Saturday, June 10, 2017

ವಾಹನ ಅಪಘಾತ 
                ವಿರಾಜಪೇಟೆಯ ಪೆರುಂಬಾಡಿ ಗ್ರಾಮದ ನಿವಾಸಿ ಅಪ್ಪಣ್ಣ ಎಂಬುವವರು ತಾಮರ ರೆಸಾರ್ಟ್ ಗೆ ಸೇರಿದ ಬೊಲೆರೋ ಜೀಪಿನಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು ದಿನಾಂಕ 09-06-2017 ರಂದು ಜೀಪಿನಲ್ಲಿ ಮಧು ಎಂಬುವವರೊಂದಿಗೆ ಕಬ್ಬಿನಕಾಡು ಜಂಕ್ಷನ್ ನಿಂದ ತಾಮರ ರೆಸಾರ್ಟ್ ಗೆ ಹೋಗುತ್ತಿರುವಾಗ ಕಬ್ಬಿನಕಾಡು ತಾಮರ ರೆಸಾರ್ಟ್ ರಸ್ತೆಯಲ್ಲಿ ಎದುರುಗಡೆಯಿಂದ ಟಾಟಾ ಏಸ್ ವಾಹನವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪು ಜಖಂಗೊಂಡಿರುವುದಾಗಿ ಅಪ್ಪಣ್ಣನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಯ ಆತ್ಮಹತ್ಯೆ
                   ಮನನೊಂದು ಮಹಿಳೆಯೊಬ್ಬರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಳಕೂರು ಗ್ರಾಮದಲ್ಲಿ ವರದಿಯಾಗಿದೆ. ಕಳಕೂರು ಗ್ರಾಮದ ನಿವಾಸಿ 66 ವರ್ಷ ಪ್ರಾಯದ ಕುಪ್ಪಣಮಾಡ ಗಂಗಮ್ಮ ಎಂಬುವವರು ದಿನಾಂಕ 08-06-2017 ರಂದು ಮನೆಯ ಪಕ್ಕದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ದಿನೇಶ ರವರು ನೀಡಿದ ಪುಕಾರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
                 ದಿನಾಂಕ 09-06-2017 ರಂದು ಕುಶಾಲನಗರದ ನಿವಾಸಿ ಶ್ರೀಧರ್ ಎಂಬುವವರು ಮಡಿಕೇರಿಯ ಶೋರೂಂ ನಿಂದ ಮಹೇಂದ್ರ ಕಂಪೆನಿಗೆ ಸೇರಿದ ಕೆಯುವಿ 100 ನ ಹೊಸ ಕಾರನ್ನು ಖರೀದಿಸಿಕೊಂಡು ಕುಟುಂಬದವರೊಂದಿಗೆ ಕಾರನ್ನು ಚಾಲಕ ಅನಿಶ್ ಫಿಲಿಪ್ ರವರು ಚಾಲನೆ ಮಾಡಿಕೊಂಡು ಕುಶಾಲನಗರದ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಕಾರಿನ ಎಡಬದಿಯಿಂದ ಮೋಟಾರು ಸೈಕಲನ್ನು ಯಶ್ ಅಹಮದ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿಪಡಿಸಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗೆ ಮಗುಚಿಕೊಂಡು ಕಾರಿನಲ್ಲಿದ್ದ ಶ್ರೀಧರ್, ಅವರ ಮಗ ಅಕ್ಷಯ್ ರವರಿಗೆ ಹಾಗೂ ಮೋಟಾರು ಸೈಕಲಿನ ಚಾಲಕನಿಗೂ ಗಾಯವಾಗಿದ್ದು, ಈ ಬಗ್ಗೆ ಕಾರಿನ ಚಾಲಕ ಅನಿಷ್ ಪಿಲಿಪ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.