Tuesday, July 11, 2017

ಕ್ಷುಲ್ಲಕ ಕಾರಣ ವ್ಯಕ್ತಿಯ ಕೊಲೆಗೆ ಯತ್ನ:

     ವಿರಾಜಪೇಟೆ ತಾಲೋಕು, ಕುರ್ಚಿ ಗ್ರಾಮದ ನಿವಾಸಿ ಪಂಜರಿ ಎರವರ ಲೋಕೇಶ ಎಂಬವರು ದಿನಾಂಕ 10-7-2017 ರವರ ಕಾಳ ಎಂಬವರೊಂದಿಗೆ ಅದೇ ಗ್ರಾಮದಲ್ಲಿರುವ ಅಂಗಡಿಗೆ ಹೋಗಿದ್ದು ಸಂಜೆ 8-30 ಗಂಟೆಯ ಸಮಯದಲ್ಲಿ ಸದರಿ ಕಾಳ ರವರ ಮಗಳು ಲೋಕೇಶರವರನ್ನು ಕಂಡು ನಗುತ್ತಿದ್ದ ವಿಚಾರವಾಗಿ ಕೋಪಗೊಂಡ ಕಾಳ ಲೋಕೇಶನೊಂದಿಗೆ ಜಗಳ ಮಾಡಿ ಕೊಲೆ ಮಾಡುವುದಾಗಿ ಹೇಳಿ ಕತ್ತಿಯಿಂದ ಲೋಕೇಶನವರ ಹಣೆಗೆ ಕಡಿದು ಗಾಯಪಡಿಸಿರುತ್ತಾರೆಂದು ಲೋಕೇಶನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದುಷ್ಕರ್ಮಿಗಳಿಂದ ಬಾರ್ ಮೇಲೆ ದಾಳಿ, ಹಾನಿ:

     ಸುಮಾರು 10-12 ಜನರಿದ್ದ ಗುಂಪೊಂದು ತಲೆಗೆ ಹೆಲ್ಮೆಟ್ ಧರಿಸಿ ಮಡಿಕೇರಿ ನಗರದ ಬಾರ್ ವೊಂದಕ್ಕೆ ದಾಳಿ ನಡೆಸಿ ಹಾನಿಪಡಿಸಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊಲೆ ಬೆದರಿಕೆ ಹಾಕಿದ  ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 10-7-2017 ರಂದು ರಾತ್ರಿ 8-15 ಗಂಟೆಯ ಸಮಯದಲ್ಲಿ ಅಪರಿಚಿತ 10-12 ಮಂದಿಯ ಗುಂಪೊಂದು ತಲೆಗೆ ಹೆಲ್ಮೆಟ್ ಧರಿಸಿಕೊಂಡು ಮಡಿಕೇರಿ ನಗರದಲ್ಲಿರುವ ಮಾರುತಿ ಬಾರ್ ಗೆ ನುಗ್ಗಿ ಕಲ್ಲಿನಿಂದ ಬಾರ್ ಕೌಂಟರ್ ಗೆ ಹೊಡೆದು ಮದ್ಯದ ಬಾಟಲಿಗಳನ್ನು ಮತ್ತು ಶೋಕೇಸನ್ನು ಹೊಡೆದು ಹಾನಿಪಡಿಸಿದ್ದು ಅಲ್ಲದೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಮಾದುರವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಬಾರನಲ್ಲಿ 1 ಲಕ್ಷಕ್ಕೂ ಮೇಲ್ಪಟ್ಟು ನಷ್ಟಪಡಿಸಿ ಬಾರ್ ಕೌಂಟರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾವೇಪ್ಪ, ಮಂಜು ಮತ್ತು ಎಂ.ಡಿ.ಮುದ್ದಪ್ಪರವರಿಗೆ ಪ್ರಾಣ ಬೆದರಿಕೆ ಹಾಕಿದ್ದು ಈ  ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಫಿರ್ಯಾದಿ ಮುದ್ದಪ್ಪನವರು ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ:

    ಪಾದಚಾರಿಯೊಬ್ಬರು ಮದುವೆ ಕಾರ್ಯಕ್ರಮ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದ ಕಾವೇರಿ ಕಲ್ಯಾಣ ಮಂಟಪದ ಬಳಿ ಸಂಭವಿಸಿದೆ. ದಿನಾಂಕ 22-5-2017 ರಂದು ಕೇರಳದ ಕಲ್ಲಿಕೋಟೆ ನಿವಾಸಿ ಎಂ.ಅಜಿತ್ ಎಂಬವರು ತಮ್ಮ ತಂದೆ ಚಾಮಿ ಎಂಬವರೊಂದಿಗೆ ವಿರಾಜಪೇಟೆ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಮುಗಿಸಿ ನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದು ಚಾಮಿರವರ ಕಾಲಿನ ಮೇಲೆ ಹರಿದು ರಕ್ತ ಗಾಯವಾಗಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಬೈಕ್ ಕಳವು ಪ್ರಕರಣ ದಾಖಲು:

     ಮನೆಯ ಮುಂದೆ ನಿಲ್ಲಿಸಿದ್ದ ಮೊಟಾರ್ ಸೈಕಲ್ ಕಳ್ಳತನವಾದ ಘಟನೆ ಮಡಿಕೇರಿ ನಗರದ ಮಹದೇವಪೇಟೆ ಯಲ್ಲಿ ನಡೆದಿದೆ. ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ಜಿ.ಕೆ. ಅಮಿತ್ ಎಂಬವರು ದಿನಾಂಕ 7-7-2017 ರಂದು ತಮ್ಮ ಮನೆಯ ಮುಂದುಗಡೆ ನಿಲ್ಲಿಸಿದ್ದ ಕೆಎ-12 ಎಲ್-3006 ರ ಯಮಹಾ ಮೋಟರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ನೀಡದ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 10-07-2017 ರಂದು ವಿರಾಜಪೇಟೆಯ ಮೀನುಪೇಟೆಯ ನಿವಾಸಿ ರವಿ ಎಂಬವರು ತಮ್ಮ ಪತ್ನಿ ಲತಾರವರೊಂದಿಗೆ ಸಮಯ 16-45 ಗಂಟೆಗೆ ವಿರಾಜಪೇಟೆ ನಗರದ ಎಲ್.ಐ.ಸಿ ಕಛೇರಿ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ  ಪರಿಚಯವಿರುವ ಪುಟ್ಟಸ್ವಾಮಿ ಎಂಬವರ ಮಗ ಅಭಿಶೇಕ್ ಎಂಬುವವನು 200 ರೂ.ಸಾಲ ಕೊಡುವಂತೆ ಕೇಳಿದ್ದು, ಹಣವಿಲ್ಲ ಎಂದು ಹೇಳಿದ ಕಾರಣಕ್ಕೆ ಅಭಿಶೇಕ್  ರವಿರವರ ದಾರಿ ತಡೆದು, ಕೈಯಿಂದ ಬುಜಕ್ಕೆ ಹೊಡೆದು ನಂತರ ರಸ್ತೆಯಲ್ಲಿ ಬಿದ್ದಿದ್ದ ಕಲ್ಲಿನಿಂದ ತಲೆಗೆ ಹಲ್ಲೆಮಾಡಿ ರಕ್ತ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪರಸ್ಪರ ಬೈಕ್ ಗಳ ಡಿಕ್ಕಿ:

     ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ಬೈಕಿನ ಸವಾರರು ಗಾಯಗೊಂಡ ಘಟನೆ ಕುಶಾಲನಗರದ ಬಳಿಯ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 9-7-2017 ರಂದು ರಾತ್ರಿ 10.45 ಗಂಟೆಗೆ ಜಯಪ್ರಕಾಶ್ ಎಂಬವವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಕೂಡುಮಂಗಳೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಹೋಗುವಾಗ ಆಟಲ್‌ ಬಿಹಾರಿ ವಸತಿಗೃಹದ ಮುಂದಿನ ತಿರುವಿನ ರಸ್ತೆಯಲ್ಲಿ ಹೋಗುವಾಗ ಎದುರುಗಡೆಯಿಂದ ಬಂದ ಪಲ್ಸರ್‌ ಬೈಕ್‌ನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಜಯಪ್ರಕಾಶ್ ರವರ ಬಲಕಾಲಿಗೆ ರಕ್ತಗಾಯವಾಗಿದ್ದು ಹಾಗೂ ಪಲ್ಸರ್ ಬೈಕ್‌ ಸವಾರನಿಗೂ ರಕ್ತಾಯವಾಗಿ ಎರಡು ಬೈಕ್‌ಗಳು ಜಕಂಗೊಂಡಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.