Sunday, May 7, 2017

ವ್ಯಕ್ತಿಯ ಆತ್ಮ ಹತ್ಯೆ
              ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ವರದಿಯಾಗಿದೆ. ಗುಮ್ಮನಕೊಲ್ಲಿಯ ನಿವಾಸಿ ಸುನಿಲ್ ಎಂಬುವವರು ದಿನಾಂಕ 5-5-2017 ರಂದು ರಾತ್ರಿ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ತಾಯಿ ಸುಮಿತ್ರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಮೋಟಾರು ಸೈಕಲ್ ಅಪಘಾತ
            ಮೋಟಾರು ಸೈಕಲ್ ಅಪಘಾತಗೊಂಡು ಸವಾರ ಗಾಯಗೊಂಡ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿಯಲ್ಲಿ ವರದಿಯಾಗಿದೆ. ದಿನಾಂಕ 6-5-2017 ರಂದು ಅಭ್ಯತ್ ಮಂಗಲ ಗ್ರಾಮದ ಜ್ಯೋತಿ ನಗರದ ನಿವಾಸಿ ಮಣಿ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ನೆಲ್ಲಿಹುದಿಕೇರಿ ನಗರದಲ್ಲಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಅನಿಲ್ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.