Monday, June 19, 2017

ಪತ್ನಿಯ ಮೇಲೆ ಹಲ್ಲೆ
                         ದಿನಾಂಕ 18/06/2017ರಂದು ಪೊನ್ನಂಪೇಟೆ ಬಳಿಯ ಬೆಸಗೂರು ಗ್ರಾಮದ ಜಯಂತಿ ಕಾಲೋನಿ ನಿವಾಸಿ ಗಿರೀಶರವರನ್ನು ಆತನ ಪತ್ನಿ ಸುಮಿತ್ರ ಎಂಬವರು ಎರಡು ದಿನಗಳಿಂದ ಗಿರೀಶರವರು ಮನೆಗೆ ಬಾರದ ಬಗ್ಗೆ ವಿಚಾರಿಸಿದ್ದಕ್ಕೆ  ಗಿರೀಶರವರು ಸುಮಿತ್ರರವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿದುದನ್ನು ಸುಮಿತ್ರರವರ ತಾಯಿ ಗೌರಿರವರು ಆಕ್ಷೇಪಿಸಿದ ಕಾರಣಕ್ಕೆ ಗಿರೀಶರವರು ಕತ್ತಿಯಿಂದ ಗೌರಿರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 18/06/2017ರಂದು ಸೋಮವಾರಪೇಟೆ ಬಳಿಯ ಹಾನಗಲ್ ನಿವಾಸಿ ಬಿ.ಎಸ್.ಸುನಿಲ್ ಎಂಬವರು ಸೋಮವಾರಪೇಟೆ ನಗರದ ಕಕ್ಕೆಹೊಳೆ ಜಂಕ್ಷನ್  ಬಳಿ ಮಿಥುನ್  ಎಂಬವರೊಂದಿಗೆ ಮಾತನಾಡುತ್ತಿರುವಾಗ ಸೋಮವಾರಪೇಟೆ ನಗರದ ಆಸ್ಟ್ರಾ ಕಾಫಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಓರ್ವ ವ್ಯಕ್ತಿ ಬಂದಿದ್ದು ಅದನ್ನು ಸುನಿಲ್‌ರವರು ವಿಚಾರಿಸಿದಾಗ ಆ ವ್ಯಕ್ತಿಯು ಬ್ಲೇಡ್‌ನಿಂದ ಸುನಿಲ್‌ರವರನ್ನು ತಿವಿದು ಗಾಯಗೊಳಿಸಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಗೆ ಕಾರು ಡಿಕ್ಕಿ
                   ದಿನಾಂಕ 18/06/2017ರಂದು ಶನಿವಾರಸಂತೆ ಬಳಿಯ ದುಂಡಳ್ಳಿ ಅರಣ್ಯ ಕಚೇರಿ ಮುಂಭಾಗದ ಚಂರಂಡಿಯಲ್ಲಿ ಸುಂದರಮ್ಮ ಎಂಬ ಮಹಿಳೆಯೊಬ್ಬರು ಬಿದ್ದಿದ್ದು ಆಕೆಯನ್ನು ಕೂಜಗೇರಿ ನಿವಾಸಿ ಪ್ರಸನ್ನ ಎಂಬವರು ಎತ್ತಿ ವಿಚಾರಿಸಿದಾಗ ಆಕೆಯು  ಊರಿನಿಂದ ಶನಿವಾರಸಂತೆ ನಗರಕ್ಕೆ ಹೋಗುತ್ತಿರುವಾಗ ಯಾವುದೋ ಒಂದು ಕಾರಿನ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಾಲಿಸಿಕೊಂಡು ಬಂದು ಆಕೆಗೆ ಡಿಕ್ಕಿಪಡಿಸಿದ ಪರಿಣಾಮ ಆಕೆ ಚರಂಡಿಯೊಳಕ್ಕೆ ಬಿದ್ದು ಹೋಗಿದ್ದು ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಹೊರಟು ಹೋದ ಕಾರಣದಿಂದ ಕಾರಿನ ಸಂಖ್ಯೆ ತಿಳಿಯಲು ಸಾಧ್ಯವಾಗಿರುವುದಿಲ್ಲ ಎಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.