Friday, June 9, 2017

ವ್ಯಕ್ತಿಯ ಮೇಲೆ ಹಲ್ಲೆ
                    ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಕುಶಾಲನಗರದ ಕೂಡ್ಲೂರು ಎಂಬಲ್ಲಿ ವರದಿಯಾಗಿದೆ. ದಿನಾಂಕ 08-06-2017 ರಂದು ಕುಶಾಲನಗರದ ನಿವಾಸಿ ಆನಂದ ಎಂಬುವವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಕೂಡ್ಲೂರು ಗ್ರಾಮದ ಕೈಗಾರಿಕಾ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಕಿರಣ ಎಂಬುವವರು ಮೋಟಾರು ಸೈಕಲನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಮುಂದೆ ಹೋಗುತ್ತಿದ್ದವರನ್ನು ವಿಚಾರಿಸಿದಾಗ ಸದರಿ ಬೈಕಿನ ಹಿಂಭಾಗದಲ್ಲಿ ಕುಳಿತ್ತಿದ್ದ ಅಜೇಶ್, ಮನೋಜ್ ಎಂಬುವವರು ಜಗಳ ತೆಗೆದು ಹಲ್ಲೆ ನಡೆಸಿರುವುದಾಗಿ ಆನಂದರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು
              ನಾಪೋಕ್ಲುವಿನ ಬೇತು ಗ್ರಾಮದ ಬಲ್ಲವಂಡ ಮುತ್ತಣ್ಣ ಎಂಬುವವರ ಮನೆಯಲ್ಲಿ ಚೆರಿಯಪರಂಬು ವಾಸಿಯಾದ ಪಾರ್ವತಿಯವರು ದಿನಾಂಕ 01-05-2017 ರಿಂದ 22-05-2017 ರ ವರೆಗೆ ಮನೆ ಕೆಲಸಕ್ಕೆ ಇದ್ದು, ಮುತ್ತಣ್ಣನವರು ಸುಮಾರು 3,40,000 ರೂ ಮೌಲ್ಯದ ಚಿನ್ನಾಭರಣಗಳನ್ನು ಆಭರಣ ಡಬ್ಬಿಯಲ್ಲಿಟ್ಟು ಅದನ್ನು ಕಾರ್ಡ್ ಬೋರ್ಡ್ ಬಾಕ್ಸ್ ನಲ್ಲಿ ಹಾಕಿ ಮಲಗುವ ಕೋಣೆಯಲ್ಲಿರುವ ಸ್ಲ್ಯಾಬ್ ನಲ್ಲಿ ಇಟ್ಟಿದ್ದ ಚಿನ್ನಾಭರಣವು ದಿನಾಂಕ 17-05-2017 ರಿಂದ 22-05-2017 ರ ಮದ್ಯದಲ್ಲಿ ಕಳವು ಆಗಿದ್ದು ಈ ಬಗ್ಗೆ ಪಾರ್ವತಿಯವರ ಮೇಲೆ ಸಂಶಯವಿರುವುದಾಗಿ ನೀಡಿದ ಪುಕಾರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.