Saturday, June 24, 2017

ಅಪಘಾತ ಪ್ರಕರಣ
                ದಿನಾಂಕ 23-06-2017 ರಂದು ಸೋಮವಾರಪೇಟೆಯ ನಿವಾಸಿ ಲಕ್ಷ್ಮಣ ಮತ್ತು ತಮ್ಮಣ್ಣೇಗೌಡರವರು ಮೋಟಾರು ಸೈಕಲಿನಲ್ಲಿ ಕುಶಾಲನಗರದಿಂದ ಹೋಗುತ್ತಿರುವಾಗ ಮದಲಾಪುರ ಜಂಕ್ಷನ್ ತಲುಪುವಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಚಾಲಕ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಚಾಲಕ ಲಕ್ಷ್ಮಣ ಮತ್ತು ತಮ್ಮಣ್ಣೇಗೌಡರಿಗೆ ಗಾಯಗಳಾಗಿದ್ದು  ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ವ್ಯಕ್ತಿಯ ಮೇಲೆ ಹಲ್ಲೆ
               ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ತಾಲೂಕಿನ  ಸುಳುಗೋಡು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 23-06-2017 ರಂದು ಸುಳುಗೋಡು ಗ್ರಾಮದ ನಿವಾಸಿ ಕಾಂಡೇರ  ಉತ್ತಪ್ಪನವರು ರಸ್ತೆಯಲ್ಲಿ ಹೋಗುತ್ತಿರುವಾಗ  ಅದೇ ಗ್ರಾಮದ ಕಾಂಡೇರ  ವಸಂತಕುಮಾರ್, ಅಕ್ಷಯ್ ಮತ್ತು ಬಾದಲ್ ಎಂಬುವವರು ಉತ್ತಪ್ಪನವರನ್ನು ದಾರಿ ತಡೆದು ವಿನಾ ಕಾರಣ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಉತ್ತಪ್ಪನವರು ನೀಡದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.