Monday, June 5, 2017

ವ್ಯಕ್ತಿಯಿಂದ ಬಾಲಕಿ ಮೇಲೆ ಹಲ್ಲೆ:

     ಹಳೇ ದ್ವೇಷದಿಂದ ವ್ಯಕ್ತಿಯೊಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೋಕು ಕೆರಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆರಗನಳ್ಳಿ ಗ್ರಾಮದ ಕೆ.ಎನ್. ಮಂಜುನಾಥ ಎಂಬವರ ಮಗಳಾದ 11 ವರ್ಷದ ಮಗಳು ಶರಣ್ಯ ದಿನಾಂಕ 3-6-2017 ರಂದು ಸಾಯಂಕಾಲ 5-30 ಗಂಟೆ ಸಮಯದಲ್ಲಿ ಅದೇ ಗ್ರಾಮದ ಕನ್ನಂಬಾಡಿ ದೇವಾಲಯದ ಮುಂದುಗಡೆ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಕೆ.ಎನ್. ರೇವೇಗೌಡ ಎಂಬವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ಆಟವಾಡುತ್ತಿದ್ದ ಶರಣ್ಯಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ:

     ಪಾದಚಾರಿಯೊಬ್ಬರಿಗೆ ಕಾರೊಂದು ಡಿಕ್ಕಿಯಾಗಿ ಸದರಿಯವರು ಗಾಯಗೊಂಡ ಘಟನೆ ಗೋಣಿಕೊಪ್ಪ ಹತ್ತಿರದ ಕೈಕೇರಿಯಲ್ಲಿ ನಡೆದಿದೆ. ದಿನಾಂಕ 04/06/2017 ರಂದು ಕೈಕೇರಿ ಗ್ರಾಮದ ನಿವಾಸಿ ಹೆಚ್.ಆರ್. ವಸಂತ ಎಂಬವರು ಗೋಣಿಕೊಪ್ಪ ನಗರಕ್ಕೆ ಬಂದು ರಾತ್ರಿ 7-00 ಗಂಟೆಗೆ ಕೈಕೇರಿ ಗ್ರಾಮದ ಮಾರುತಿ ಶೋ ರೂಂ ಬಳಿ ಇರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎಲ್-13-ಕೆ-5992 ರ ಮಾರುತಿ 800 ಕಾರಿನ ಚಾಲಕ ಸದರಿ  ಕಾರನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಹೆಚ್.ಆರ್. ವಸಂತರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿಯವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರುಗಳ ನಡುವೆ ಅಪಘಾತ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದ ನಿವಾಸಿ ಶ್ರೀಮತಿ ಸ್ಮಿತಾ ಎಂಬವರು ದಿನಾಂಕ 4-6-2017 ರಂದು ತಮ್ಮ ಬಾಪ್ತು ಕೆ.ಎ.01 ಇಡಬ್ಲ್ಯು-496ರ ಸ್ಕೂಟರ್ ನಲ್ಲಿ ತಮ್ಮ ಮಗಳಾಧ ಆಯನ ಳೊಂದಿಗೆ ವಿರಾಜಪೇಟೆ ಕಡೆಯಿಂದ ಬಿಟ್ಟಂಗಾಲದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-12 ಎನ್ 7991 ರ ಇಂಡಿಕಾ ಕಾರನ್ನು ಅದರ ಚಾಲ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎದುರುಗಡೆಯಿಂದ ಬಂದ ನ್ಯಾನೋ ಕಾರಿಗೆ ಡಿಕ್ಕಿ ಪಡಿಸಿದ್ದು ಪುನ: ಸದರಿ ಕಾರು ಶ್ರೀಮತಿ ಸ್ಮಿತಾರವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮವಾಗಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಮಿತಾ, ಅವರ ಮಗಳಾದ ಆಯನ ಮತ್ತು ನ್ಯಾನೋ ಕಾರಿನಲ್ಲಿ ಪ್ರಯಾಣಿಸುತ್ತದ್ದ ಸಣ್ಣವಂಡ ವಸಂತ ಹಾಗು ಅವರ ಪತ್ನಿ ಶ್ರೀಮತಿ ನೀರಜ್ ರವರುಗಳು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.