Monday, July 10, 2017

ವ್ಯಕ್ತಿ ಆತ್ಮಹತ್ಯೆ
                               ದಿನಾಂಕ 09/07/2017ರಂದು ಸೋಮವಾರಪೇಟೆ ಬಳಿಯ ತಾಕೇರಿ ಗ್ರಾಮದ ನಿವಾಸಿ ಮಂಜುನಾಥ ಎಂಬವರು ಅವರ ಮನೆಯ ಬಳಿ ಇರುವ ದನದ ಕೊಟ್ಟಿಗೆಯ ಮಾಡಿನ ಕಬ್ಬಿಣದ ಪೈಪಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಂಜುನಾಥರವರು ಸೋಮವಾರಪೇಟೆಯ ಕೆನರಾ ಬ್ಯಾಂಕ್, ಮಡಿಕೇರಿಯ ಎಸ್‌ಬಿಐ ಬ್ಯಾಂಕ್ ಮತ್ತು ಇತರೆಡೆಗಳಲ್ಲಿ ವ್ಯವಸಾಯಕ್ಕಾಗಿ ಸಾಲ ಮಾಡಿದ್ದು ಬೆಳೆ ಸರಿಯಾಗಿ ಬಾರದ ಕಾರಣ ಸಾಲ ತೀರಿಸಲಾಗದೆ ಸುಸ್ತಿದಾರರಾಗಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇರುವ ಕಾರಣಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                          ದಿನಾಂಕ 09/07/2017ರಂದು ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಹೆಚ್‌.ವೈ.ರಾಜುರವರು ಗಸ್ತು ಕರ್ತವ್ಯದಲ್ಲಿದ್ದಾಗ ನಗರದ ಒಂದನೇ ವಿಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಸುಳಿವಿನ ಮೇರೆಗೆ ಸ್ಥಳಕ್ಕೆ ತೆರಳಿದಾಗ ಗೋಣಿಕೊಪ್ಪ ನಗರದ ಬೈಪಾಸ್‌ ರಸ್ತೆ ನಿವಾಸಿ ಸುರೇಂದ್ರ ಎಂಬಾತನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಘಿ ಮದ್ಯವನ್ನು ಲೋಟದಲ್ಲಿ ಸುರಿದು  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು ಪಿಎಸ್‌ಐರವರು ಆರೋಪಿ ಸುರೇಂದ್ರನನ್ನು ಬಂಧಿಸಿ ಸುಮಾರು ರೂ.300/- ಮೌಲ್ಯದ ಮದ್ಯದ ಪ್ಯಾಕೆಟುಗಳನ್ನು ವಶಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಾವು ಕಚ್ಚಿ ಮಹಿಳೆ ಸಾವು
                           ದಿನಾಂಕ 15/06/2017ರಂದು ಮಡಿಕೇರಿಯ ಸಂಪಾಜೆ ಬಳಿಯ ಯು.ಚೆಂಬು ಗ್ರಾಮದ ನಿವಾಸಿ ಜಯಂತಿ ಎಂಬವರು ಅಡಿಕೆ ತೋಟದಲ್ಲಿ ಹುಲ್ಲು ಕಡಿಯುತ್ತಿರುವಾಗ ಯಾವುದೋ ಜಾತಿಯ ಹಾವೊಂದು ಕಡಿದು ಅಸ್ವಸ್ಥರಾದವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ದಿನಾಂಕ 09/07/2017ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ ಪತ್ತೆ
                        ದಿನಾಂಕ 09/07/2017ರಂದು ಪೊನ್ನಂಪೇಟೆ ಠಾಣೆಯ ಪಿಎಸ್‌ಐ ಎಸ್.ಎನ್.ಜಯರಾಂರವರವರಿಗೆ ತಿತಿಮತಿ ನೊಕ್ಯ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಸ್ಥಳಕ್ಕೆ ತೆರಳಿದಾಗ ತಿತಿಮತಿ ನಿಕ್ಯ ಗ್ರಾಮದ ಬಿ.ಸಿ.ಕೆ.ಎಸ್ಟೇಟಿನ ಲೈನ್‌ಮನೆಯೊಂದರಲ್ಲಿ ಕೆ.ಮಾದೇವ ಎಂಬಾತನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು ಆರೋಪಿ ಮಾದೇವನ್ನು ಬಂಧಿಸಿ ಸುಮಾರು ರೂ.1100/- ಬೆಲೆಯ ಮದ್ಯವನ್ನು ವಶಪಡಿಸಿಕೊಂಡು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮದ್ಯ ಮಾರಾಟ
                              ದಿನಾಂಕ 09/07/2017ರಂದು ಸೋಮವಾರಪೇಟೆ ಬಳಿಯ ಅಬ್ಬೂರು ಕಟ್ಟೆ ಗ್ರಾಮದಲ್ಲಿ ಅಕ್ರಮವಾಘಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಠಾಣೆಯ ಪಿಎಸ್‌ಐ ಎಂ.ಶಿವಣ್ಣರವರು ಸ್ಥಳಕ್ಕೆ ಭೇಟಿ ನೀಡಿದಾಗ ಅಬ್ಬೂರುಕಟ್ಟೆಯ ನಿವಾಸಿ ವಾಲ್ಟರ್ ಬುತೆಲ್ಲೋ ಎಂಬವರು ಅವರ ಅಂಗಡಿಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದು ಕಂಡು ಬಂದಿದ್ದು ಆರೋಪಿ ವಾಲ್ಟರ್ ಬುತೆಲ್ಲೋರವರನ್ನು ಬಂಧಿಸಿದ ಪಿಎಸ್‌ಐ ಎಂ.ಶಿವಣ್ಣರವರು ಆರೋಪಿಯು ಮಾರಾಟ ಮಾಡುತ್ತಿದ್ದ ವಿವಿಧ ಕಂಪೆನಿಯ ಮದ್ಯ ಹಾಗೂ ಸುಮಾರು ರೂ.1400/- ನಗರದನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.