Tuesday, June 6, 2017

ವ್ಯಕ್ತಿಯ ಆತ್ಮಹತ್ಯೆ
                 ವ್ಯಕ್ತಿಯೊಬ್ದಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ವರದಿಯಾಗಿದೆ. ತಾಕೇರಿ  ನಿವಾಸಿ ಕಿರಣ್ ಎಂಬುವವರು ಮರದಿಂದ ಬಿದ್ದು ಕುಂಟುತ್ತಾ ನಡೆಯುತ್ತಿದ್ದು ಇದೇ ವಿಚಾರದಲ್ಲಿ ವಿಪರೀತ ಮದ್ಯಪಾನ ಮಾಡುತ್ತಿದ್ದು, ದಿನಾಂಕ 01-06-2017 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕಿರಣ್ ರವರನ್ನು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-06-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಕಳವು
                     ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ನಿವಾಸಿ ಮಹಮ್ಮದ್ ಕುಂಞ ಎಂಬುವವರು ಮಂಗಳೂರಿನ ನಿವಾಸಿ ಮಹಮ್ಮದ್ ಅಶ್ರಫ್ ಎಂಬುವವರ ಬಾಪ್ತು ಕೆಎ-28-ಎಂ-5226 ರ ಸ್ಕಾರ್ಫಿಯೋ ವಾಹನವನ್ನು ಮಾರಾಟ ಮಾಡುವ ಸಲುವಾಗಿ 15 ದಿವಸಗಳ ಹಿಂದೆ ಮಂಗಳೂರಿನಿಂದ ತೆಗೆದುಕೊಂಡು ಬಂದಿದ್ದು ದಿನಾಂಕ 03-06-2017 ರಂದು ವಿರಾಜಪೇಟೆ ನಗರದಲ್ಲಿರುವ ಬೆಸ್ಟ್ ಮೋಟಾರ್ಸ್ ಆಟೋ ಲಿಂಕ್ ನ ಶೆಡ್ ನಲ್ಲಿ ನಿಲ್ಲಿಸಿದ್ದ ವಾಹನವನ್ನು ಕಳವು ಮಾಡಿರುವುದಾಗಿ ದಿನಾಂಕ 04-06-2017 ರಂದು ಕೊಟ್ಟ ಪುಕಾರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ 
                  ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ವರದಿಯಾಗಿದೆ. ಕೆದಮುಳ್ಳೂರು ಗ್ರಾಮದ ನಿವಾಸಿ ರಮೇಶ ಎಂಬುವವರ ಪತ್ನಿ ಮತ್ತು ಮಕ್ಕಳು ಬಿಟ್ಟು ಹೋಗಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ದಿನಾಂಕ 25-05-2017 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ರಮೇಶರವರನ್ನು ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-06-2017 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.