Tuesday, June 20, 2017

ರಸ್ತೆ ಅಫಘಾತ, ಮಹಿಳೆ ಸಾವು 
                            ದಿನಾಂಕ 16/6/2017ರಂದು ಕುಶಾಲನಗರ ಬಳಿಯ ಕಾಳಮ್ಮ ಕಾಲೋನಿ ನಿವಾಸಿ ಕಾವೇರಮ್ಮ ಎಂಬ ಮಹಿಳೆಯು ನಡೆದುಕೊಂಡು ಕುಶಾಲನಗರದ ಮಹಾರಾಜ ಜಂಕ್ಷನ್‌ ಕಡೆಯಿಂದ ಬರುತ್ತಿರುವಾಗ ಕೊಪ್ಪದ ಕಡೆಯಿಂದ ಕೆಎ-12-ಕ್ಯು-6815ರ ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾವೇರಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾವೇರಮ್ಮ ಹಾಗೂ ಸ್ಕೂಟರ್‌ನಲ್ಲಿದ್ದ ಆಸಿಫ್‌ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು  ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ಕಾವೇರಮ್ಮನವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18/07/2017ರಂದು ಮೃತರಾಗಿದ್ದು ಕುಶಾಲನಗರ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಗಂಡಸು ಕಾಣೆ
                ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ನಿವಾಸಿ  ಪಿ.ಬಿ.ಶೋಭಾ ಎಂಬವರ ತಮ್ಮ ಪಿ.ಎಂ.ಮೋಹನ ಎಂಬವರು ಸುಮಾರು ಆರು ತಿಂಗಳ ಹಿಂದೆ ಯಾವುದೋ ಕೆಲಸಕ್ಕಾಗಿ ಮೈಸೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಇದುವರೆಗೂ ಮರಳಿ ಬಾರದಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಅಫಘಾತ
                  ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಷಡಕ್ಷರಿ ಎಂಬವರು ದಿನಾಂಕ 16/06/2017ರಂದು ರಾತ್ರಿ ವೇಳೆ ಶನಿವಾರಸಂತೆಯಲ್ಲಿ ಕೆಲಸ ಮುಗಿಸಿ ಅವರ ಕೊಠಡಿಯ ಕಡೆಗೆ ಹೋಗುತ್ತಿರುವಾಗ ನಗರದ ಬಿ.ಎಸ್‌.ಎನ್‌.ಎಲ್. ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕೆಎ-12-ಆರ್‌-1249ರ ಮೋಟಾರು ಸೈಕಲನ್ನು ಅದರ ಚಾಲಕ ಗಿರೀಶ್‌ ಎಂಬಾತನು ಅತಿ ವೇಗ ಮತ್ತು ಆಜಾಗರೂಕತೆಯಿಂದ  ಚಾಲಿಸಿಕೊಂಡು ಬಂದು ಷಡಕ್ಷರಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡ ಷಡಕ್ಷರಿರವರನ್ನು ಚಿಕಿತ್ಸೆ ಬಗ್ಗೆ ಹಾಸನದ ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ  
                    ದಿನಾಂಕ 16/06/2017ರಂದು ಶ್ರೀಮಂಗಲ ಬಳಿಯ ಬೀರುಗ ನಿವಾಸಿ ವಿನಯ್‌ ಎಂಬವರು ತಾವಳಗೇರಿ ಗ್ರಾಮದ ಅವರ ಸೋದರ ಮಾವನ ಮನೆಗೆ ಭದ್ರಕಾಳಿ ಹಬ್ಬಕ್ಕೆಂದು ಹೋಗಿ ವಾಪಾಸು ಮನೆಗೆ ಬರುತ್ತಿರುವಾಗ  ದಾರಿ  ಮಧ್ಯೆ ಮಚ್ಚಾಮಾಡ ಸೋಮಣ್ಣ  ಮತ್ತು ಅವರ ಸಂಗಡಿಗರು ಕ್ಷುಲ್ಲಕ ಕಾರಣಕ್ಕೆ ವಿನಯ್‌ರವರೊಂದಿಗೆ ಜಗಳವಾಡಿ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದಾರೆ. 

ಸೋಲಾರ್ ಯಂತ್ರ ಕಳವು
                     ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಸಿ.ಬಿ. ಶಂಕು ಯಾನೆ ತಿಮ್ಮಯ್ಯ ಎಂಬವರು ಅವರ ತೋಟಕ್ಕೆ ಕಾಡಾನೆ ಹಾವಳಿಯನ್ನು ತಪ್ಪಿಸುವ ಸಲುವಾಗಿ ಅಳವಡಿಸಿದ್ದ ಸುಮಾರು ರೂ.22,000/- ಮೌಲ್ಯದ ಸೋಲಾರ್ ವಿದ್ಯುತ್‌ ಯಂತ್ರ, ಸೋಲಾರ್ ಪ್ಯಾನೆಲ್ ಮತ್ತು ಬ್ಯಾಟರಿಯನ್ನು ದಿನಾಂಕ 17/06/2017 ರಿಂದ 19/06/2017ರ ನಡುವೆ ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಕಳವು
                 ದಿನಾಂಕ 18/06/2017ರಂದು ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿ ನಿವಾಸಿ ಜೈವಿನ್ ಎಂಬವರು ಅವರ ಸ್ನೇಹಿತ ಬಿ.ವಿ.ಮನು ಎಂಬವರ ಕೆಎ-51-ಪಿ-4039ರ ಇಂಡಿಗೋ  ಕಾರನ್ನು ಜೈವಿನ್‌ರವರ ವಾಸದ ಮನೆಯ ಬಳಿ ರಸ್ತೆಯಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ 19/06/2017ರಂದು ಬೆಳಿಗ್ಗೆ ನೋಡಿದಾಗ ನಿಲ್ಲಿಸದ್ದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಫಘಾತ
ದಿನಾಂಕ 19/06/2017ರಂದು ಕುಸಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಯ ವಾಹನ ಚಾಲಕ ರಾಗಿರುವ ಟಿ.ಆರ್‌.ರಾಜುರವರು ಕರ್ತವ್ಯ ಮುಗಿಸಿ ಸ್ವಂತ ಕೆಲಸದ ನಿಮಿತ್ತ  ಅವರ   ಮೋಟಾರು ಬೈಕ್ ಸಂಖ್ಯೆ ಕೆಎ-12-ಹೆಚ್‌-4114ರಲ್ಲಿ ಕುಶಾಲನಗರದ ರೈತ ಭವನದ ಜಂಕ್ಷನ್ ಬಳಿ ತಲುಪುವಾಗ ರೈತ ಭವನದ ಒಳಗಿನ ರಸ್ತೆಯಿಂದ ಕೆಎ-12-ಹೆಚ್‌-2137ರ ಮೋಟಾರು ಬೈಕನ್ನು ಅದರ ಚಾಲಕ ಶಶಿಕುಮಾರ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆಎ-12-ಬಿ-2524ರ ರಿಕ್ಷಾಕ್ಕೆ ಡಿಕ್ಕಿಪಡಿಸಿ ನಂತರ ನಂತರ ರಾಜುರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.