Monday, May 22, 2017

ದಾರಿತಡೆದು ವ್ಯಕ್ತಿ ಮೇಲೆ ಹಲ್ಲೆ:

     ಹಣದ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಸೋಮವಾರಪೇಟೆ ತಾಲೋಕು ಭುವಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-5-2017 ರಂದು ಸಮಯ 23-45 ಗಂಟೆಯ ಸಮಯದಲ್ಲಿ ಭುವಂಗಾಲ ಗ್ರಾಮದ ಪಿ.ಎಂ.ಅಶೋಕ ಎಂಬವರು ತಮ್ಮ ಮಗನೊಂದಿಗೆ ತಮ್ಮ ಮನೆಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಭುವಂಗಾಲ ಗ್ರಾಮದ ರಮಾನಂದ ಮತ್ತು ದೇವಯ್ಯರವರು ಮೋಟಾರ್ ಸೈಕಲಿನಲ್ಲಿ ಬಂದು ಪಿ.ಎಂ. ಅಶೋಕರವನ್ನು ದಾರಿಯಲ್ಲಿ ತಡೆದು ಹಣದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದೂ ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ಪಿ.ಎಂ. ಅಶೋಕನವರು ದೂರನ್ನು ನೀಡಿರುತ್ತಾರೆ. ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ: 

     ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಭುವಂಗಾಲ ಗ್ರಾಮದ ನಿವಾಸಿ ದೇವಯ್ಯ ಮತ್ತು ಅಶೋಕ, ಅಶೋಕರವರ ಮಗ ಯಶವಂತ ರವರ ನಡುವೆ ದಿನಾಂಕ 20-5-2017 ರಂದು ರಾತ್ರಿ 23-45 ಗಂಟೆಯ ಸಮಯದಲ್ಲಿ ಜಗಳ ವಾಗುತ್ತಿದ್ದು ಅವರನ್ನು ಪಿ.ಎಂ. ದಯಾನಂದ ಎಂಬವರು ಸಮದಾನಪಡಿಸಿದ್ದು, ನಂತರ ಪಿ.ಎಂ. ರಮಾನಂದರವರು ತಮ್ಮ ಮನೆಗೆ ಹೋಗುತ್ತಿದ್ದಾಗ ಅವರನ್ನು ಅಶೋಕ, ಸಾವಿತ್ರಿ, ಯಶ್ವಂತ್, ಸುಜಯ್ ರವರುಗಳು ಸೇರಿ ದಾರಿಯಲ್ಲಿ ತಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ದೂರನ್ನು ನೀಡಿದ ಮೇರೆಗೆ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜಾನುವಾರು ಸಾಗಾಟ:
 
    ಅಕ್ರಮವಾಗಿ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೋಮವಾರಪೇಟೆ ಠಾಣಾ ವ್ಯಾಪ್ತಿಯ ನಗರದ ಜ್ಯೂನಿಯರ್ ಕಾಲೇಜು ಜಂಕ್ಷನ್ ನಲ್ಲಿ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲು ಬಳಸಿದ ಕೆ.ಎ.46 4875 ಟಾಟಾ ಏಸ್ ವಾಹನವನ್ನು ಎರಡು ಹೋರಿಗಳ ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದು ಅಲ್ಲದೆ ಆರೋಪಿಗಳಾದ ಹಾಸನ ಜಿಲ್ಲೆಯ ಅಬ್ಬೂರು ಮಾಚಗೋಡನ ಹಳ್ಳಿ ಗ್ರಾಮದ ಮಹಿಬ್ ಪಾಷಾ ರವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

    ಪೊನ್ನಂಪೇಟೆ ಠಾಣಾ ಸರಹದ್ದಿನ ಮಜ್ಜಿಗೆಹಳ್ಳ ನಿವಾಸಿ ವಿ.ಆರ್. ನಿತಿನ್ ಎಂಬವರು ದಿನಾಂಕ 21-5-2017 ರಂದು ಅಪರಾಹ್ನ 1-30 ಗಂಟೆಯ ಸಮಯದಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಮರಿ ಎಂಬವರ ಮಗ ಅಣ್ಣಪ್ಪ ಮತ್ತು ಮಲ್ಲಿ ಎಂಬವರ ಮಗ ಅಣ್ಣಪ್ಪ ರವರುಗಳು ಸೇರಿ ವಿ.ಆರ್. ನಿತಿನ್ ರವರೊಂದಿಗೆ ಜಗಳ ಮಾಡಿ ಚಾಕುವಿನಿಂದ ಗೀರಿ ಗಾಯಪಡಿಸಿರುತ್ತಾರೆಂದು ನೀಡಿದ ಹೇಳಿಕೆ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವ್ಯಕ್ತಿಯ ಕೊಲೆ: 

     ಹಣದ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ವಾಗಿ ಒಬ್ಬಾತ ಕೋಲೆಗೀಡಾದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ ನಗರದಲ್ಲಿ ನಡೆದಿದೆ. ದಿನಾಂಕ 21-5-2017 ರಂದು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಶ್ರೀಮತಿ ಪಂಜರಿ ಎರವರ ಪೊನ್ನಮ್ಮ ಎಂಬವರ ಗಂಡ ಮಣಿ ಎಂಬವರನ್ನು ಯಾರೋ ಅಪರಿಚಿತ ವ್ಯಕ್ತಿ ಹಣದ ವಿಚಾರದಲ್ಲಿ ಜಗಳ ಮಾಡಿದ್ದು ನಂತರ ಸದರಿ ಅಪರಿಚಿತ ವ್ಯಕ್ತಿ ಚಾಕುವಿನಿಂದ ಮಣಿರವರ ಮೇಲೆ ಇರಿದು ಕೊಲೆ ಮಾಡಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಪಂಜರಿ ಎರವರ ಪೊನ್ನಮ್ಮನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.