Saturday, June 17, 2017

ವ್ಯಾನಿಟಿ ಬ್ಯಾಗ್ ನಿಂದ ನಗದು ಕಳವು:

     ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ನಗದು ಹಣ ಕಳ್ಳತನವಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯವರಾದ ಕುಮಾರಿ ನಂದಶ್ರೀ ಎಂಬವರು ಮಡಿಕೇರಿನಗರದ ಸಮೀಪದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 16-6-2017 ರಂದು ಅಪರಾಹ್ನ 2-45 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಚಿಪ್ಸ್ ಅಂಗಡಿಯೊಂದಕ್ಕೆ ಚಿಪ್ಸ್ ಖರೀದಿಸಲು ಹೋಗಿ ಬ್ಯಾಗಿನಿಂದ ಹಣ ತೆಗೆದುಕೊಡಲು ನೋಡಿದಾಗ ಬ್ಯಾಗಿನಲ್ಲಿದ್ದ ಸಣ್ಣ ಪರ್ಸ್ ನಲ್ಲಿಟ್ಟಿದ್ದ ಸುಮಾರು 16,500/- ರೂ ನಗದು, 2 ಎಟಿಎಂ ಕಾರ್ಡ್ ಮತ್ತು ಆದಾರ್ ಕಾರ್ಡ್ ಗಳು ಕಾಣೆಯಾಗಿರುವುದು ಕಂಡು ಬಂದಿದು, ಅವುಗಳನ್ನು ಯಾರೋ ಕಳ್ಳರು ಫಿರ್ಯಾದಿ ನಂದಶ್ರೀರವರಿಗೆ ತಿಳಿಯದಂತೆ ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

     ಭಾಗಮಂಡಲ ಠಾಣಾ ಸರಹದ್ದಿನ ತಣ್ಣಿಮಾನಿ ಗ್ರಾಮದ ನಿವಾಸಿ ಶ್ರೀಮತಿ ಚಿತ್ರಾ ಎಂಬವರ ಪತಿ 30 ವರ್ಷ ಪ್ರಾಯದ ದಿನು ದೇವಯ್ಯ ರವರು ದಿನಾಂಕ 13-6-2017 ರಂದು ಅವರ ಮನೆಯ ಪಕ್ಕದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಹತ್ತಿರ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದು, ನಂತರ ಅಲ್ಲಿಂದ ಮನೆಗೆ ವಾಪಾಸಾಗದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮದ್ಯ ವ್ಯಸನಿಯ ಸಾವು:

     ಮದ್ಯವ್ಯಸನಿ ವ್ಯಕ್ತಿಯೋಬ್ಬರು ಅಸ್ವಸ್ಥರಾಗಿ ಸಾವನಪ್ಪಿದ್ದ ಘಟನೆ ಕುಶಾಲನಗರ ಪಟ್ಟಣದಿಂದ ವರದಿಯಾಗಿದೆ. ಕುಶಾಲನಗರದ ಮುಳ್ಳುಸೋಗೆ ಗ್ರಾಮದಲ್ಲಿ ವಾಸವಿರುವ ನೆಲ್ಸನ್ ಎಲೀಸ್ ಎಂಬವರ ತಮ್ಮ ಪ್ರಾಉ 62 ವರ್ಷದ ವಿಲ್ ಫ್ರೆಡ್ ಎಲೀಸ್ ಎಂಬವರು ತುಂಬಾ ಮದ್ಯವ್ಯಸನಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದು ದಿನಾಂಕ 16-6-2017 ರಂದು ಅಸ್ವಸ್ಥಗೊಂಡು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ. 

ವ್ಯಕ್ತಿ ಕಾಣೆ ಪ್ರಕರಣ ದಾಖಲು:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಮಧುರಮ್ಮ ಬಡಾವಣೆಯಲ್ಲಿ ವಾಸವಿರುವ ಶ್ರೀಮತಿ ಎಸ್.ಆರ್.ಮಣಿ ಎಂಬವರ ಗಂಡ ರಾಜಲಿಗಂ (38) ರವರು ಕಾರ್ಪೆಂಟ್ ಕೆಲಸ ಮಾಡಿಕೊಂಡಿದ್ದು ದಿನಾಂಕ 13-6-2016 ರಂದು ಮನೆಯಿಂದ ಸುಂಟಿಕೊಪ್ಪ ನಗರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಎಸ್.ಎಆರ್. ಮಣಿ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ಜಗಳ:

     ವಿರಾಜಪೇಟೆ ತಾಲೋಕು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಮಾಚಮಾಡ ಸೋಮಣ್ಣ ನವರು ದಿನಾಂಕ 16-6-2017 ರಂದು ತಾವಳಗೇರಿ ಗ್ರಾಮದಲ್ಲಿರುವ ಮಾರಿಯಮ್ಮ ದೇವಾಲಯಕ್ಕೆ ಹೋಗಿದ್ದು ಅಲ್ಲಿ ಮಲ್ಲೇಂಗಡ ಮುತ್ತಪ್ಪ, ವೈ.ಎಸ್. ವಿನಯ , ಗಣಪತಿ ಮತ್ತು ಕಾರ್ಯಪ್ಪನವರುಗಳು ಇದ್ದು, ಮಲ್ಲಂಗಡ ಮುತ್ತಪ್ಪನವರು ತೆರಿಗೆ ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೆ ಮೂವರು ಸೇರಿ ಕತ್ತಿಯಿಂದ ಕಡಿದು ಗಾಯಪಡಿಸಿದ್ದು ಅಲ್ಲದೆ ಕೋವಿಯಿಂದ ಗುಂಡು ಹಾರಿಸಿದ್ದು, ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.