Tuesday, June 27, 2017

ಕಾರಿಗೆ ದ್ವಿಚಕ್ರವಾಹನ ಡಿಕ್ಕಿ:

     ಕಾರೊಂದಕ್ಕೆ ಟಿವಿಎಸ್ ಮೊಪೆಡ್ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕುಶಾಲನಗರದ ಹತ್ತಿರದ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 26-6-2017 ರಂದು ಬೆಂಗಳೂರು ಮೂಲದ ಜಾನ್ ಸನ್ ಸಿಕ್ವೇರಾ ಎಂಬವರು ತಮ್ಮ ಪತ್ನಿಯೊಂದಿಗೆ ತಮ್ಮ ಬಾಪ್ತು ಟೊಯೊಟಾ ಕಾರಿನಲ್ಲಿ ಹಾಸನದಿಂದ ಕೊಣನೂರು ಮಾರ್ಗವಾಗಿ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಹೆಬ್ಬಾಲೆ ಗ್ರಾಮದ ಸೂಳೆಕೋಟೆ ಜಂಕ್ಷನ್ ತಲುಪಿದಾಗ ಎದುರುಗಡೆಯಿಂದ ಬಂದ ಟಿವಿಎಸ್ ಮೊಪೆಡ್ ಬೈಕ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆಂದು  ಫಿರ್ಯಾದಿ ಜಾನ್ ಸನ್ ಸಿಕ್ವೇರಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ,

ಜಾಗದ ವಿಚಾರದಲ್ಲಿ ಜಗಳ

     ಜಾಗದ ವಿಚಾರದಲ್ಲಿ ಮೂವರು ವ್ಯಕ್ತಿಗಳು ತಂದೆ, ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 18.06.2017 ರಂದು ಸಮಯ 11:00 ಗಂಟೆಗೆ ಸಿದ್ದಾಪುರ ಠಾಣಾ ಸರಹದ್ದಿಗೆ ಸೇರಿದ ಹೊಸೂರು ಗ್ರಾಮದ ಕಾರೆಕಾಡು ಎಂಬಲ್ಲಿ ಬಿ.ಆರ್. ಜಗದೀಶ ಎಂಬವರೊಂದಿಗೆ ಆರೋಪಿಗಳಾದ ಬಿ.ಎ. ರವೀಂದ್ರ, ಬಿ.ಆರ್. ಮೀನಾಕ್ಷಿ, ಮತ್ತು ಬಿ,ಆರ್. ಬಿಪಿನ್ ರವರುಗಳು ಜಾಗದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಬಿ.ಆರ್. ಜಗದೀಶ್ ರವರ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೆ ಕತ್ತಿಯಿಂದ ಅವರನ್ನು ಮತ್ತು ಅವರ ಮಗ ನನ್ನು ಕಡಿಯಲು ಹೋಗಿರುತ್ತಾರೆ ಮತ್ತು  ಅವಾಚ್ಯ ಶಬ್ದಗಳಿಂದ ಬೈದು ಕೊಲೆಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಾರುತಿ ಓಮ್ನಿ ಅಪಘಾತ ಇಬ್ಬರಿಗೆ ಗಾಯ:

     ಮಾರುತಿ ಓಮ್ನಿ  ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಮಗುಚಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಗಾಯಗೊಂಡ ಘಟನೆ ಕಾಟಕೇರಿ ಸಾರ್ವಜನಿಕ ರಸ್ತೆಯಲ್ಲಿ ನಡೆದಿದೆ. ದಿನಾಂಕ 26-6-2017 ರಂದು ಬಂಟ್ವಾಳ ತಾಲೋಕು ಮುನ್ನೂರು ಗ್ರಾಮದ ಹಂಸ ಎಂಬವರು ತಮ್ಮ ಸ್ನೇಹಿತ ಹರೂನ್ ರಶೀದ್, ಜಝಿರಿಯಾ, ಮತ್ತು ಕಲಂಧರ್ ರವರು ಇಸ್ಮಾಯಿಲ್ ಎಂಬವರ ಬಾಪ್ತು KA-20-A-5738 ರ ಮಾರುತಿ ಓಮ್ನಿ ಯಲ್ಲಿ ರಂಜನ್ ಹಬ್ಬದ ಪ್ರಯುಕ್ತ ಮೈಸೂರಿನ ತಮ್ಮ ಸಂಬಂದಿಕರ ಮನೆಗೆ ಮಡಿಕೇರಿ ಮಾರ್ಗವಾಗಿ ಹೋಗುತ್ತಿದ್ದು ರಾತ್ರಿ 1.45 ಎ.ಎಂ ಗೆ ಮಡಿಕೇರಿ ಬಳಿಯ ಕಾಟಗೇರಿ ಎಂಬಲ್ಲಿ ಕಾರನ್ನು ಚಾಲಕ ಹರೂನ್ ರಶೀದ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಕಾರು ನಿಯಾಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದ್ದರಿಂದ ಕಾರು ಜಖಂಗೊಂಡು, ಚಾಲಕ ಹರೂನ್ ರಶೀದ್ ಮತ್ತು ಜಝಿರಿಯಾ ರವರಿಗೆ ರಕ್ತಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಹಂಸರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವ್ಯಕ್ತಿಯಿಂದ ಸೊಸೆ ಮೇಲೆ ಹಲ್ಲೆ:

     ಮಡಿಕೇರಿ ತಾಲೋಕು, ಕಾಲೂರು ಗ್ರಾಮದ ನಿವಾಸಿ ಶ್ರೀಮತಿ ದೀಪ್ತಿ ಎಂಬವರು ದಿನಾಂಕ 26-6-2017 ರಂದು ತಮ್ಮ ತವರು ಮನೆಯಿಂದ ಕಾಲೂರು ಗ್ರಾಮದಲ್ಲಿರುವ ತನ್ನ ಗಂಡನ ಮನೆಗೆ ಹೋದಾಗ ಆಕೆಯ ಮಾವ ಬಸಪ್ಪ ರವರು ಜಗಳ ಮಾಡಿ ದೊಣ್ಣೆಯಿಂದ ಅವರ ಶರೀರಕ್ಕೆ ಹಲ್ಲೆ ನಡೆಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಅವರ ಅತ್ತೆಯವರ ಮೇಲೂ ಹಲ್ಲೆ ನಡೆಸಿ ದೀಪ್ತಿರವರು ಧರಿಸಿದ್ದ ಚೂಡೀದಾರ್ ನ್ನು ಎಳೆದು ಹರಿದುಹಾಕಿ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.