Wednesday, June 21, 2017

 ಟಿಪ್ಪರ್ ಲಾರಿಗೆ ಕಾರು ಡಿಕ್ಕಿ:

ಟಿಪ್ಪರ್ ಲಾರಿಗೆ ಕಾರು ಡಿಕ್ಕಿಯಾಗಿ ಎರಡೂ ವಾಹನಗಳು ಜಖಂಗೊಂಡು ಕಾರಿನ ಚಾಲಕ ಗಾಯಗೊಂಡಿರುವ ಘಟನೆ ಮಡಿಕೇರಿ ಹತ್ತಿರದ ಕಾಟಕೇರಿಯಲ್ಲಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಕೆರೂರು`ಗ್ರಾಮದ ನಿವಾಸಿ ವಾಸು ಲಮಾಣಿ ಎಂಬವರು ಕೆಎ-21-ಎ-5756 ರ ಟಿಪ್ಪರ್ ಲಾರಿಯಲ್ಲಿ ಚಾಲಕರಾಗಿದ್ದು, ದಿನಾಂಕ 20-06-2017 ರಂದು ಸದರಿ ಲಾರಿಯನ್ನು ಮಡಿಕೇರಿಯಿಂದ ಪುತ್ತೂರಿಗೆ ಚಾಲನೆಮಾಡಿಕೊಂಡು ಹೋಗುತ್ತಿರುವಾಗ, ಸಮಯ ಪೂರ್ವಾಹ್ನ 11.30 ಗಂಟೆಗೆ ಕಾಟಗೇರಿ ಗ್ರಾಮದಲ್ಲಿ ಎದುರಿನಿಂದ ಬಂದ ಕೆಎ-12-ಎನ್-2575 ರ ಸ್ಕಾಫೀಯೋ ಕಾರು ಟಿಪ್ಪರ್ ಲಾರಿಗೆ ಡಿಕ್ಕಿಯಾಗಿದ್ದು, ಪರಿಣಾಮ ಎರಡು ವಾಹನಗಳು ಜಖಂಗೊಂಡು ಸ್ಕಾಫೀಯೋ ಕಾರಿನ ಚಾಲಕ ರಮೇಶ್ ರವರಿಗೆ ರಕ್ತಗಾಯವಾಗಿದ್ದು,ಈ ಸಂಬಂಧ  ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಸವನಳ್ಳಿ ಗ್ರಾಮದ ಚಾತು ಎಂಬವರು ದಿನಾಂಕ 20.06.2017 ರಂದು ಸಮಯ 09.30 ಗಂಟೆಗೆ ತಮ್ಮ ಮನೆಯ ಹೊರಗಡೆ ಕೆಲಸ ಮಾಡಿಕೊಂಡಿರುವಾಗ ಬಸವನಳ್ಳಿ ಗ್ರಾಮದ ನಿವಾಸಿಗಳಾದ 1. ಮಾಯನ್, 2. ವಿಘ್ನೇಶ, 3. ಮಂಜು ಮತ್ತು 4. ಸರಸು  ರವರುಗಳು ಚಾತುರವರ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ಬೈದು,  ಚಾತುರವರು ಹಣ ಕೇಳಿದ ವಿಚಾರದಲ್ಲಿ ಜಗಳ ಮಾಡಿ ಕಬ್ಬಿಣದ ಪೈಪ್, ಮರದ ದೊಣ್ಣೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಲಾರಿ ಡಿಕ್ಕಿ, ಒಬ್ಬನಿಗೆ ಗಾಯ:

     ಬೆಂಗಳೂರಿನ ನಿವಾಸಿ ಸುರೇಶ ಎಂಬವರು ದಿನಾಂಕ 20/6/17 ರಂದು ತಮ್ಮ ಸ್ನೇಹಿತ ಹನುಮಂತ್ ರಾಜ್‌ ರವರೊಂದಿಗೆ ಕಾರು ನಂ ಕೆಎ-01 ಎಂಕ್ಯೂ 5679 ರಲ್ಲಿ ಮಡಿಕೇರಿ ಕಡೆಯಿಂದ ಹೆಬ್ಬಾಲೆ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಶಿರಂಗಾಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆಎ-45- 6574 ರ ಲಾರಿ ಚಾಲಕ ಸದರಿ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುರೇಶರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂದಿನ ಬಲ ಭಾಗ ಪೂರ್ಣ ಜಖಗೊಂಡು ಕಾರಿನಲ್ಲಿದ್ದ ಹನುಮಂತ ರಾಜ್‌ ರವರು ಗಾಯಗೊಂಡಿದ್ದು, ಈ ಸಂಬಂಧ ಸುರೇಶ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ:

   ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಸದರಿಯವರಯ ಗಾಯಗೊಂಡ ಘಟನೆ ಗೋಣಿಕೊಪ್ಪ ನಗರದ ಆರ್.ಎಂ.ಸಿ. ಕಛೇರಿ ಬಳಿ ನಡೆದಿದೆ. ನಾಯಕರ ಸುಬ್ರಮಣಿ ಎಂಬವರು ದಿನಾಂಕ 20-6-2017 ರಂದು ಗೋಣಿಕೊಪ್ಪ ನಗರದ ಆರ್.ಎಂ.ಸಿ. ಕಟ್ಟಡದ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪ ನಗರದ ಕಡೆಯಿಂದ ಬಂದ ಅಪರಿಚಿತ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದು, ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.