Thursday, June 8, 2017

ಪಂಪ್ ಸೆಟ್ ನ ಕೇಬಲ್ ಮತ್ತು ಪೈಪು ಕಳವು 
            ನೆಲಜಿ ಗ್ರಾಮದ ಪೂವಯ್ಯ ಎಂಬುವವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ನೆಲಜಿ ಗ್ರಾಮದಲ್ಲಿರುವ ಬಾವಿಗೆ ಕಿರ್ಲೋಸ್ಕರ್ ಕಂಪೆನಿಗೆ ಸೇರಿದ ಡಿಪ್ಪಿಂಗ್ ಪಂಪ್ ಸೆಟನ್ನು ಅಳವಡಿಸಿದ್ದು, ಪೂವಯ್ಯನವರು ಮನೆಯಲ್ಲಿಲ್ಲದ ಸಮಯದಲ್ಲಿ ಸದರಿ ಪಂಪ್ ಸೆಟ್ ನ ಕೇಬಲ್, ಪೈಪ್ ಮತ್ತು ಮೋಟಾರಿಗೆ ಅಳವಡಿಸಿದ ವಸ್ತುಗಳನ್ನು ಯಾರೋ ಕಳ್ಳತನ ಮಾಡಿರುವುದಾಗಿ ಪೂವಯ್ಯನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರು ಕಳ್ಳತನ
           ಮಡಿಕೇರಿ ನಗರದ ಕನ್ನಂಡಬಾಣೆಯ ನಿವಾಸಿ ಮಣಿಕಂಠರವರು ತಮ್ಮ ಬಾಪ್ತು ಕೆಎ-02-ಎಂ-7845 ರ ಮಾರುತಿ ಓಮಿನಿ ವ್ಯಾನನ್ನು ಮನೆಯ ಪಕ್ಕದ ನಿವಾಸಿ ಕನ್ನಂಡ ದೊರೆಯವರ ಬಾಪ್ತು ಖಾಲಿ ಜಾಗದಲ್ಲಿ ನಿಲ್ಲಿಸುತ್ತಿದ್ದು, ದಿನಾಂಕ 07-06-2017 ರಂದು ಬೆಳಿಗ್ಗೆ ನೋಡುವಾಗ ನಿಲ್ಲಿಸಿದ್ದ ಜಾಗದಿಂದ ವ್ಯಾನನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ಮಣಿಕಂಠರವರು ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕುಗಳ ಪರಸ್ಪರ ಡಿಕ್ಕಿ
           ದಿನಾಂಕ 05-06-2017 ರಂದು ಕುಶಾಲನಗರದ ಹೊಸಳ್ಳಿಯ ನಿವಾಸಿ ರಾಜೇಶ್ ಎಂಬುವವರು ತಮ್ಮ ಮೋಟಾರು ಸೈಕಲಿನಲ್ಲಿ ಪತ್ನಿ ಆಶಾರವರನ್ನು ಕೂರಿಸಿಕೊಂಡು ಕೊಪ್ಪಕ್ಕೆ ಹೋಗಿದ್ದವರು ವಾಪಾಸು ಕುಶಾಲನಗರಕ್ಕೆ ಬರುತ್ತಿರುವಾಗ ಕುಶಾಲನಗರದ ಮುಖ್ಯ ರಸ್ತೆಯಲ್ಲಿ ಎದುರುಗಡೆಯಿಂದ ಕುಶಾಲನಗರದ ಕಾವೇರಿ ಬಡಾವಣೆಯ ನಿವಾಸಿ ಸಾಗರ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ರಾಜೇಶ್ ಮತ್ತು ಅವರ ಪತ್ನಿಗೆ ಗಾಯಗಳಾಗಿದ್ದು ಈ ಬಗ್ಗೆ ರಾಜೇಶ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾರಿ ಡಿಕ್ಕಿ ವ್ಯಕ್ತಿಯ ದುರ್ಮರಣ
            ದಿನಾಂಕ 07-06-2017 ರಂದು ಕಿರಿಗೂರು ಗ್ರಾಮದ ನಿವಾಸಿ ಅತೀಶ @ ಅಪ್ಪಚ್ಚು ಎಂಬುವವರು ಹಾತೂರು ಗ್ರಾಮದ ವನ ಭದ್ರಕಾಳಿ ದೇವಸ್ತಾನದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-41-ಎ-1174 ರ ಚರ್ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಅತೀಶ @ ಅಪ್ಪಚ್ಚುರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ತೀವ್ರ ತರಹದ ಗಾಯಗೊಂಡಿದ್ದ ಅತೀಶ @ ಅಪ್ಪಚ್ಚು ರವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು, ಈ ಬಗ್ಗೆ ನವೀನ ಎಂಬುವವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ 
             ದಿನಾಂಕ 07-06-2017 ರಂದ ಸುಂಟಿಕೊಪ್ಪದ ನಿವಾಸಿ ಯಶೋಧ ಎಂಬುವವರು ಸೊಸೆ ಲಾವಣ್ಯರವರೊಂದಿಗೆ ಕುಶಾಲನಗರದಿಂದ ಮಹೇಂದ್ರ ಮ್ಯಾಕ್ಸಿಮೋ ವಾಹನದಲ್ಲಿ ಸುಂಟಿಕೊಪ್ಪಕ್ಕೆ ಬರುತ್ತಿರುವಾಗ ಸುಂಟಿಕೊಪ್ಪದ ಶಾಂತಿಗಿರಿ ಎಸ್ಟೇಟ್ ಹತ್ತಿರ ತಲುಪುವಾಗ ಎದುರುಗಡೆಯಿಂದ ಮಂಗಳೂರಿನ ನಿವಾಸಿ ಪ್ರದೀಪ್ ರವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮಹೇಂದ್ರ ಮ್ಯಾಕ್ಸಿಮೋ ವಾಹನದಲ್ಲಿದ್ದ ಯಶೋಧ, ಲಾವಣ್ಯ ಮತ್ತು ಚಾಲಕ ವಿನೀಶ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಯಶೋಧರವರು ನೀಡಿದ ಪುಕಾರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.