Friday, June 23, 2017

ಬೈಕ್ ಅವಘಡ, ಗಾಯ
                       ದಿನಾಂಕ 21/06/2017ರಂದು ಪಿರಿಯಾಪಟ್ಟಣ ತಾಲೂಕಿನ ದೊರೆಕೆರೆ ನಿವಾಸಿ ಶಿವಕುಮಾರ್ ಎಂಬವರ ಅಕ್ಕನ ಮಗ ಮಂಜು ಎಂಬಾತನು ಆತನ ಮೋಟಾರು ಸೈಕಲ್ ಸಂಖ್ಯೆ ಕೆಎ-45-ಎಕ್ಸ್-3394ರಲ್ಲಿ ಸೋಮವಾರಪೇಟೆಯಿಂದ ಕುಶಾಲನಗರ ಬಳಿಯ ಕೂಡಿಗೆ ಕೊಪ್ಪಲು ಬಳಿ ಬರುತ್ತಿರುವಾಗ ರಸ್ತೆಯಲ್ಲಿ ಹಸುವೊಂದು ಅಡ್ಡ ಬಂದ ಪರಿಣಾಮ ಬೈಕು ಮಂಜುರವರ ನಿಯಂತ್ರಣ ತಪ್ಪಿ ಅಫಘಾತಕ್ಕೀಡಾದ ಪರಿಣಾಮ ಮಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ
                  ದಿನಾಂಕ 22/06/2017ರಂದು ಶನಿವಾರಸಂತೆ ಠಾಣೆಯ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಗಸ್ತು ಕರ್ತವ್ಯದಲ್ಲಿದ್ದಾಗ ಕಿರು ಬಿಳಹ ಗ್ರಾಮದ ಕೆಲವೆಡೆ ಮಂಜು ಮತ್ತು ಇತರರು ಸೇರಿಕೊಂಡು ಸುಮಾರು ರೂ.30,000/- ಮೌಲ್ಯದ ಮರಳನ್ನು ಅಕ್ರಮವಾಗಿ ಶೇಖರಿಸಿಟ್ಟಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಮರಳನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಿಕ್ಷಾಕ್ಕೆ ಕಾರು ಡಿಕ್ಕಿ
                    ದಿನಾಂಕ 22/6/2017ರಂದು ಸೋಮವಾರಪೇಟೆಯ ಬಜೆಗುಂಡಿ ನಿವಾಸಿ ಬಿ.ಜಿ.ಧನಂಜಯ ಎಂಬವರು ಅವರ ಆಟೋ ರಿಕ್ಷಾ ಸಂಖ್ಯೆ ಕೆಎ-12-ಎ-9594ರಲ್ಲಿ ಅವರ ಮಕ್ಕಳಾದ ಗಾಯನ ಮತ್ತು ಮನುಶ್ರೀರವರನ್ನು ಕರೆದುಕೊಂಡು ಸೋಮವಾರಪೇಟೆಯಿಂದ ಬಜೆಗುಂಡಿಗೆ ಹೋಗುತ್ತಿರುವಾಗ ಬಜೆಗುಂಡಿಯ ಮಾರಿಯಮ್ಮ ದೇವಸ್ಥಾನದ ಬಳಿ ಎದುರುಗಡೆಯಿಂದ ಕೆಎ-09-ಜೆಡ್-6336ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು  ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಧನಂಜಯರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾ ಮಗುಚಿಕೊಂಡು ಅದರಲ್ಲಿದ್ದ ಗಾಯನ ಮತ್ತು ಮನುಶ್ರೀರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಕಳವು
                  ದಿನಾಂಕ 22/06/2017ರಂದು ಮುಂಜಾನೆ 5:00 ಗಂಟೆಗೆ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ನಿವಾಸಿ ಎಂ.ಎ.ವಾಜಿದ್ ಎಂಬವರು ಅವರ ಕೆಎ-12-ಎಲ್-4852ರ ಮೋಟಾರು ಸೈಕಲನ್ನು ಸಿದ್ದಾಪುರ ನಗರದ ವಿರಾಜಪೇಟೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲೇ ಇದ್ದ ಮಸೀದಿಗೆ ನಮಾಜು ಮಾಡಲೆಂದು ತೆರಳಿದ್ದು ನಂತರ ಬೆಳಿಗ್ಗೆ 9:30 ಗಂಟೆಗೆ ಬಂದು ನೋಡುವಾಗ ಅಲ್ಲಿ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ  ದೂರಿನ ಮೇರೆಗೆ  ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                       ದಿನಾಂಕ 22/06/2017ರಂದು ಪುತ್ತೂರು ನಿವಾಸಿ ಶಶಾಂಕ್‌ ಎಂಬವರು ಅವರ ತಾಯಿ ತಂಗಿ ಮತ್ತು ಸ್ನೇಹಿತರೊಂದಿಗೆ ಅವರ ಕೆಎ-21-ಎನ್-7574ರ ಕಾರಿನಲ್ಲಿ ಮಡಿಕೇರಿಗೆ ಪ್ರವಾಸಕ್ಕೆಂದು ಬರುತ್ತಿರುವಾಗ ಮಡಿಕೇರಿ ಬಳಿಯ ಕಾಟಕೇರಿಯಲ್ಲಿ ಎದುರುಗಡೆಯಿಂದ ಕೆಎಲ್-80-ಕೆ-755ರ ಅದರ ಚಾಲಕ ಕೇರಳದ ಕಾಸರಗೋಡಿನ ಅಹಮದ್ ಅಶೀಕ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು   ಶಶಾಂಕ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ  ಪರಿಣಾಮ ಕಾರಿನಲ್ಲಿದ್ದ ಶಶಾಂಕ್‌ರವರ ತಾಯಿ ಜ್ಯೋತಿ ಮತ್ತು ಸ್ನೇಹಿತ ವಿಷ್ಟುರವರಿಗೆ ಗಾಯಗಳಾಗಿ ಕಾರಿಗೆ ಹಾನಿಯುಂಟಾಗಿರುವುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.