Thursday, June 29, 2017

ಅಕ್ರಮ ಮರಳು ಸಾಗಾಟ
                             ದಿನಾಂಕ 28/06/2017ರಂದು ವಿರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವಾಗಿ ದೊರೆತ ಖಚಿತ ಸುಳಿವಿನ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಕೆ.ಎಸ್‌.ನಾಗೇಂದ್ರಪ್ಪನವರು ಸ್ಥಳಕ್ಕೆ ತೆರಳಿದಾಗ ಕಂಡಂಗಾಲ ಗ್ರಾಮದಲ್ಲಿ ಕೆಎ-12-ಎ-8301ರ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಯಾವುದೇ ಪರವಾನಗಿಯಿಲ್ಲದೆ ಸಾಗಿಸುತ್ತಿದ್ದ ಮರಳು ಹಾಗೂ ಲಾರಿಯನ್ನು ವಶಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.