Sunday, June 11, 2017

ಅಂಗಡಿಗೆ ನುಗ್ಗಿ ಕಳವು
                  ನಾಪೋಕ್ಲುವಿನ ಚೆರಿಯಪರಂಬು ನಿವಾಸಿ ಅಬ್ದುಲ್ ರೆಹಮಾನ್ ಎಂಬುವವರು ಚೆರಿಯಪರಂಬುವಿನ ಕ್ರೀಡಾಂಗಣದ ಹತ್ತಿರ ಅಂಗಡಿ ಇಟ್ಟುಕೊಂಡಿದ್ದು, ದಿನಾಂಕ 10-6-2017 ರಂದು ವ್ಯಾಪಾರ ಮುಗಿಸಿ ರಾತ್ರಿ ಮನೆಗೆ ಹೋಗಿದ್ದು, ಮಾರನೆಯ ದಿವಸ ಬೆಳಿಗ್ಗೆ ಬಂದು ನೋಡುವಾಗ ಅಂಗಡಿಯ ಮುಂದಿನ ಬಾಗಿಲನ್ನು ಯಾರೋ ಒಡೆದು ಒಳನುಗ್ಗಿ 2,000 ರೂ ನಗದು ಹಾಗೂ 4 ಬಂಡಲ್ ಸಿಗರೇಟ್ ಪ್ಯಾಕ್ ಗಳನ್ನು ಕಳವು ಮಾಡಿಕೊಡು ಹೋಗಿರುತ್ತಾರೆಂದು ಅಬ್ದುಲ್ ರೆಹಮಾನ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ 
                ಶನಿವಾರಸಂತೆಯ ಹಾರೆಹೊಸೂರು ಗ್ರಾಮದ ನಿವಾಸಿಯಾದ ಶಂಕರಯ್ಯ ಎಂಬುವವರಿಗೆ 75 ವರ್ಷ ಪ್ರಾಯವಾಗಿದ್ದು, ಇವರು ಸ್ವಲ್ಪ ಬುದ್ದಿಮಾಂದ್ಯರಾಗಿದ್ದು, ದಿನಾಂಕ 04-06-2017 ರಂದು ಮನೆಯಲ್ಲಿದ್ದವರು ಕಾಣೆಯಾಗಿದ್ದು, ಈ ಬಗ್ಗೆ ಮಗ ಲೋಕೇಶರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಟ್ರ್ಯಾಕ್ಟರ್ ಅಪಘಾತ ವ್ಯಕ್ತಿಯ ದುರ್ಮರಣ
                   ದಿನಾಂಕ 10-06-2017 ರಂದು ಸೋಮವಾರಪೇಟೆಯ ಬಜೆಗುಂಡಿಯ ನಿವಾಸಿ ಅವಿನಾಶ್, ಮಂಜುನಾಥ ಮತ್ತು ಬಸವರಾಜುರವರು ಬೇಳೂರು ಬಸವನಹಳ್ಳಿ ಗ್ರಾಮಕ್ಕೆ ಟಿಂಬರ್ ಕೆಲಸಕ್ಕೆ ಹೋಗಿದ್ದು, ಟಿಂಬರ್ ಕೆಲಸ ಮಾಡುವ ಸ್ಥಳದಲ್ಲಿ ಕೆಎ-46-ಟಿ-2100 ರ ಟ್ರ್ಯಾಕ್ಟರನ್ನು ಅದರ ಚಾಲಕ ರಂಗರವರು ಟ್ರ್ಯಾಕ್ಟರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಲಸ ಮಾಡುತ್ತಿದ್ದ ಬಸವರಾಜುರವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಸವರಾಜುರವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಬಗ್ಗೆ ಅವಿನಾಶ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ
                      ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡ ಗ್ರಾಮದಲ್ಲಿ ವರದಿಯಾಗಿದೆ. ಕರಡ ಗ್ರಾಮದ ಥೋಮಸ್ ರವರ ಲೈನ್ ಮನೆಯಲ್ಲಿ ವಾಸವಿರುವ ಪಾಂಚಾಲಿ ಎಂಬುವವರ ಅಳಿಯ ಪಳನಿ ಎಂಬುವವರು ದಿನಾಂಕ 28-05-2017 ರಂದು ಮನೆ ಬಿಟ್ಟು ಹೋಗಿದ್ದು, ದಿನಾಂಕ 10-06-2017 ರಂದು ಪಾಂಚಾಲಿಯವರು ಸಾಹುಕಾರರ ತೋಟದಲ್ಲಿ ಗೊಬ್ಬರ ಹಾಕುತ್ತಿರುವಾಗ ಮರವೊಂದಕ್ಕೆ ಪಳನಿಯು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು, ಈ ಬಗ್ಗೆ ಪಾಂಚಾಲಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.