Tuesday, June 13, 2017

ವ್ಯಕ್ತಿಯ ಸಾವು
              ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಿರುವಾಗ ಜಾರಿ ತೋಡಿಗೆ ಬಿದ್ದು ಮರಣ ಹೊಂದಿರುವ ಘಟನೆ ಮಡಿಕೇರಿ ತಾಲೂಕಿನ ಬಾವಲಿ ಗ್ರಾಮದಲ್ಲಿ ವರದಿಯಾಗಿದೆ. ಬಾವಲಿ ಗ್ರಾದಮ ನಿವಾಸಿ ತೀರ್ಥ ಪ್ರಸಾದ್ ಎಂಬುವವರು ದಿನಾಂಕ 12-06-2017 ರಂದು ತಮ್ಮ ಗದ್ದೆ ಬದಿಯ ತೋಡಿನಲ್ಲಿ ಕಾಡು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ತೋಡಿನೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆ ಪತ್ನಿ ಪಾಲಿಕರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಕಳವು
               ವಿರಾಜಪೇಟೆ ತಾಲೂಕಿನ ತಿತಿಮತಿಯ ನೋಕ್ಯ ಗ್ರಾಮದ ನಿವಾಸಿ ನಾಗೇಶ ಎಂಬುವವರು ಹಾಲಿ ಬೆಂಗಳೂರಿನಲ್ಲಿ ವಾಸವಿದ್ದು, ಸದರಿಯವರು ತಮ್ಮ ಜಮೀನಿನಲ್ಲಿ ಬೆಳೆದ 3 ಚೀಲ ಕರಿಮೆಣಸನ್ನು ಮನೆಯಲ್ಲಿಟ್ಟಿದ್ದು, ದಿನಾಂಕ 10-06-2017 ಮತ್ತು 11-06-2017 ರ ಮದ್ಯ ಯಾರೋ ಕಳ್ಳರು ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿ ಸುಮಾರು 55 ಕೆ ಜಿ ಯಷ್ಟು ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನಾಗೇಶರವರು ನೀಡಿದ ಪುಕಾರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿಯ ಸಾವು
                    ದಿನಾಂಕ 09-06-2017 ರಂದು ಕಾನೂರು ಗ್ರಾಮದ ನಿವಾಸಿ ಪ್ರವೀಣ ಎಂಬುವವರು ವಾಸುರವರ ತೋಟಕ್ಕೆ ಮರ ಕಪಾತು ಕೆಲಸಕ್ಕೆ ಹೋಗಿದ್ದು, ಮರಕ್ಕೆ ಹತ್ತಿ ಕಪಾತು ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 12-06-2017 ರಂದು ಮೃತಪಟ್ಟಿದ್ದು ಈ ಬಗ್ಗೆ ನಾಗರಾಜುರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.