Saturday, July 8, 2017

ಹಲ್ಲೆ ಪ್ರಕರಣ 
                    ದಿನಾಂಕ 07-07-2017 ರಂದು ವಿರಾಜಪೇಟೆ ತಾಲೂಕಿನ ಕುಟ್ಟ ಬಸ್ಸು ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಹಾಗೂ ಮಹಾಲಕ್ಷ್ಮಿ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಪರಸ್ಪರ ಹಲ್ಲೆ ನಡೆಸಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಎರಡು ಪ್ರರಕಣ ದಾಖಲಾಗಿರುತ್ತದೆ. 

ಕೆರೆಗೆ ಬಿದ್ದು ವ್ಯಕ್ತಿಯ ದುರ್ಮರಣ 
              ವ್ಯಕ್ತಿಯೊಬ್ಬರು ಕೆರೆಯ ದಡದಲ್ಲಿ ಕೆಲಸ ಮಾಡುತ್ತಿರುವಾಗ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ವರದಿಯಾಗಿದೆ. ಗೋಣಿಕೊಪ್ಪಲುವಿನ ಹಾತೂರು ಗ್ರಾಮದ ನಿವಾಸಿ ಹರೀಶ್ ತಿಮ್ಮಯ್ಯ ಎಂಬುವವರು ಮೂರ್ಚೆ ರೋಗದಿಂದ ಬಳಲುತ್ತಿದ್ದು, ದಿನಾಂಕ 07-07-2017 ರಂದು ಹರೀಶ್ ತಮ್ಮಯ್ಯನವರು ಕೆರೆಯ ದಡದಲ್ಲಿ ಕೆಲಸ ಮಾಡುತ್ತಿರುವಾಗ ಮೂರ್ಚೆ ರೋಗ ಬಂದು ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ಪೂಣಚ್ಚನವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾರು ಕಳವು 
                ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಕಳುವಾದ ಘಟನೆ ಮಡಿಕೇರಿಯ ರಾಜರಾಜೇಶ್ವರಿ ನಗರದಲ್ಲಿ ವರದಿಯಾಗಿದೆ. ರಾಜರಾಜೇಶ್ವರಿ ನಗರದ ನಿವಾಸಿ ಅಬುಬಕರ್ ಎಂಬುವವರು ದಿನಾಂಕ 05-07-2017 ರಂದು ತಮ್ಮ ಬಾಪ್ತು ಕೆಎ-04-ಪಿ-3514 ರ ಮಾರುತಿ 800 ಕಾರನ್ನು ಮನೆಯ ಮುಂದಿನ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದು ಮಾರನೆಯ ದಿನ ಬೆಳಿಗ್ಗೆ ನೋಡುವಾಗ ಕಾರನ್ನು ಯಾರೋ ಕಳವು ಮಾಡಿಕೊಂಡಿದ್ದು ಹೋಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.