Friday, May 12, 2017

  ಪತ್ರಿಕಾ ಪ್ರಕಟಣೆ 
ನಾಗರಿಕ ಬಂದೂಕು ತರಬೇತಿ ಶಿಬಿರ:
    ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್ ಆರ್ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ                      : ರೂ.10
ಸಂಪರ್ಕ ಸಂಖ್ಯೆ                : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು     : ಶ್ರೀ ತಿಮ್ಮಪ್ಪ, ಪೊಲೀಸ್ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ           : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್ಪೋರ್ಟ್ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

 -                  -                      -                        -                     -                     -
ಬಸ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ:

      ಮೋಟಾರ್ ಸೈಕಲಿಗೆ ಬಸ್ಸೊಂದು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಹಾಕತ್ತೂರು ಗ್ರಾಮದ ನಿವಾಸಿ ಎಂ.ಎನ್. ಕಿರಣ್ ರವರ ಚಿಕ್ಕಮ್ಮನ ಮಗ ರಜೀಶನು ದಿನಾಂಕ 10-05-2017 ರಂದು ಕೆಎ-19-ಇಎ-2216 ರ ಮೋಟಾರ್ ಬೈಕ್ ನಲ್ಲಿ ಹಾಕತ್ತೂರಿನಿಂದ ಮೇಕೇರಿ ಕಡೆಗೆ ಹೋಗುತ್ತಿರುವಾಗ ಮೇಕೇರಿ ಗ್ರಾಮದ ಕೆ. ಬೆಳ್ಳಪ್ಪ ಎಂಬವರ ಮನೆಯ ಮುಂದಿನ ರಸ್ತೆಯಲ್ಲಿ  ಎದುರಿನಿಂದ ಕೆಎ-19-ಎಡಿ-1111 ರ ಬಸ್ಸನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ರಜೀಶ ಬೈಕ್ ನಿಂದ ಕೆಳಗೆ ಬಿದ್ದು ಬಲಕಾಲು ಮುರಿತಕ್ಕೊಳಗಾಗಿ ಕೈಗಳಿಗೂ ರಕ್ತಗಾಯವಾಗಿದ್ದು. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಅಸಹಜ ಸಾವು, ಪ್ರಕರಣ ದಾಖಲು:

     ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೂರ್ನಾಡು ಗ್ರಾಮದ ನಿವಾಸಿ ಯೋಗೇಶ ಎಂಬವರ ತಂದೆ ಪೂವಯ್ಯ ಎಂಬವರು ದಿನಾಂಕ 09-05-2017 ರಂದು ರಾತ್ರಿ 9.00 ಪಿ.ಎಂ ಗೆ ಮನೆಯಿಂದ ಹೊರಗೆ ಹೋಗಿದ್ದು ಮರಳಿ ಮನೆಗೆ ಬಾರದೇ ಇದ್ದು ದಿನಾಂಕ 11-05-2017 ರಂದು ಯೋಗೇಶರವರ ತಂದೆಯವರ ಮೃತ ದೇಹವು ಅವರ ಮನೆಯಿಂದ ಸುಮಾರು 3 ಕಿ.ಮೀ ದೂರದ ಕಾವೇರಿ ಹೊಳೆಯಲ್ಲಿ ಸಿಕ್ಕಿದ್ದು. ಅವರ ಸಾವಿನ ಬಗ್ಗೆ ಸಂಶಯವಿರುವುದಾಗಿ ಮೃತರ ಮಗ ಯೋಗೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಿ.ಸಿ. ಕ್ಯಾಮೆರಾ ಕಳವು:

      ಆಶ್ರಮ ಶಾಲೆಯ ಹತ್ತಿರ ಅಳವಡಿಸಿದ ಸಿ.ಸಿ. ಕ್ಯಾಮೆರಾ ಕಳ್ಳತನವಾದ ಬಗ್ಗೆ ಮತ್ತು ನೀರಿನ ಪೈಪುಗಳನ್ನು ನಾಶಪಡಿಸಿದ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಡಿಡ್ಡಳ್ಳಿ ಆಶ್ರಮ ಶಾಲೆಯಲ್ಲಿ ನಡೆದಿದೆ. ದಿನಾಂಕ 10-5-2017 ಸಮಯ 23-00 ರಿಂದ 11-5-2017ರ ಬೆಳಿಗ್ಗೆ 9-00 ಗಂಟೆಯ ಅವಧಿಯಲ್ಲಿ ಡಿಡ್ಡಳ್ಳಿ ಆಶ್ರಮ ಶಾಲೆಯ ಮುಂಭಾಗ ವಿದ್ಯುತ್ ಕಂಬ ಮತ್ತು ಮರಗಳಿಗೆ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲದೆ ಸದರಿ ಆಶ್ರಮ ಶಾಲೆಗೆ ಅಳವಡಿಸಿದ ನೀರಿನ ಪೈಪುಗಳನ್ನು ಒಡೆದು ನಾಶಪಡಿಸಿರುತ್ತಾರೆಂದು ಆಶ್ರಮ ಶಾಲೆಯ ಕಲ್ಯಾಣಾಧಿಕಾರಿ ಶ್ರೀ ಎನ್.ಬಿ. ಚಂದ್ರಶೇಖರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರುಗಳ ಡಿಕ್ಕಿ ಇಬ್ಬರಿಗೆ ಗಾಯ:

     ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಗೋಪಾಲಪುರ ಗ್ರಾಮದಲ್ಲಿ ಸಂಭವಿಸಿದೆ. ದಿನಾಂಕ 11-5-2017 ರಂದು ಸಂಜೆ 5-50 ಗಂಟೆ ಸಮಯದಲ್ಲಿ ಫಿರ್ಯಾದಿ ಡಾ: ಇಂದೂಧರ್, ವೈದ್ಯಾಧಿಕಾರಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರು ತಮ್ಮ ಬಾಪ್ತು ಕಾರಿನಲ್ಲಿ ನವೀನ್ ನಿಶ್ಚಲ್ ಎಂಬವರೊಂದಿಗೆ ಗೌಡಳ್ಳಿಯಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಹೊಸಳ್ಳಿ ಎಂಬಲ್ಲಿ ಎದುರುಗಡೆಯಿಂದ ವೀರೇಶ್ ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಾ:ಇಂದೂಧರ್ ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಡಾ: ಸಿಂದೂಧರ್ ಮತ್ತು ನವೀನ್ ನಿಶ್ಚಲ್ ರವರು ಗಾಯಗೊಂಡಿದ್ದು, ಶನಿವಾರಸಂತೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ತಾಲೋಕಿನ ಬಿಳುಕಿಕೊಪ್ಪ ನಿವಾಸಿ ಕಿರಣ್ ಕುಮಾರ್ ರವರು ದಿನಾಂಕ 08-5-2017 ರಂದು ಸಾಯಂಕಾಲ 7.30 ಗಂಟೆಗೆ ಬಿಳುಕಿಕೊಪ್ಪದಲ್ಲಿರುವ ಕೃಷ್ಣ ರವರ ಟೈಲರಿಂಗ್ ಅಂಗಡಿಯ ಹತ್ತಿರ ಕುಳಿತುಕೊಂಡಿರುವಾಗ ಆರೋಪಿ ಕಿರಣ್ ಕುಮಾರ್ ರವರು ಅಲ್ಲಿಗೆ ಬಂದು ವಿನಾಕಾರಣ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸೌದೆ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆಂದು ಫಿರ್ಯಾದಿ ಕಿರಣ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ಶಿರಂಗಾಲ ಗ್ರಾಮದ ನಿವಾಸಿ ಶ್ರೀಮತಿ ಮಮತ ಎಂಬವರ ಪತಿ 35 ವರ್ಷದ ರವಿ ಎಂಬವರು ದಿನಾಂಕ 10-5—2017 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅಸ್ವಸ್ಥರಾದ ಸದರಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಮೃತಪಟ್ಟಿದ್ದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.