Wednesday, May 10, 2017

ಪತ್ರಿಕಾ ಪ್ರಕಟಣೆ 
ನಾಗರಿಕ ಬಂದೂಕು ತರಬೇತಿ ಶಿಬಿರ:
    ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್ ಆರ್ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ                      : ರೂ.10
ಸಂಪರ್ಕ ಸಂಖ್ಯೆ                : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು     : ಶ್ರೀ ತಿಮ್ಮಪ್ಪ, ಪೊಲೀಸ್ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ           : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್ಪೋರ್ಟ್ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
----- ------

ವ್ಯಕ್ತಿಯ ಆತ್ಮಹತ್ಯೆ:
     ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದಲ್ಲಿ ನಡೆದಿದೆ. ಹೈಸೊಡ್ಲೂರು ಗ್ರಾಮದ ಬಯವಂಡ ಕಿಶೋರ್ ರವರ ಲೈನ್ ಮನೆಯಲ್ಲಿ ವಾಸವಿರುವ ಚಂದನ್ ಎಂಬುವವರು ದಿನಾಂಕ 8-5-2017 ರಂದು ರಾತ್ರಿ ವಿಪರೀತ ಮದ್ಯಪಾನ ಮಾಡಿ ಮನೆಯ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಅವರ ಪತ್ನಿ ಪಣಿಎರವರ ಚಿಟ್ಟೆರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಅಪಘಾತ ವ್ಯಕ್ತಿಯ ದುರ್ಮರಣ:
            
      ಬೈಕ್ ಅಪಘಾತಗೊಂಡು ವ್ಯಕ್ತಿಯೊಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡ ಘಟನೆ ಪೊನ್ನಂಪೇಟೆ ನಗರದಲ್ಲಿ ವರದಿಯಾಗಿದೆ. ದಿನಾಂಕ 8-5-2017 ರಂದು ರಾತ್ರಿ ಹಾತೂರು ಗ್ರಾಮದ ನಿವಾಸಿ ಕೌಶಿಕ್ ಮುತ್ತಪ್ಪನವರು ಸ್ನೇಹಿತ ವಿಷ್ಣು ಸಾಯಲ್ ರವರೊಂದಿಗೆ ಮೋಟಾರು ಸೈಕಲ್ ನಲ್ಲಿ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಹೋಗುತ್ತಿರುವಾಗ ವಿಷ್ಣು ಸಾಯಲ್ ರವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಪರಿಣಾಮ ಇಬ್ಬರೂ ಮೋಟಾರು ಸೈಕಲಿನಿಂದ ಬಿದ್ದು ಗಾಯಗೊಂಡಿದ್ದು, ಗಾಯಗೊಂಡಿದ್ದ ಕೌಶಿಕ್ ರವರು ಮೃತಪಟ್ಟಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಕಾರು ಡಿಕ್ಕಿ:

       ಮೋಟಾರು ಸೈಕಲಿಗೆ ಕಾರು ಡಿಕ್ಕಿಪಡಿಸಿ ನಿಲ್ಲಿಸದೇ ಹೋದ ಘಟನೆ ಪೊನ್ನಂಪೇಟೆ ನಗರದಿಂದ ವರದಿಯಾಗಿದೆ. ದಿನಾಂಕ 8-7-2017 ರಂದು ಕೋಣಗೇರಿ ಗ್ರಾಮದ ನಿವಾಸಿಯಾದ ಕುಶಾಲಪ್ಪನವರು ಗೋಣಿಕೊಪ್ಪಲುವಿನಿಂದ ಹೋಗುತ್ತಿರುವಾಗ ಪೊನ್ನಂಪೇಟೆ ನಗರಕ್ಕೆ ತಲುಪುವಾಗ ಎದುರುಗಡೆಯಿಂದ ಕೆಎ-05-ಎಂ-9678 ರ ಮಾರುತಿ 800 ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಕುಶಾಲಪ್ಪನವರಿಗೆ ಗಾಯವಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಕಲಿ ದಾಖಲೆ ಸೃಷ್ಠಿಸಿ ವಂಚನೆಗೆ ಯತ್ನ:

     ಸೋಮವಾರಪೇಟೆ ತಾಲೋಕಿನ ಈರಳವಳಮುಡಿ ಗ್ರಾಮದ ನಿವಾಸಿ ಶ್ರೀಮತಿ ಸಿ.ಡಿ. ಬೋಜಮ್ಮ ರವರ ಪತಿ ಚೆಂಗಪ್ಪ ಬಿ.ಕೆ ರವರು ಬಿ.ಎಸ್‌.ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ದಿನಾಂಕ 01-04-2002 ನಿವೃತ್ತಿ ಪಡೆದುಕೊಂಡಿದ್ದು ನಂತರ ದಿನಾಂಕ 30-07-2014 ರಂದು ಸದರಿಯವರು ನಿಧನರಾಗಿದ್ದು, ಇವರು ಭಾರತೀಯ ಸ್ಟೇಟ್‌ ಬ್ಯಾಂಕಿನಲ್ಲಿ ಪೆನ್‌ಷನ್‌ ಪಡೆಯುತ್ತಿದ್ದರು. ಇವರು ನಿಧನರಾದ ನಂತರ ಸದರಿ ಬಿ.ಕೆ. ಚೆಂಗಪ್ಪನವರ ಸಹೋದರಿ ಪಾರ್ವತಿ ಎಂಬವರು ಗ್ರಾಮ ಲೆಕ್ಕಾಧಿಕಾರಿ ರಾಮಯ್ಯ ಎಂಬವರೊಂದಿಗೆ ಶಾಮೀಲಾಗಿ ನಿವೃತ್ತಿ ವೇತನವನ್ನು ಪಡೆಯುವ ದುರುದ್ದೇಶದಿಂದ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಗಡಿಭದ್ರತಾ ಪಡೆಗೆ ಸಲ್ಲಿಸುವ ಮೂಲಕ ನಿವೃತ್ತಿ ವೇನತ ಪಡೆಯಲು ಯತ್ನಿಸಿದ್ದು, ಈ ವಿಚಾರವು ಮೃತ ಬಿ.ಕೆ. ಚಂಗಪ್ಪನವರ ಪತ್ನಿ ಶ್ರೀಮತಿ ಸಿ.ಬಿ. ಬೋಜಮ್ಮನವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಮಾಹಿತಿ ಲಭ್ಯವಾಗಿ, ಸದರಿ ವಂಚನೆಯ ಬಗ್ಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
      ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 9-5-2017 ರಂದು ಹೆಗ್ಗಳ ಗ್ರಾಮದ ನಿವಾಸಿ ಮಂಜುನಾಥರವರು ಹರೀಶ ಮತ್ತು ಪ್ರಕಾಶರವರೊಂದಿಗೆ ಕದನೂರುನಲ್ಲಿರುವ ಹೊಟೆಲ್ ನ ಮುಂದುಗಡೆ ನಿಂತುಕೊಂಡಿರುವಾಗ ಕದನೂರು ಗ್ರಾಮದ ನಿವಾಸಿಗಳಾದ ಶಿಜು, ಶ್ರೀಜಿತ್ ಮತ್ತು ಬಾಬುರವರು ಅಲ್ಲಿಗೆ ಹೋಗಿದ್ದು, ಅವರುಗಳ ನಡುವೆ ಮರ ಸಾಗಾಟ ಮಾಡುವ ಮತ್ತು ಲಾರಿಯ ವಿಚಾರದಲ್ಲಿ ಜಗಳ ಏರ್ಪಟ್ಟು, ಉಭಯ ಕಡೆಯ ದೂರುಗಳ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.