Thursday, July 6, 2017

ಅಕ್ರಮ ಮದ್ಯ ಮಾರಾಟ 
              ದಿನಾಂಕ 05-07-2017 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಮಹೇಶ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಶಿರಂಗಾಲ ಗ್ರಾಮದ ಸಂತೋಷ್ ಬಾರ್ ಪಕ್ಕದ ಓಣಿಯಲ್ಲಿ ಹೆಬ್ಬಾಲೆ ಗ್ರಾಮದ ಶಿವಣ್ಣ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ದಾಳಿ ಮಾಡಿ ಶಿವಣ್ಣರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
ವ್ಯಕ್ತಿಯ ಆತ್ಮಹತ್ಯೆ 
           ವ್ಯಕ್ತಿಯೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದಲ್ಲಿ ವರದಿಯಾಗಿದೆ. ಹಾನಗಲ್ ಗ್ರಾಮದ ನಿವಾಸಿ ಸತೀಶರವರಿಗೆ ವಿಪರೀತ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 03-07-2017 ರಂದು ವಿಪರೀತ ಮದ್ಯಪಾನ ಮಾಡಿಕೊಂಡು ವಿಷ ಕುಡಿದಿದ್ದು ಚಿಕಿತ್ಸೆಯ ಬಗ್ಗೆ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸತೀಶರವರು ದಿನಾಂಕ 05-07-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಮೃತನ ತಮ್ಮ ರಾಜುರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ನಾಪತ್ತೆ 
           ದಿನಾಂಕ 04-07-2017 ರಂದು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ನಿವಾಸಿ ಸಂತೋಷ್ ಎಂಬುವವರು ಕಾಣೆಯಾಗಿದ್ದು ಈ ಬಗ್ಗೆ ಆತನ ತಂದೆ ದೇವರಾಜುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.