Tuesday, May 9, 2017

ಪತ್ರಿಕಾ ಪ್ರಕಟಣೆ 
ನಾಗರಿಕ ಬಂದೂಕು ತರಬೇತಿ ಶಿಬಿರ:
    ಕೊಡಗು ಜಿಲ್ಲೆಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಕೊಡಗು ಜಿಲ್ಲಾ ಪೊಲೀಸ್ಇಲಾಖಾ ವತಿಯಿಂದ ನಡೆಸಲು ಉದ್ದೇಶಿಸಲಾಗಿದ್ದು ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮಡಿಕೇರಿಯ ಡಿಎಆರ್ ಆರ್ಪಿಐ ರವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಅರ್ಜಿ ಶುಲ್ಕ                      : ರೂ.10
ಸಂಪರ್ಕ ಸಂಖ್ಯೆ                 : 9480804906 ಹಾಗೂ 08272 - 228420
ಸಂಪರ್ಕಿಸಬೇಕಾದವರು        : ಶ್ರೀ ತಿಮ್ಮಪ್ಪ, ಪೊಲೀಸ್ನಿರೀಕ್ಷಕರು, ಡಿಎಆರ್‌, ಮಡಿಕೇರಿ.
ತರಬೇತಿಯ ಅವಧಿ             : 22/05/2017 ರಿಂದ 27/05/2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2017

    ಆಸಕ್ತಿಯುಳ್ಳ ನಾಗರಿಕರು ತಮ್ಮ ಇತ್ತೀಚಿನ 4 ಪಾಸ್ಪೋರ್ಟ್ಅಳತೆಯ ಭಾವ ಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
                                                          --------------------

 
ಕರಿಮೆಣಸು ಕಳವು ಕೆಲಸದವನ ಮೇಲೆ ಸಂದೇಹ:
 
     ಗೋದಾಮಿನಲ್ಲಿ ಶೇಖರಿಸಿಟ್ಟ ಕರಿಮೆಣಸು ಕಳ್ಳತನವಾದ ಘಟನೆ ಸುಂಟಿಕಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 7ನೇ ಹೊಸಕೋಟೆ ಗ್ರಾಮದ  ನಿವಾಸಿ ಕೆ.ಆರ್. ದಿಲೀಪ್ ಎಂಬವರಿಗೆ ಸೇರಿದ ಗೋದಾಮಿನಿಂದ ದಿನಾಂಕ 5-4-2017ರಿಂದ 27-4-2017ರ ಅವಧಿಯಲ್ಲಿ ಯಾರೋ ಕಳ್ಳರು 6 ಚೀಲ ಕರಿಮೆಣಸು ಕಳ್ಳತನಮಾಡಿಕೊಂಡು ಹೋಗಿದ್ದು, ಸದರಿ ಕಳ್ಳತನವನ್ನು ತೋಟದ ಕೆಲಸಗಾರರಾದ ಶ್ರೀಮತಿ ಸುಮ ಹಾಗು ಆಕೆಯ ಗಂಡ ಶಿವ ಎಂಬವರು ಮಾಡಿರಬಹುದೆಂದು ಗುನಾನಿ ಇರುವುದಾಗಿ ಕೆ.ಆರ್. ದಿಲೀಪ್ ನವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಅಣ್ಣನಿಂದ ತಮ್ಮನ ಮೇಲೆ ಹಲ್ಲೆ: 

    ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ತನ್ನ ಅಣ್ಣ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಬಾಣಾವಾರ ಗ್ರಾಮದಲ್ಲಿ ನಡೆದಿದೆ. ಬಾಣಾವಾರ ಗ್ರಾಮದ ನಿವಾಸಿ ಜಿ.ಆರ್. ರಮೇಶ್ ಎಂಬವರು ದಿನಾಂಕ 7-5-2017 ರಂದು ತನ್ನ ಮನೆಯಲ್ಲಿ ತನ್ನ ಅಣ್ಣ ಅಣ್ಣಯ್ಯ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಏಕಾಏಕಿ ಕೋಪಗೊಂಡ ಅಣ್ಣ  ಅಣ್ಣಯ್ಯ ಕಬ್ಬಿಣದ ರಾಡಿನಿಂದ ತಮ್ಮ ಸತೀಶ್ ನವರ ಮೇಲೆ  ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ಜಿ.ಆರ್. ಸತೀಶ್ ನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜಾಗದ ವಿವಾದ, ಕಾಫಿ, ಮೆಣಸು ಕೃಷಿಗೆ ಹಾನಿ:
 
     ವಿರಾಜಪೇಟೆ ತಾಲೋಕು ಶ್ರೀಮಂಗಲ ಗ್ರಾಮದ ನಿವಾಸಿ ಜಿ.ಜೆ.ಕಾಳಯ್ಯ ಎಂಬವರಿಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮದಲ್ಲಿ ಕಾಫಿತೋಟವಿದ್ದು, ಅದರ ಪಕ್ಕದಲ್ಲಿ ಮುಕ್ಕೋಡ್ಲು ಗ್ರಾಮದ ನಿವಾಸಿಗಳಾದ ರುದ್ರಪ್ಪ, ಪವನ್ ಮತ್ತು ಅರುಣ ಎಂಬವರಿಗೆ ಸೇರಿದ ಕಾಫಿತೋಟವಿದ್ದು, ಸದರಿ ಜಿ.ಜೆ. ಕಾಳಯ್ಯ ಮತ್ತು ರುದ್ರಪ್ಪ, ಪವನ್ ಮತ್ತು ಅರುಣರವರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದ್ದು, ದಿನಾಂಕ 5-5-2017 ರಂದು ರುದ್ರಪ್ಪ, ಪವನ್ ಮತ್ತು ಅರುಣರವರುಗಳು ಸೇರಿ ಫಿರ್ಯಾದಿ ಕಾಳಯ್ಯನವರ ಅನುಪಸ್ಥಿತಿಯಲ್ಲಿ ಕಾಳಯ್ಯನವರ ತೋಟದಲ್ಲಿದ್ದ ಕಾಫಿಗಿಡ ಮತ್ತು ಕರಿಮೆಣಸು ಬಳ್ಳಿಗಳನ್ನು ಜೆ.ಸಿ.ಬಿ. ಯಂತ್ರದ  ನಾಶಪಡಿಸಿರುತ್ತಾರೆಂದೂ, ಇದರಿಂದ ಸುಮಾರು 70,000/- ರೂ. ನಷ್ಟವಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ ನಾಲ್ವರಿಗೆ ಗಾಯ: 

    ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡ ಘಟನೆ ಮದೆನಾಡು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮದೆನಾಡು ಗ್ರಾಮದ ನಿವಾಸಿಯಾದ ಕೆ.ಹೆಚ್. ಪರಮೇಶ್ವರ ಎಂಬವರು ದಿನಾಂಕ 8-5-2017 ರಂದು ತಮ್ಮ ಬಾಪ್ತು ಕಾರಿನಲ್ಲಿ ಸುಳ್ಯದ ಕಡೆಯಿಂದ ಮದೆನಾಡಿನಲ್ಲಿರುವ ತಮ್ಮ ಮನೆಗೆ ಇತರೆ ಮೂವರೊಂದಿಗೆ ಬರುತ್ತಿದ್ದಾಗ ಜೋಡುಪಾಲಕ್ಕೆ ತಲುಪಿದಾಗ ಎದುಗುಗಡೆಯಿಂದ ಬಂದ ಲಾರಿಯನ್ನು ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನ ಚಾಲಕ ಕೆ.ಹೆಚ್. ಪರಮೇಶ್ವರ್, ಕಾರಿನಲ್ಲಿದ್ದ ಬಿ.ಎನ್. ಹರೀಶ್, ಮೀನಾಕ್ಚಿ ಮತ್ತು ಜೀವಿತ ರವರುಗಳು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಿಕ್ಷಾಕ್ಕೆ ಕಾರು ಡಿಕ್ಕಿ: 

    ರಿಕ್ಷಾಕ್ಕೆ ಕಾರುಡಿಕ್ಕಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಗುಸೇರಿ ಮೂವರು ಗಾಯಗೊಂಡ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ. ದಿನಾಂಕ 8-5-2017 ರಂದು ನಾಪೋಕ್ಲು ಬಳಿಯ ಚೆರಿಯಪರಬು ನಿವಾಸಿಗಳಾದ ವೈ.ಸಿ. ಪುಷ್ಪ, ಆಕೆಯ ಚಿಕ್ಕಮ್ಮ ಕಮಲ, ಕಲ್ಯಾಣಿ ಮತ್ತು ಮಗು ಚೈತ್ರ ಆಟೋರಿಕ್ಷಾವೊಂದರಲ್ಲಿ ನಾಪೋಕ್ಲು ಸಂತೆಗೆ ಹೋಗುತ್ತಿದ್ದಾಗ ಪೊನ್ನಂಪೇಟೆ ನಿವಾಸಿ ಷಂಶುದ್ದೀನ್ ಎಂಬವರು ಚಾಲಿಸಿಕೊಂಡು ಬಂದ ಕಾರು ಡಿಕ್ಕಿಯಾದ ಪರಿಣಾಮ ರಿಕ್ಷಾದಲ್ಲಿದ್ದ ವೈ.ಸಿ. ಪುಷ್ಪ, ಆಕೆಯ ಚಿಕ್ಕಮ್ಮ ಕಮಲ, ಕಲ್ಯಾಣಿ ಮತ್ತು ಮಗು ಚೈತ್ರ ಗಾಯಗೊಂಡಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.