Wednesday, July 5, 2017

ಅಕ್ರಮ ಮದ್ಯ ಮಾರಾಟ 
                 ದಿನಾಂಕ 04-07-2017 ರಂದು ಸಿದ್ದಾಪುರ ಠಾಣೆಯ ಉಪ ನಿರೀಕ್ಷಕರಾದ ಸುಬ್ರಮಣ್ಯ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಚೆನ್ನಂಗಿ ಗೂಡ್ಲೂರು ಗ್ರಾಮದಲ್ಲಿ ಹರೀಶ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಹರೀಶರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮಹತ್ಯೆ 
               ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ವರದಿಯಾಗಿದೆ. ಟಿ ಶೆಟ್ಟಿಗೇರಿಯ ಚೇಂದಿರ ಗಗನ್ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಗಣೇಶ ಎಂಬುವವರು ಹೊಟ್ಟೆ ನೋವಿನಿಂಧ ಬಳಲುತ್ತಿದ್ದು ದಿನಾಂಕ 03-07-2017 ಕಾಫಿ ತೋಟದ ಒಳಗೆ ಕಾಫಿ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ನೀಲರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ 
        ದಿನಾಂಕ 04-07-2017 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ನಂಜುಂಡಸ್ವಾಮಿಯವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದೇವಣಗೇರಿ ಗ್ರಾಮದ ರಾಮೇಗೌಡ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ದಾಳಿ ಮಾಡಿ ರಾಮೇಗೌಡರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.