Monday, July 3, 2017

ಕಳವು ಪ್ರಕರಣ
                      ದಿನಾಂಕ 02/07/2017ರಂದು ಮೈಸೂರಿನ ರಕ್ಷಣಾ ಇಲಾಖೆಯ ಆಹಾರ ಪ್ರಯೋಗಾಲಯದ ಉಪ ನಿರ್ದೇಶಕರಾದ ಡಾ.ಪರ್‌ಹತ್ ಖಾನಂ ಎಂಬವರು ಮಡಿಕೇರಿಗೆ ಪ್ರವಾಸಾರ್ಥ ಬಂದಿದ್ದು ಮಡಿಕೇರಿಯ ರಾಜಾಸೀಟಿನಲ್ಲಿ ಅವರ ಬ್ಯಾಗನ್ನು ಕಲ್ಲು ಬೆಂಚಿನ ಮೇಲಿಟ್ಟು ರಾಜಾಸೀಟಿನ ದೃಶ್ಯದ ಛಾಯಾಚಿತ್ರಗಳನ್ನು ತೆಗೆಯುತ್ತಿರುವಾಗ ಅವರ ಬ್ಯಾಗನ್ನು ಯಾರೋ ಕಳವು ಮಾಡಿದ್ದು ಬ್ಯಾಗಿನಲ್ಲಿ ಅವರ ಇಲಾಖೆಯ ಗುರುತಿನ ಚೀಟಿ, ರೂ.12,000/- ಮೌಲ್ಯದ ಮೊಬೈಲ್‌ ಫೋನ್, ರೂ.10,000/- ನಗದು ಮತ್ತು ಇನ್ನಿತರ ದಾಖಲಾತಿಗಳಿದ್ದುವಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಲಕಿ ಸಾವು
                           ಮೂರ್ನಾಡು ಬಳಿಯ ಎಂ.ಬಾಡಗ ನಿವಾಸಿ ಸೀತಮ್ಮ ಎಂಬವರ ಮಗಳು ಭವಾನಿ ಎಂಬ ಬಾಲಕಿಯು ದಿನಾಂಕ 01/07/2017ರಂದು ಹೊಟ್ಟೆ ನೋವಿನಿಂದಾಗಿ ಶಾಲೆಗೆ ಹೋಗದೆ ಇದ್ದು ಅಂದು ರಾತ್ರಿ ವಿಪರೀತ ಹೊಟ್ಟೆ ನೋವು ಮತ್ತು ತಲೆ ನೋವು ಬಂದ ಕಾರಣ ಮೂರ್ನಾಡಿನ ಖಾಸಗಿ ಕ್ಲಿನಿಕ್‌ನ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಬಾಲಕಿ ಭವಾನಿ ಮೃತ ಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ  ಸೇವಿಸಿ ಯುವತಿ ಆತ್ಮಹತ್ಯೆ
                        ಮಡಿಕೇರಿ ಸಮೀಪದ ಮಕ್ಕಂದೂರು ನಿವಾಸಿ ಪಿ.ಟಿ.ಸಂಜೀವ ಎಂಬವರ ಮಗಳು ಹರ್ಷಿತಾ ಎಂಬ ಯುವತಿಗೆ ಸುಮಾರು ಒಂದು ವರ್ಷದಿಂದ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ದಿನಾಂಕ 28/07/2017ರಂದು ಸಂಜೀವನವರು ಕೆಲಸಕ್ಕೆಂದು ಹೋಗಿದ್ದಾಗ ಮನೆಯಲ್ಲಿದ್ದ ಹರ್ಷಿತಾಳು ಇಲಿ ಪಾಷಾಣ ವಿಷ ಸೇವಿಸಿ ಅಸ್ವಸ್ಥಳಗಿದ್ದು ಆಕೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮರಳಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿರುವಾಗ ದಾರಿ ಮಧ್ಯ ಮೃತಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಳೆ ವೈಷಮ್ಯ, ಕೊಲೆ ಯತ್ನ
                    ದಿನಾಂಕ 01/07/2017ರಂದು ಶನಿವಾರಸಂತೆ ಬಳಿಯ ಊರುಗುತ್ತಿ ನಿವಾಸಿ ತೀರ್ಥಾನಂದ  ಎಂಬವರು ಊರುಗುತ್ತಿ ಗ್ರಾಮದ ನಿವಾಸಿ ಮಹದೇವಪ್ಪ ಎಂಬವರ ಮನೆಯ ರಸ್ತೆಯ ಮುಂದೆ ನೀರು ಬಿಡುವ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಹೇಮರಾಜ್‌ ಎಂಬವರ ಮಗ ಸಂಜಯ್‌ ಎಂಬವರು ಸುಮಂತ್‌ ಎಂಬವರೊಂದಿಗೆ ಕೆಎ-55-ಎಂ-2087ರ ಕಾರಿನಲ್ಲಿ ಬಂದು ತೀರ್ಥಾನಂದರವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮೇಲೆ ಕಾರನ್ನು ಹತ್ತಿಸಿರುವುದಾಗಿ  ದೂರು  ನೀಡಲಾಗಿದೆ. ತೀರ್ಥಾನಂದರವರು ಅವರ ತಮ್ಮನ ಕುಟುಂಬಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಮ್ಮನಿಗೆ ಸಹಾಯ ಮಾಡಿರುವ ದ್ವೇಷದ ಮೇಲೆ  ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ವ್ಯಕ್ತಿಯ ಅಸ್ವಾಭಾವಿಕ ಸಾವು
                             ದಿನಾಂಕ 01/07/2017ರಂದು ಮಾದಾಪುರ ಬಳಿಯ ಹಾಡಗೇರಿ ನಿವಾಸಿ ಕೆ.ಸಿ.ಬೆಳ್ಳಿಯಪ್ಪ ಎಂಬವರಲ್ಲಿ ಕೆಲಸ ಮಾಡಿಕೊಂಡಿದ್ದ ಮಾದ ಯಾನೆ ಶಂಕರ ಎಂಬ ವ್ಯಕ್ತಿಯು ಅಸ್ವಸ್ಥನಾದ ಕಾರಣ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೆ.ಸಿ.ಬೆಳ್ಳಿಯಪ್ಪನವರು ಮಾದಾಪುರ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮಾದ ಅಲಿಯಾಸ್ ಶಂಕರರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.