Monday, June 26, 2017

ಮನುಷ್ಯ ಕಾಣೆ
                     ಶ್ರೀಮಂಗಲ ಬಳಿಯ ಟಿ ಶೆಟ್ಟಿಗೇರಿ ನಿವಾಸಿ ಉಳುವಂಗಡ ಜೀವನ್ ಎಂಬವರ ತಂದೆ ಯು.ಬಿ.ಅಯ್ಯಪ್ಪ ಎಂಬವರು ದಿನಾಂಕ 18/06/2017ರಂದು ವೈದ್ಯಕೀಯ ಚಿಕಿತ್ಸೆಗಾಗಿ ಮೈಸೂರಿಗೆ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ಜೀವನ್‌ರವರು ನೀಡಿದ ದೂರಿನ ಮೇರೆಗೆ  ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ 
                        ದಿನಾಂಕ 24/06/2017ರಂದು ಶ್ರೀಮಂಗಲ ಬಳಿಯ ಹರಿಹರ ನಿವಾಸಿ ಸಿ.ಎ.ಚಿಟ್ಟಿಯಪ್ಪ ಎಂಬವರು ಮನೆಯಲ್ಲಿ ಯಾವುದೋ ವಿಷದ ಗೆಡ್ಡೆ ತಿಂದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಿದ್ದವರು 25/06/2017ರಂದು ಮೃತರಾಗಿರುವುದಾಗಿ ವರದಿಯಾಗಿದೆ. ಮೃತರ ಓರ್ವ ಮಗ ಸುಮಾರು ಆರು ತಿಂಗಳ  ಹಿಂದೆ ಮೃತರಾಗಿದ್ದು ಇದೇ ಕೊರಗಿನಲ್ಲಿ ಚಿಟ್ಟಿಯಪ್ಪನವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕತ್ತಿಯಿಂದ ಹಲ್ಲೆ
                          ದಿನಾಂಕ 25/06/2017ರಂದು ಪೊನ್ನಂಪೇಟೆ ಬಳಿಯ ಬೇಗೂರು ನಿವಾಸಿ ಎಸ್‌.ಕುಮಾರ ಎಂಬವರು ಪೊನ್ನಂಪೇಟೆ ನಗರದ ದುರ್ಗಾಬೋಜಿ ಬ್ರಾಂದಿ ಅಂಗಡಿಯ ಹಿಂಬದಿಗೆ ಮೂತ್ರ ವಿಸರ್ಜನೆಗೆಂದು ಹೋದಾಗ ಅಲ್ಲಿಗೆ ಬಂದ ಮಾಲಿಂಗ ಎಂಬಾತನು ಆತನ ತಮ್ಮ ರವಿ ಎಂಬಾತನಿಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ವಾಹನ ಅಫಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸಾ ವೆಚ್ಚವನ್ನು ಕೇಳಿದ್ದು ಕುಮಾರರವರು ನಿರಾರಿಸಿದ ಕಾರಣಕ್ಕೆ ಕತ್ತಿಯಿಂದ ಕುಮಾರರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.