Tuesday, July 4, 2017

ಹೊಳೆಗೆ ಬಿದ್ದು ಇಬ್ಬರ ಸಾವು
                         ದಿನಾಂಕ 02/07/2017ರಂದು ಮೂರ್ನಾಡು ಬಳಿಯ ಕೋಡಂಬೂರು ನಿವಾಸಿ ಎಂ.ಎ.ಕಾರ್ಯಪ್ಪ ಎಂಬವರ ಮಗ ಜಯಂತ್‌ ಹಾಗೂ ಕಾರ್ಯಪ್ಪನವರ ತಮ್ಮನ ಮಗ ದರ್ಶನ್‌ ಎಂಬ ಇಬ್ಬರು ಯುವಕರು ಮನೆಯಿಂದ ಹೊರಗೆ ಸುತ್ತಾಡಿಕೊಂಡು ಬರಲೆಂದು  ಹೋದವರು ಕೋಡಂಬೂರು ಬಳಿ ಕಾವೇರಿ ಹೊಳೆ ಹಾಗೂ ನೀರಿನ ತೋಡೊಂದು ಸೇರುವ ಸ್ಥಳದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಸಾವಿಗೀಡಾಗಿದ್ದು ದಿನಾಂಕ 03/07/2017ರಂದು ಇಬ್ಬರ ಶವಗಳು ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಗದು, ಆಭರಣ ಕಳವು
                             ದಿನಾಂಕ 01/07/2017ರಂದು ವಿರಾಜಪೇಟೆ ಬಳಿಯ ಅರಮೇರಿ ನಿವಾಸಿ ಎನ್.ಅನುಸೂಯ ಎಂಬವರು ತಾಯಿ ಮತ್ತು ಎರಡನೇ ಮಗಳು ಭೂಮಿಕಾಳೊಂದಿಗೆ ನಾಪೋಕ್ಲುವಿನಲ್ಲಿರುವ ಹಿರಿಯ ಮಗಳ ಮಗಳ ಮನೆಗೆ ಹೋಗಿದ್ದು ದಿನಾಂಕ 03/07/2017ರಂದು ಮನೆಗೆ ಬಂದು ನೋಡಿದಾಗ  ಯಾರೋ ಕಳ್ಳರು ಮನೆಯ ಮುಂದಿನ ಬೀಗ ಮುರಿದು ಒಳ ಪ್ರವೇಶಿಸಿ ಮಲಗುವ ಕೋಣೆಯಲ್ಲಿರುವ ಲಾಕರ್‌ನಿಂದ ರೂ.60,000/- ನಗದು ಹಾಗೂ  ರೂ.60,000/- ಮೌಲ್ಯದ ಚಿನ್ನಾಭರಣಗಳು ಹಾಗೂ ಮತ್ತೊಂದು ಕೋಣೆಯ ಬೀರುವನ್ನು ಒಡೆದು ಅದರಲ್ಲಿದ್ದ ರೂ.10,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕೆರೆಗೆ ಬಿದ್ದು ಮಹಿಳೆ ಸಾವು
                             ದಿನಾಂಕ 03/07/2017ರಂದು ವಿರಾಜಪೇಟೆ ಬಳಿಯ ಐಮಂಗಲ ನಿವಾಸಿ ಬೊಳ್ಳಚಂಡ ಸುರೇಶ್‌ ಹಾಗೂ ಅವರ ಪತ್ನಿ ಲೀಲಾವತಿಯವರು ಗದ್ದೆ ಕೆಲಸಕ್ಕೆ ಹೋಗಿದ್ದು ಪತ್ನಿ ಲೀಲಾವತಿಯವರು ಗೊಬ್ಬರದ ಚೀಲ ತೊಳೆಯಲೆಂದು ಅರುಣ ಎಂಬವರ ಕೆರೆಗೆ ಹೋಗಿ ಚೀಲಗಳನ್ನು ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅಫಘಾತ
                            ದಿನಾಂಕ 25/06/2017ರಂದು ಶನಿವಾರಸಂತೆ ನಗರದ ನಿವಾಸಿ ಎಂ.ಪಿ.ನವೀನ್‌ ಎಂಬವರು ಚೇತನ್‌ ಎಂಬವರೊಡನೆ ಕೆಎ-41-ಎಂಎ-9083 ಸಂಖ್ಯೆ ಕಾರಿನಲ್ಲಿ ಕುಶಾಲನಗರಕ್ಕೆ ಹೋಗಿ  ಮರಳಿ ಶನಿವಾರಸಂತೆಗೆ ಬರುತ್ತಿರುವಾಗ ಜಾಗೇನಹಳ್ಳಿ ಬಳಿ ಚೇತನ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                          ದಿನಾಂಕ 03/07/2017ರಂದು ಮೂರ್ನಾಡು ಬಳಿಯ ಹೊದ್ದೂರು ಪಾಲೆಮಾಡು ನಿವಾಸಿ ಬಿ.ಕೆ.ರಾಜ ಎಂಬವರು ಅವರ ಕೆಎ-12-ಆರ್-2014ರ ಬೈಕಿನಲ್ಲಿ ರಘು ಎಂಬವರೊಂದಿಗೆ ಹಾಕತ್ತೂರಿನಿಂದ ಪಾಲೆಮಾಡುವಿಗೆ ಹೋಗುತ್ತಿರುವಾಗ ಕೋಡಂಬೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿಯ ರಸ್ತೆಯಲ್ಲಿ ದಿಲೀಪ್‌ ಎಂಬವರು ಅವರ ಕೆಎ-04-ಜೆಡ್-805ರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜ ಹಾಗೂ ರಘುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.