Sunday, May 21, 2017

 ವ್ಯಕ್ತಿಯ ಆತ್ಮಹತ್ಯೆ             

                  ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ತಿತಿಮತಿಯ ಕರಡಿಕೊಪ್ಪದಲ್ಲಿ ವರದಿಯಾಗಿದೆ. ತಿತಿಮತಿಯ ನಾಯಿಮನ ಕಾಲೋನಿಯ ನಿವಾಸಿ ಪಂಜರಿಯರವರ ಮಣಿ ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15-5-2017 ರಂದು ಕರಡಿಕೊಪ್ಪದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಂತರ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಣಿಯವರು ದಿನಾಂಕ 20-5-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಇಂದಿರರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದರೋಡೆಗೆ ಯತ್ನ
                ದಿನಾಂಕ 20-5-2017 ರಂದು ವಿರಾಜಪೇಟೆ ನಗರದ ಸೋಮಪದ್ಮ ಪೆಟ್ರೋಲ್ ಬಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿರುವ ಮಹದೇವ್ @ ಸುಬಾಷ್ ಎಂಬುವವರು ಕೆಲಸ ಮುಗಿಸಿ ಸಂಗ್ರಹವಾದ ಹಣವನ್ನು ತೆಗೆದುಕೊಂಡು ಸಮಯ 9-15 ಪಿ ಎಂ ಗೆ ಮೋಟಾರು ಸೈಕಲಿನಲ್ಲಿ ಮನೆಗೆ ಹೋಗುತ್ತಿರುವಾಗ ದಖ್ಖನ್ನಿ ಮೊಹಲ್ಲಾ ಜಂಕ್ಷನ್ ನಲ್ಲಿರುವ ಹಳೆಯ ಪ್ರಗತಿ ಶಾಲೆಯ ಹತ್ತಿರ ಮೋಟಾರು ಸೈಕಲನ್ನು ನಿಲ್ಲಿಸಿದಾಗ ಶಾಲೆಯ ವರಾಂಡದ ಕತ್ತಲೆಯಲ್ಲಿ ಕುಳಿತ್ತಿದ್ದ ವ್ಯಕ್ತಿಗಳು ಮಹದೇವ್ ರವರ ಮೇಲೆ ಮೆಣಸಿನ ಪುಡಿ ಎರಚಿ ಹಣದ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಮಹದೇವ್ ರವರು ಕಿರುಚಿಕೊಂಡಾಗ ಇಬ್ಬರು ಯುವಕರು ಕತ್ತಲೆಯಲ್ಲಿ ಓಡಿ ಹೋಗಿದ್ದು, ಈ ಬಗ್ಗೆ ಮಹದೇವ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಮರದಿಂದ ಬಿದ್ದ ವ್ಯಕ್ತಿಯ ಸಾವು

            ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 18-5-2017 ರಂದು ಯಡವನಾಡು ಗ್ರಾಮದ ಗಣಿಪ್ರಸಾದ್ ರವರ ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಚೋಮರವರು ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಚೋಮರವರು ದಿನಾಂಕ 20-5-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

               ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ದಿನೇಶ ಮತ್ತು ಅವರ ಬಾವ ಪೊನ್ನಪ್ಪನವರ ಸಂಸಾರ ಒಂದೇ ಮನೆಯಲ್ಲಿ ವಾಸವಿದ್ದು ದಿನಾಂಕ 20-5-2017 ರಂದು ದಿನೇಶರವರು ಸ್ನಾನ ಮಾಡಿ ಬಂದು ಬಾವ ರವರ ಮಗ 8 ವರ್ಷ ಪ್ರಾಯದ ವಿನುವಿಗೆ ಸ್ನಾನಕ್ಕೆ ಹೋಗಲು ತಿಳಿಸಿದಾಗ ಆತನು ಸ್ನಾನ ಮಾಡುವುದಿಲ್ಲವೆಂದು ಹೇಳಿದಾಗ ದಿನೇಶರವರು ವಿನುವಿಗೆ ಕೈಯಿಂದ ಹೊಡೆದಿದ್ದು, ಈ ವಿಚಾರದಲ್ಲಿ ಪೊನ್ನಪ್ಪನವರು ಜಗಳ ತೆಗೆದು ಕತ್ತಿಯಿಂದ ಕಡಿದು ದಿನೇಶರವರನ್ನು ಕೊಲೆ ಮಾಡಿದ್ದು, ಈ ಬಗ್ಗೆ ದಿನೇಶರವರ ಪತ್ನಿ ಸುಶೀಲರವರು ನೀಡಿದ ದೂರಿನ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.