Friday, June 16, 2017

ಬಾವಿಗೆ ಬಿದ್ದು ವ್ಯಕ್ತಿ ದುರ್ಮರಣ:

          ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ಹೆಗ್ಗಳ ಗ್ರಾಮದ ಎನ್.ಆರ್. ಮಂಜುನಾಥ ಎಂಬವರ ತಂದೆ 63 ವರ್ಷ ಪ್ರಾಯದ ಎನ್. ರಾಜನ್ ಎಂಬವರು ದಿನಾಂಕ 15-6-2017 ರಂದು ಹೆಗ್ಗಳ ಗ್ರಾಮದ ಬೂದಿಮಾಳ ಎಂಬಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು ಅದೇ ಗ್ರಾಮದ ಮೇದಪ್ಪ ಎಂಬವರ ನೀರಿನ ಬಾವಿಯನ್ನು ನೋಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

       ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೋಕು ಗಣಗೂರು ಗ್ರಾಮದಲ್ಲಿ ನಡೆದಿದೆ. ಗಣಗೂರು ಗ್ರಾಮದ ಎಸ್.ಎಸ್.ಮಂಜುನಾಥ ಎಂಬವರ ತಾಯಿಯ ತಮ್ಮ ಕಾತರಾಜು ಎಂಬವರು ಜೀವನದಲ್ಲಿ ಬೇಸತ್ತು ದಿನಾಂಕ 15-6-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎಸ್. ಎಸ್. ಮಂಜುನಾಥ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.