರೊಂದಿಗೆ ವಸಂತರವರ ಮೋಟಾರು ಬೈಕಿನಲ್ಲಿ ಸುಂಟಿಕೊಪ್ಪ ನಗರದಲ್ಲಿ ಹೋಗುತ್ತಿರುವಾಗ ನಗರದ ಕೆಇಬಿ ಬಳಿ ಎದುರುಗಡೆಯಿಂದ ಕೆಎ-05-ಎಂಡಿ-258ರ ಕಾರನ್ನು ಅದರ ಚಾಲಕ ಹೆಚ್‌.ಟಿ.ಪಾಪು  ಎಂಬವರು ಕಾರನ್ನು ಅಜಾಗರೂಕತೆಯಿಂದ ಚಾಲಿಸಿಕೊಂಢು ಬಂದು ಯಾವುದೇ ಮುನ್ಸೂಚನೆ ನೀಡದೆ ಏಕಾ ಏಕಿ ಕಾರನ್ನು ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಕಾರು ಸತೀಶ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಗಿ ಸತೀಶ್‌ ಹಾಗೂ ಬೈಕ್ ಚಾಲಕ ವಸಂತರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್ ಡಿಕ್ಕಿ
                      ದಿನಾಂಕ 30/04/2017ರಂದು ಕುಶಾಲನಗರ ಬಳಿಯ ಹೆಬ್ಬಾಲೆಯ ನಿವಾಸಿ ರಾಜಶೇಖರ ಎಂಬವರು ಬೈಕಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎ-03-ಇಪಿ-1919ರ ಬೈಕನ್ನು ಅದರ ಸವಾರನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜಶೇಖರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ರಾಜಶೇಖರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪಿಗೆ ಕಾರು ಡಿಕ್ಕಿ
                        ದಿನಾಂಕ 30/04/2017ರಂದು ತಮಿಳುನಾಡಿನ ಅರವಿಂದನ್ ಶಿವಶೇಖರ್‌ ಎಂಬವರು ಅವರ ಜೀಪು ಸಂಖ್ಯೆ ಟಿಎನ್‌-12-ಎಎ-0001ರಲ್ಲಿ ಶ್ರದ್ದನ್ ಮತ್ತು  ಪ್ರಶಾಂತ್‌ ರೆಡ್ಡಿ ಎಂಬವರೊಂದಿಗೆ ಪಾಲಿಬೆಟ್ಟ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿರುವಾಗ  ವಡ್ಡರಮಾಡು ತೋಟದ ಬಳಿ ಎದುರುಗಡೆಯಿಂದ ಕೆಎ-01-ಎಂಇ-7183 ರ ಸ್ಯಾಂಟ್ರೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಸುಮಾರು ಐವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ
                           ದಿನಾಂಕ 30/04/2017ರಂದು ಪಾಂಡಿಚೇರಿ ನಿವಾಸಿ ಆರ್‌ ಐರಂಗೋ ಎಂಬವರು ಅವರ ಪತ್ನಿ ಶಕೀಲಾ ಎಂಬವರೊಂದಿಗೆ ಅವರ ಕಾರು ಸಂಖ್ಯೆ ಪಿವೈ-01-ಬಿಡಿ-3735ರಲ್ಲಿ ಮಡಿಕೇರಿಯ ಅಬ್ಬಿ ಜಲಪಾತ ವೀಕ್ಷಣೆಗೆಂದು ಬಂದು ಮರಳಿ ಕಾರಿನಲ್ಲಿ ಮಡಿಕೇರಿಗೆ ಬರುತ್ತಿರುವಾಗ ಅಬ್ಬಿ ಜಲಪಾತದ ಬಳಿಯ ರಸ್ತೆಯಲ್ಲಿ ಮಡಿಕೇರಿ ಕಡೆಯಿಂದ ಕೆಎಲ್- 07-ಬಿಕೆ-4182ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಐರಂಗೋರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.