Sunday, June 18, 2017

ವ್ಯಕ್ತಿಯ ಮೇಲೆ ಹಲ್ಲೆ
                          ದಿನಾಂಕ 16/06/2017ರಂದು ವಿರಾಜಪೇಟೆ ಬಳಿಯ ಅಮ್ಮತ್ತಿ ಕಾರ್ಮಾಡು ಗ್ರಾಮದ ಟೈಟಾನಿಕ್‌ ಬಾರ್‌ನಲ್ಲಿ ವ್ಯವಸ್ಥಾಪಕ ಹರೀಶ್‌ರವರು ಕೆಲಸ ಮಾಡಿಕೊಂಡಿರುವಾಗ ಅದೇ ಗ್ರಾಮದ ನಿವಾಸಿಗಳಾದ ಕುಟ್ಟಂಡ ಬೋಪಣ್ಣ ಮತ್ತು ಉದ್ದಪಂಡ ದರ್ಶನ್‌ ಎಂಬವರು ಬಂದು ಈ ಹಿಂದೆ ಹೊರಗಿನಿಂದ ತಂದ ಮದ್ಯವನ್ನು ಬಾರ್‌ನಲ್ಲಿ ಸೇವಿಸುವ ಬಗ್ಗೆ ಹರೀಶ್‌ರವರು ಆಕ್ಷೇಪಿಸಿದ ವಿಚಾರವಾಗಿ ಜಗಳವಾಡಿ ಇಬ್ಬರೂ ಸೇರಿಕೊಂಡು ಹರೀಶ್‌ರವರ ಮೇಲೆ ಹಲ್ಲೆ ಮಾಡಿ ಹರೀಶ್‌ರವರ ಮೊಬೈಲ್‌ ಫೋನನ್ನು ಕೆಳಗೆ ಎಸೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಂಗಡಿ ಕಳವು
                           ಶನಿವಾರಸಂತೆ ನಿವಾಸಿ ಮಹೇಶ್‌ ಕೆ.ಟಿ. ಎಂಬವರು ಶನಿವಾರಸಂತೆ ನಗರದಲ್ಲಿ ಮೂಕಾಂಬಿಕಾ ಕಾಫಿ ಲಿಂಕ್ಸ್‌ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದು ದಿನಾಂಕ 17/06/2017ರಂದು ಓರ್ವ ಮಧ್ಯ ವಯಸ್ಕ ವ್ಯಕ್ತಿ ಬಂದು ಸುಮಾರು 4 ಕೆ.ಜಿ.ಕರಿಮೆಣಸು ಖರೀದಿಸಿ ಹಣಕ್ಕೆ ಚಿಲ್ಲರೆ ಇಲ್ಲದ ಕಾರಣ ಕರಿ ಮೆಣಸನ್ನು ಅಲ್ಲೇ ಬಿಟ್ಟು ಹೋಗಿದ್ದು ನಂತರ ಸಂಜೆ ವೇಳೆ ಅದೇ ವ್ಯಕ್ತಿ ಬಂದು ಕರಿಮೆಣಸನ್ನು ಖರೀದಿಸಿ ಹಣ ನೀಡುವ ಹೊತ್ತಿಗೆ ಮಹೇಶ್‌ರವರು ವ್ಯಾಪಾರಕ್ಕೆಂದು ತಂದಿದ್ದ 2 ಲಕ್ಷ ಹಣವನ್ನು ಕ್ಯಾಷ್ ಡ್ರಾಯರ್‌ಗೆ ಹಾಕಿದ್ದು ಆ ವ್ಯಕ್ತಿಯು ಹೊರಟು ಹೋಗಿರುವುದಾಗಿದೆ. ತದನಂತರ ಸ್ವಲ್ಪ ಹೊತ್ತಿಗೆ ಸುಮಾರು 25 ವರ್ಷ ಪ್ರಾಯದ ಮತ್ತೋರ್ವ ವ್ಯಕ್ತಿ ಬಂದು ಆತನ ಬಳಿ ಸುಮಾರು 35 ಕೆ.ಜಿ. ಕರಿಮೆಣಸು ಇದ್ದು ಖರೀದಿಸುವಂತೆ ಕೇಳಿದಾಗ ಮಹೇಶ್‌ರವರು ಒಪ್ಪಿ ಕರಿ ಮೆಣಸನ್ನು ತರಲು ಹೇಳಿದ್ದು ಆಗ ಆ ವ್ಯಕ್ತಿ ಕರಿ ಮೆಣಸು ಕಾರಿನಲ್ಲಿದ್ದು ಕಾರಿನ ಟಯರ್ ಪಂಕ್ಚರ್‌ ಆಗಿದ್ದು ಕಾರಿನ ಬಳಿ ಬರುವಂತೆ ಕರೆದಾಗ ಮಹೇಶ್‌ರವರು ಆತನೊಂದಿಗೆ ಸುಮಾರು 50 ಮೀಟರ್‌ನಷ್ಟು ದೂರ ಮಾರುಕಟ್ಟೆ ರಸ್ತೆಯಲ್ಲಿ ಹೋಗಿದ್ದು ಕಾರು ಕಾಣದೇ ಇದ್ದು ಆಗ ಆ ವ್ಯಕ್ತಿ ಕಾರನ್ನು ಟಯರ್ ಪಂಕ್ಚರ್ ಸರಿಪಡಿಸಲು ತೆಗೆದುಕೊಂಡು ಹೋಗಿರಬಹುದೆಂದು ತಿಳಿಸಿದ್ದು ನಂತರ ಮಹೇಶ್‌ರವರು ಅಂಗಡಿಗೆ ಬಂದಾಗ ಅಂಗಡಿಯಲ್ಲಿ ಅವರ ಕ್ಯಾಷ್‌ ಡ್ರಾಯರನ್ನು  ಮೀಟಿ ತೆಗೆದು ಒಳಗಿದ್ದ 2 ಲಕ್ಷ ರೂ ಹಣವನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                        ದಿನಾಂಕ 16/06/2017ರಂದು ಸಂಪಾಜೆ ಬಳಿಯ ಪೆರಾಜೆ ಗ್ರಾಮದ ಭವಾನಿ ಶಂಕರ್‌ ಎಂಬವರ ಮನೆಯಲ್ಲಿ ಪಾಷಾಣ ಮೂರ್ತಿ ದೈವಕ್ಕೆ ಎಡೆ ಇಡುವ ಕಾರ್ಯಕ್ರಮವಿದ್ದು ಅಲ್ಲಿ ಭವಾನಿ  ಶಂಕರ್‌ರವರು ವಿಪರೀತ ಮದ್ಯಪಾನ ಮಾಡಿ ಪತ್ನಿ ಜಯಂತಿ ಮತ್ತು ಮಗ ಅಭಿಷೇಕ್‌ರವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಆ ಕಾರಣಕ್ಕೆ ಜಯಂತಿ ಮತ್ತು ಅಭಿಷೇಕ್‌ ಇಬ್ಬರೂ ಜಯಂತಿಯವರ ತಾಯಿಯ ಮನೆಗೆ ಹೋಗಿದ್ದು ದಿನಾಂಕ 17/06/17ರಂದು ವಾಪಾಸು ಮನೆಗೆ ಬಂದಾಗ ಪತಿ ಭವಾನಿ ಶಂಕರ್‌ ರವರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ 

ದನ ಕಳವು 
                     ವಿರಾಜಪೇಟೆ ಬಳಿಯ ಆರ್ಜಿ ಗ್ರಾಮ ನಿವಾಸಿ ರವೀದ್ರನಾಥ್ ಕಾಮತ್‌ ಎಂಬವರ  ದನಗಳನ್ನು ದಿನಾಂಕ 7/6/2017ರಂದು ಕೆಲಸಗಾರ ಮಣಿ ಎಂಬಾತನು ಗದ್ದೆಗೆ ಮೇಯಲು ಬಿಟ್ಟಿದ್ದು ಸಂಜೆ ಬಂದು ನೋಡುವಾಗ ಸುಮಾರು ರೂ.1,25,000 ಮೌಲ್ಯದ 10 ದನಗಳು ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾ ಅಫಘಾತ
                     ದಿನಾಂಕ 17/06/2017ರಂದುವಿರಾಜಪೇಟೆ ನಿವಾಸಿ ಅಂತೋಣಿ ಎಂಬವರು ಜೋನ್‌ ಎಂಬವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಬಿ-1068ರ ರಿಕ್ಷಾದಲ್ಲಿ ಬೂದಿಮಾಳಕ್ಕೆ ಹೋಗಿ ವಾಪಾಸು ಬರುತ್ತಿರುವಾಗ ಬೂದಿಮಾಳ ಸೇತುವೆ ಬಳಿ ಜೋನ್‌ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಿಕ್ಷಾ ಜೋನ್‌ ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಅಂತೋಣಿಯವರಿಗೆ  ಗಾಯಗಳಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.