Saturday, May 13, 2017

ಪತ್ರಿಕಾ ಪ್ರಕಟಣೆ
ನಾಗರಿಕ ಬಂದೂಕು ತರಬೇತಿ ಶಿಬಿರ:
ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್‌ ನ ಆರ್‌ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ : ರೂ.10
ಸಂಪರ್ಕ ಸಂಖ್ಯೆ : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು : ಶ್ರೀ ತಿಮ್ಮಪ್ಪ, ಪೊಲೀಸ್‌ ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್‌ಪೋರ್ಟ್‌ ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
 
ಅಕ್ರಮ ಮದ್ಯ ಸಾಗಾಟ
                        ದಿನಾಂಕ 11/05/2017ರ ರಾತ್ರಿ ವೇಳೆ ಮಡಿಕೇರಿ ನಗರ ಠಾಣಾ ಪಿಎಸ್‌ಐ ಹೆಚ್‌.ವೈ.ವೆಂಕಟರಮಣರವರು ಗಸ್ತು ಕರ್ತವ್ಯದಲ್ಲಿರುವಾಗ ನಗರದ ಕಾವೇರಿ ಮಿನಿ ಹಾಲ್‌ ಬಳಿ ಇನ್ನೋವಾ ಕಾರೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿರುವುದಾಗಿ ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಪ್ರಕಾಶ್‌ರವರು ತಿಳಿಸಿದ ಮೇರೆಗೆ ಪಿಎಸ್‌ಐ ವೆಂಕಟರಮಣರವರು ಸ್ಥಳಕ್ಕೆ ಧಾವಿಸಿ ಕೆಎ-05-ಎಂಎಫ್‌-295ರ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಸುಮಾರು ರೂ.37,000/- ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಬೆಂಗಳೂರಿನ ನಿವಾಸಿಗಳಾದ ಕಂಬಳ ಜೆ. ಹರೀಶ ಮತ್ತು ಎಂ.ತಮ್ಮಣ್ಣ ಎಂಬವರನ್ನು ಬಂಧಿಸಿ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಕರಿ ಮೆಣಸು ಕಳವು
                   ವಿರಾಜಪೇಟೆ ಬಳಿಯ ಕೆದಮುಳ್ಳೂರು ನಿವಾಸಿ ಮಾಳೇಟಿರ ಉತ್ತಪ್ಪ ಎಂಬವರು ದಿನಾಂಕ 10/05/2017ರಂದು ಸಂಬಂಧಿಕರ ಮದುವೆಗೆಂದು ವಿರಾಜಪೇಟೆಗೆ ತೆರಳಿದ್ದು ದಿನಾಂಕ 12/05/2017ರಂದು ಮರಳಿ ಮನೆಗೆ ಬರುವಾಗ ಯಾರೋ ಕಳ್ಳರು ಮನೆಯ ಹಿಂಭಾಗದ ಬಾಗಿಲಿನ ಬೋಲ್ಟ್ ಮುರಿದು ಒಳ ಪ್ರವೇಶಿಸಿ ಮನೆಯೊಳಗಿಟ್ಟಿದ್ದ ಸುಮಾರು  ರೂ.15,000/- ಮೌಲ್ಯದ 30 ಕೆ.ಜಿ.ಯಷ್ಟು ಕರಿ ಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನೆಗೆ ಕಾರು ಡಿಕ್ಕಿ
                ದಿನಾಂಕ 11/05/2017ರ ರಾತ್ರಿ ವೇಳೆಯಲ್ಲಿ ಪೊನ್ನಂಪೇಟೆ ಬಳಿಯ ಆನೆ ಚೌಕೂರು ಅರಣ್ಯ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ಮೇವಿಗೆಂದು ಬಿಟ್ಟಿದ್ದ ಸಾಕು ಆನೆಗಳ ಪೈಕಿ ನಕುಲ ಎಂಬ ಸಾಕಾನೆಯು ಶಿಬಿರದ ಬಳಿ ಇರುವ ರಸ್ತೆಯನ್ನು ದಾಟುತ್ತಿರುವಾಗ ವಿರಾಜಪೇಟೆ ನಿವಾಸಿ ಸುರೇಶ ಎಂಬವರು ಅವರ ಕಾರು ಸಂಖ್ಯೆ ಕೆಎ-01-ಪಿ-8828ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಆನೆಗೆ ಡಿಕ್ಕಿಪಡಿಸಿದ ಪರಿಣಾಮ ಆನೆಗೆ ತೀವ್ರ ಗಾಯಗಳಾಗಿರುವುದಾಗಿ ಮತ್ತಿಗೋಡು ಆನೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ಜಗದೀಶ ನಾಯ್ಕರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಜೀಪು ಡಿಕ್ಕಿ
                 ದಿನಾಂಕ 12/05/2017ರಂದು ಸೋಮವಾರಪೇಟೆ ಬಳಿಯ ತಾಕೇರಿ ನಿವಾಸಿ ದೀಕ್ಷಿತ್ ಎಂಬವರು ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಕ್ಯು-8549ರಲ್ಲಿ ಸೋಮವಾರಪೇಟೆ ನಗರದ ಆಲೆಕಟ್ಟೆ ರಸ್ತೆಯಲ್ಲಿ ಹೋಗುತ್ತಿರುವಾಗ ಹರಗ ನಿವಾಸಿ ಈರಪ್ಪ ಎಂಬವರು ಅವರ ಕೆಎ-12-ಎಂಎ-5354ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ದೀಕ್ಷಿತ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ದೀಕ್ಷಿತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಿನಿಬಸ್‌ಗೆ ಲಾರಿ ಡಿಕ್ಕಿ,ಮಹಿಳೆ ಸಾವು 
ದಿನಾಂಕ 12/05/2017ರಂದು ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆ ಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ-12-229ರ ಲಾರಿಯನ್ನು ಅದರ ಚಾಲಕ ಕೆ.ಕುಟ್ಟಿಪ್ಪ ಎಂಬವರು ಚಾಲಿಸಿಕೊಂಡು ಬರುತ್ತಿದ್ದು 7ನೇ ಹೊಸಕೋಟೆ ಜಂಕ್ಷನ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಲಾರಿಯನ್ನು ಬಲಕ್ಕೆ ತಿರುಗಿಸಿದ್ದು ಅದೇ ಸಮಯಕ್ಕೆ ಹಿಂದಿನಿಂದ ಟಿಎನ್‌-42-ವಿ-2199ರ ಮಿನಿ ಬಸ್‌ ಒಂದನ್ನು ಅದರ ಚಾಲಕ ತಮಿಳುನಾಡು ನಿವಾಸಿ ಶಿವಕುಮಾರ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಮಿನಿಬಸ್‌ನಲ್ಲಿದ್ದ ತಮಿಳುನಾಡಿನ  ತಿರುಪ್ಪೂರು ನಿವಾಸಿ ಮೋಹನಾ ಎಂಬ ಮಹಿಳೆಯು ತೀವ್ರತರದ ಗಾಯಗಳಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ
                ದಿನಾಂಕ 05/05/2017ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಎಸ್‌.ಬಿ.ರಾಜು ಎಂಬವರು ಎರಡು ದಿನದ ಜೋಳದ ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಕೆ-12-ಎ-9526ರ ಲಾರಿಯಲ್ಲಿ ಹೋಗಿದ್ದು ಇದುವರೆಗೂ ಮರಳ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಭಾರತಿ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.