Saturday, June 3, 2017

ವ್ಯಕ್ತಿಯ ಆತ್ಮಹತ್ಯೆ 
              ವ್ಯಕ್ತಿಯೊಬ್ಬರು ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ನಗರದ ಶಾರದ ಲಾಡ್ಜ್ ನಲ್ಲಿ ನಡದಿದೆ. ಹಾಸನ ಜಿಲ್ಲೆಯ ಚಿಕ್ಕಹೊನ್ನೇನ ಹಳ್ಳಿಯ ನಿವಾಸಿಯಾದ ಕೃಷ್ಣಪ್ಪನವರು ಕೂಗುರುವಿನಲ್ಲಿರುವ ಕಾಫಿತೋಟವನ್ನು ವ್ಯವಸಾಯ ಮಾಡುತ್ತಿದ್ದು ಅವರು ಜನರಿಂದ ಸಾಲವನ್ನು ಪಡೆದುಕೊಂಡಿದ್ದು ಸಾಲ ತೀರಿಸಲಾಗದೇ ಮನನೊಂದು ದಿನಾಂಕ 01-06-2017 ರಂದು ಸೋಮವಾರಪೇಟೆ ನಗರದ ಶಾರದ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಮಡಿರುವುದಾಗಿ ಮಗ ರಂಜಿತ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ನಗರ ಠಾಅಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಮರಳು ಸಾಗಾಟ 
                ದಿನಾಂಕ 02-06-2017 ರಂದು ಶನಿವಾರಸಂತೆ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಮರಿಸ್ವಾಮಿಯವರು ತಮ್ಮ ಸಿಬ್ಬಂದಿಯವರೊಂದಿಗೆ ರಾತ್ರಿ ಗಸ್ತುವಿನಲ್ಲಿರುವಾಗ ಕ್ಯಾತೆ ಗ್ರಾಮದ ಬಳಿ ಕೆಎ-12-ಬಿ-4838 ರ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದವರನ್ನು ಪತ್ತೆಹಚ್ಚಿ ಚಾಲಕ ಹಾಗೂ ಲಾರಿಯ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

ಮೋಟಾರು ಸೈಕಲ್ ಅಪಘಾತ ವ್ಯಕ್ತಿಯ ದುರ್ಮರಣ 
                  ದಿನಾಂಕ 02-06-2017 ರಂದು ಗುಡ್ಡೆಹೊಸೂರುವಿನ ಬೊಳ್ಳೂರು ಗ್ರಾಮದ ನಿವಾಸಿ ಉಮೇಶ ಎಂಬುವವರು ತನ್ನ ಸ್ನೇಹಿತ ಕುಮಾರರವರೊಂದಿಗೆ ಅವರ ಬಾಪ್ತು ಮೋಟಾರು ಸೈಕಲಿನಲ್ಲಿ ಕುಶಾಲನಗರಕ್ಕೆ ಹೋಗಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಂಡು ಮೋಟಾರು ಸೈಕಲಿನಲ್ಲಿ ವಾಪಾಸ್ಸು ಹೋಗುತ್ತಿರುವಾಗ ಬೊಳ್ಳೂರು ಗ್ರಾಮದ ರಸ್ತೆಯಲ್ಲಿ ಕುಮಾರರವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲ್ ಗಳು ಬಿದ್ದು ಇಬ್ಬರಿಗೆ ಗಾಯಗಳಾಗಿದ್ದು ಕುಮಾರರವರನ್ನು ಚಿಕಿತ್ಸೆಯ ಬಗ್ಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಕಮಾರರವರು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹಾವು ಕಚ್ಚಿ ವ್ಯಕ್ತಿಯ ಸಾವು 
                 ದಿನಾಂಕ 01-06-2017 ರಂದು ಸೋಮವಾರಪೇಟೆ ತಾಲೂಕಿನ ಕಿರಗಂದೂರ ಗ್ರಾಮದ ನಿವಾಸಿಯಾದ ರೇವಣ್ಣ ಮತ್ತು ಅವರ ಪತ್ನಿ ಬಸಮ್ಮನವರು ಮನೆಯಲ್ಲಿರುವಾಗ ಮನೆಯ ಳಗೆ ನಾಗರ ಹಾವು ನುಗ್ಗಿದ್ದು ಹಾವನ್ನು ಓಡಿಸುವಾಗ ರೇವಣ್ಣನವರ ಬಲಕೈಗೆ ಹಾವು ಕಚ್ಚಿದ್ದು, ರೇವಣ್ಣನವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.