Saturday, May 6, 2017

ವ್ಯಕ್ತಿಯ ಮೇಲೆ ಹಲ್ಲೆ
                                ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದ ಬಣ್ಣ ಮೊಟ್ಟೆ ಪೈಸಾರಿಯಲ್ಲಿ ನಡೆದಿದೆ. ದಿನಾಂಕ 4-5-2017 ರಂದು ಬಣ್ಣಮೊಟ್ಟೆ ಪೈಸಾರಿಯ ನಿವಾಸಿ ಪಣಿಯರವರ ಮಂಜು ಎಂಬುವವರು ಮೊಬೈಲ್ ನಲ್ಲಿ ಮಾತನಾಡಿಕೊಂಡು ನಿಂತಿರುವಾಗ ಅದೇ ಪೈಸಾರಿಯ ನಿವಾಸಿ ಪಣಿಯರವರ ಚಿನ್ನಣಿ ರವರು ಇಷ್ಟು ಹೊತ್ತಿನಲ್ಲಿ ಯಾರ ಜೊತೆ ಮಾತನಾಡಿಕೊಂಡಿದ್ದೀಯಾ ಎಂದು ಹೇಳಿ ಜಗಳ ತೆಗೆದು ಕೈಯಲ್ಲಿದ್ದ ದೊಣ್ಣೆಯಿಂದ ತಲೆಗೆ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಪಣಿಯರವರ ಮಂಜುರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರ ಬಿದ್ದು ಮಹಿಳೆ ದುರ್ಮರಣ 
                          ಗಾಳಿಗೆ ಮರ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ತಲ್ತಾರೆ ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 5-5-2017 ರಂದು ಸೋಮವಾರಪೇಟೆ ನಗರದ ಕಾನ್ವೆಂಟ್ ಬಾಣೆಯ ನಿವಾಸಿ ಚೆಲುವಿ ಎಂಬ ಕಾರ್ಮಿಕ ಮಹಿಳೆಯು ಇತರರೊಂದಿಗೆ ತಲ್ತಾರೆ ಶೆಟ್ಟಳ್ಳಿ ಗ್ರಾದಮ ನಿವಾಸಿ ಕೃಷ್ಣಪ್ಪರವರ ಕಾಫಿ ತೋಟಕ್ಕೆ ಕಾಫಿ ಗಿಡದ ಕಪಾತು ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ಊಟ ಮಾಡಿ ಕುಳಿತಿರುವಾಗ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಸಿಲ್ವರ್ ಓಕ್ ಮರವೊಂದು ಬೇರು ಸಮೇತ ಚೆಲುವಿಯವರ ಮೇಲೆ ಬಿದ್ದ ಪರಿಣಾಮ ಚೆಲುವಿಯವರು ಮೃತಪಟ್ಟಿದ್ದು, ಈ ಸಂಬಂದ ಮಂಜುಳ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ