Wednesday, June 14, 2017

ಬೈಕ್ ಅಪಘಾತ ವ್ಯಕ್ತಿಯ ದುರ್ಮರಣ
                  ಬೈಕ್ ಅಪಘಾತಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಕುಶಾಲನಗರಲ್ಲಿ ವರದಿಯಾಗಿದೆ. ಕುಶಾಲನಗರದ ಗೊಂದಿಬಸವನಹಳ್ಳಿ ನಿವಾಸಿ ಅಣ್ಣಯ್ಯ ಎಂಬುವವರು ದಿನಾಂಕ 13-06-2017 ರಂದು ಮೋಟಾರು ಸೈಕಲಿನಲ್ಲಿ ಗುಡ್ಡೆಹೊಸೂರುವಿಗೆ ಹೋಗುವಾಗ ನಿಂಯತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಅಣ್ಣಯ್ಯನವರ ತಾಯಿ ಪಾರ್ವತಮ್ಮನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ಸಿನಿಂದ ಬದ್ದು ವ್ಯಕ್ತಿಗೆ ಗಾಯ
              ದಿನಾಂಕ 13-06-2017 ರಂದು ಪ್ರಸನ್ನ ಎಂಬುವವರು ಕುಶಾಲನಗರದಿಂದ ಭಗವತಿ ಬಸ್ಸಿನಲ್ಲಿ ಹೋಗುತ್ತಿರುವಾಗ ಬಸ್ಸು ಹಿತ್ತಲಕೇರಿ ಎಂಬಲ್ಲಿಗೆ ತಲುಪುವಾಗ ಬಸ್ಸನ್ನು ಚಾಲಕ ಮುರುಗೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ಸಿನ ಹಿಂಬದಿ ಬಾಗಿಲಿನ ಬಳಿ ನಿಂತಿದ್ದ ಪ್ರಸನ್ನ ಎಂಬುವವರು ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ ಸಾವು
                       ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ನಗರದಲ್ಲಿ ವರದಿಯಾಗಿದೆ. ದಿನಾಂಕ 13-6-2017 ರಂದು ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿ ಬಳಿ ಅಂದಾಜು 50-55 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತಪಟ್ಟಿದ್ದು, ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.