Wednesday, June 7, 2017

ವ್ಯಕ್ತಿಯ ಮೇಲೆ ಹಲ್ಲೆ 
                ದಿನಾಂಕ 05-06-2017 ರಂದು ಹಂಚಿಕಾಡು ಅಮ್ಮತ್ತಿಯ ನಿವಾಸಿ ವಸಂತ ಕುಮಾರ್ ಎಂಬುವವರು ಕಾವಾಡಿ ಗ್ರಾಮದಲ್ಲಿ ವಾಸವಿರುವ ನೆಂಟರಾದ ಮೀನಾಕ್ಷಿಯವರ ಮನೆಗೆ ಹೋಗಿ ಅತ್ತೆ ಜಯಮ್ಮರವರನ್ನು ಕರೆದಾಗ ಮೀನಾಕ್ಷಿಯವರ ಗಂಡ ಸ್ವಾಮಿಯು ಹಳೇ ದ್ವೇಷದಿಂದ ವಸಂತಕುಮಾರ್ ರವರೊಂದಿಗೆ ಏಕಾ ಏಕಿ ಜಗಳ ತೆಗೆದು ಕತ್ತಿಯಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ವಸಂತ ಕುಮಾರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕುಗಳ ಅಪಘಾತ
               ದಿನಾಂಕ 05-06-2017 ರಂದು ಸೋಮವಾರಪೇಟೆ ತಾಲೂಕಿನ ತಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಕೊರಗಪ್ಪ ಎಂಬುವವರು ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ಹೋಗುತ್ತಿರುವಾಗ ಎದುರುಗಡೆಯಿಂದ ಪ್ರಪುಲ್ಲಾ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೊರಗಪ್ಪನವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಕೊರಗಪ್ಪನವರ ತಲೆಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋರಿಕ್ಷಾ ಅಪಘಾತ
                 ದಿನಾಂಕ 05-06-2017 ರಂದು ನಾಕೂರು ಶಿರಂಗಾಲ ಗ್ರಾಮದ ನಿವಾಸಿ ರಾಜೇಶ್ ರವರು ಸುಂಟಿಕೊಪ್ಪದ ಸೆಂಟ್ ಮೇರಿಸ್ ಶಾಲೆಯಿಂದ ಮಕ್ಕಳನ್ನು ತನ್ನ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಶಾಂತಿಗಿರಿ ಎಸ್ಟೇಟ್ ಹತ್ತಿರ ತಲುಪುವಾಗ ಆಟೋವನ್ನು ರಾಜೇಶ್ ವರು ಅಜಾಗರೂಕತೆಯಿಂದ ಚಾಲನೆ ಮಾಡಿ ಚರಂಡಿಗೆ ಬೀಳಿಸಿದ ಪರಿಣಾಮ ಆಟೋದಲ್ಲಿದ್ದ ಮಕ್ಕಳಿಗೆ ಗಾಯಗಳಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಕಲಿ ಚಿನ್ನ ನೀಡಿ ಮಹಿಳೆಗೆ ಮೋಸ
              ಶನಿವಾರಸಂತೆಯ ದುಂಡಳ್ಳಿ ಗ್ರಾಮದ ನಿವಾಸಿ ವೆಂಕಟಮ್ಮ ಎಂಬುವವರು ದಿನಾಂಕ 03-06-2017 ರಂದು ಸಾಮಾನು ತೆಗೆಯಲೆಂದು ಶನಿವಾರಸಂತೆಗೆ ಹೋಗಿದ್ದಾಗ ಶನಿವಾರಸಂತೆ ನಗರದಲ್ಲಿ ಒಬ್ಬ ಅಪರಿಚಿತ ಹೆಂಗಸು ಸಿಕ್ಕಿ ತನ್ನ ಬಳಿಯಲ್ಲಿ ಚಿನ್ನವಿದೆ ಕಡಿಮೆ ಹಣಕ್ಕೆ ಮಾರುತ್ತೇನೆ ಎಂದು ಹೇಳುವಾಗ ಅಲ್ಲಿಗೆ ಒಬ್ಬ ಗಂಡಸು ಬಂದು ಅಪರಿಚಿತ ಹೆಂಗಸಿನೊಂದಿಗೆ ಚಿನ್ನ ಕೊಡು 10,000 ರೂ ಕೊಡುತ್ತೇನೆ ಎಂದು ಹೇಳುವಾಗ ಹೆಚ್ಚಿಗೆ ಹಣ ಬೇಕು ಎಂದು ಮಹಿಳೆ ಹೇಳಿದಾಗ ಆ ವ್ಯಕ್ತಿ ಹಣ ತರುತ್ತೇನೆ ಎಂದು ಹೇಳಿ ಹೋದಾಗ ಅಪರಿಚಿತ ಮಹಿಳೆ ಆತನಿಗೆ ಚಿನ್ನವನ್ನು ಕೊಡುವುದಿಲ್ಲ ನಿಮ್ಮ ಬಳಿ ಇರುವ ಕಡಿಮೆ ಬೆಲೆಯ ಚಿನ್ನದ ಸರವನ್ನು ಕೊಡಿ ನಿಮಗೆ ಕಾಸಿನ ಸರವನ್ನು ಕೊಡುತ್ತೇನೆ ಎಂದು ಹೇಳಿ ಸರವನ್ನು ಪಡೆದುಕೊಂಡು ಕಾಸಿನ ಸರವನ್ನು ವೆಂಕಟಮ್ಮನವರಿಗೆ ಕೊಟ್ಟು ಹೊರಟು ಹೋಗಿದ್ದು ನಂತರ ನೋಡಲಾಗಿ ನಕಲಿ ಚಿನ್ನದ ಕಾಸಿನ ಸರವಾಗಿದ್ದು, ಈ ಬಗ್ಗೆ ವೆಂಕಟಮ್ಮನವರು ನೀಡಿದ ದೂರಿನ ಮೇರೆಗೆ ಶನಿರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಕ್ರಮ ಜೂಜಾಟ 
              ದಿನಾಂಕ 06-06-2017 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ಮತ್ತು ಸಿಬ್ಬಂದಿಯವರು ಕುಶಾಲನಗರದ ಸುಂದರ ನಗರ ಗ್ರಾಮದ ಅಯ್ಯಪ್ಪ ದೇವಸ್ತಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದವರು ತಪ್ಪಿಸಿಕೊಂಡಿದ್ದು, ಜೂಜಾಟಕ್ಕೆ ಬಳಸಿದ 12,500 ರೂ ಗಳನ್ನು ಹಾಗೂ ಎರಡು ಮೋಟಾರು ಸೈಕಲ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವ್ಯಕ್ತಿ ಕಾಣಿ ಪ್ರಕರಣ 
             ದಿನಾಂಕ 03-06-2017 ರಂದು ಕುಶಾಲನಗರದ ಚಿಕ್ಕತ್ತೂರು ಗ್ರಾಮದ ನಿವಾಸಿ ರವಿ ಎಂಬುವವರು ಕೂಲಿ ಕೆಲಸಕ್ಕೆಂದು ಕೂಡಿಗೆಗೆ ಹೋಗಿದ್ದವರು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದಲ್ಲೂ ಪತ್ತೆಯಾಗದೇ ಇದ್ದುದ್ದರಿಂದ ಪತ್ನಿ ಪಾರ್ವತಿಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.