Thursday, June 22, 2017

ಬೈಕ್‌ ಅಫಘಾತ
                        ದಿನಾಂಕ 20/6/2017ರಂದು ಕುಶಾಲನಗರದ ಮಾರುಕಟ್ಟೆ ರಸ್ತೆ ಬಳಿ ಲಿಯಾಕತ್ ಆಲಿ ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಹಾರಾಜ ಜಂಕ್ಷನ್ ಕಡೆಯಿಂದ ಕೆಎ-12-ಹೆಚ್‌-5732ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಲಿಯಾಕತ್‌ ಆಲಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಲಿಯಾಕತ್‌ ಆಲಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಸಾವು
                        ದಿನಾಂಕ 20/06/2017ರಂದು ಶ್ರೀಮಂಗಲ ಬಳಿಯ ಕಾನೂರು ನಿವಾಸಿ ಪಣಿ ಎರವರ ಗಣೇಶ ಎಂಬಾತನು ಕುಮಟೂರು ಗ್ರಾಮದ ಕಳ್ಳಂಗಡ ಪೂವಯ್ಯ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಯಾವುದೋ ಹಳೆಯ ಮಾತ್ರೆ ಸೇವಿಸಿ ತೀವ್ರವಾಗಿ ಅಸ್ವಸ್ಥನಾದ ಗಣೇಶನನ್ನು ಪೂವಯ್ಯನವರು ಕೂಡಲೇ ಚಿಕಿತ್ಸೆಗಾಗಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21/06/2017ರಂದು ಗಣೇಶನು ಮೃತನಾಗಿರುವುದಾಗಿ ನೀಡಿದ ದೂರಿನ ಮೇರೆಗೆ  ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                    ದಿನಾಂಕ 21/06/2017ರಂದು ನಾಪೋಕ್ಲು ಬಳಿಯ ನರಿಯಂದಡ ನಿವಾಸಿ ಮಹಮದ್ ಹನೀಫ್‌ ಎಂಬವರು ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಎಲ್-8324ರಲ್ಲಿ ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯ ಕುಲುಮೆ ಜಂಕ್ಷನ್ ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-12-ಎನ್-4201ರ ಆಲ್ಟೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹಮದ್ ಹನೀಫ್‌ರವರ  ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿ ಬೈಕಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಸಾವು
                     ಸಿದ್ದಾಪುರ ಬಳಿಯ ಬೈರಂಬಾಡ ನಿವಾಸಿ ಪ್ರಭಾವತಿ ಎಂಬವರ ಪತಿ ರವಿ ಎಂಬವರಿಗೆ ಸುಮಾರು 6 ವರ್ಷಗಳ ಹಿಂದೆ ಲಕ್ವ ಹೊಡೆದಿದ್ದು ನಡೆದಾಡಲು ಸಾಧ್ಯವಾಗದೆ ಮನೆಯಲ್ಲಿಯೇ ಇದ್ದು ದಿನಾಂಕ 21/06/2017ರಂದು ಮದ್ಯಾಹ್ನ ಪ್ರಭಾವತಿಯವರು ಮನೆಯಲ್ಲಿ ಊಟ ಮಾಡಿ ಕೆಲಸಕ್ಕೆ ಹೋಗಿದ್ದು ವಾಪಾಸು ಬಂದಾಗ ಪತಿ ರವಿಯವರು ಮಲಗಿದ್ದು ಅವರನ್ನು ತಟ್ಟಿ ಕರೆದು ಎಬ್ಬಿಸಿದಾಗ ಆತನ ಮೈಉ ತಣ್ಣಗಾಗಿದ್ದು ಕೂಡಲೆ ಆಕೆಯು ಕಿರುಚಿಕೊಂಡಿದ್ದು ಆಕೆಯ ಕಿರುಚಾಟ ಕೇಳಿ ಪಕ್ಕದ ಮನೆಯ ಯಶೋಧರ ಎಂಬವರು ಬಂದು ನೋಡಿದಾಗ ರವಿಯವರು ಮೃತಪಟ್ಟಿರುವುದಾಗಿ ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.