Saturday, July 1, 2017

ವ್ಯಕ್ತಿಯ ಅಸಹಜ ಸಾವು:

     ವಿರಾಜಪೇಟೆ ತಾಲೋಕು ನಾಮಗಾಲ ಗ್ರಾಮದ ನಿವಾಸಿ ಬಿ.ಡಿ. ಮಂದಪ್ಪ ಎಂಬವರ ಕಾಫಿ ತೋಟದಲ್ಲಿ ಸುಮಾರು ಮೂರು ತಿಂಗಳಿಂದ ಕೆಲಸ ಮಾಡಿಕೊಂಡು ಲೈನ್ ಮನೆಯಲ್ಲಿ ವಾಸವಾಗಿದ್ದ 59 ವರ್ಷ ಪ್ರಾಯದ ಬಾಲಕೃಷ್ಣ ಎಂಬವರು ಕೆಲವು ದಿವಸಗಳಿಂದ ಹೊಟ್ಟೆನೋವು ಮತ್ತು ಎದೆನೋವಿನಿಂದ ಬಳಲುತ್ತಿದ್ದು ಸದರಿಯವರು ದಿನಾಂಕ 29-6-2017 ರಂದು ಅಪರಾಹ್ನ 1-45 ಗಂಟೆಗೆ ತನ್ನ ಲೈನು ಮನೆಗೆ ಹೋಗಿ ಮತ್ತೆ ಫಿರ್ಯಾದಿ ಬಿ.ಡಿ. ಮಂದಪ್ಪನವರ ಮನೆಗೆ ಬಾರದೆ ಇದ್ದು ದಿನಾಂಕ 30-6-2017 ರಂದು ಲೈನು ಮನೆಗೆ ಹೋಗಿ ನೋಡಿದಾಗ ಸದರಿ ಬಾಲಕೃಷ್ಣನವರು ಚಾಪೆಯ ಮೇಲೆ ಮಲಗಿದ್ದು ಸಾವನಪ್ಪಿರುವುದು ಕಂಡು ಬಂದಿದ್ದು, ಈ ಬಗ್ಗೆ ಮಂದಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಬಸ್ಸ್ ಡಿಕ್ಕಿ ಇಬ್ಬರಿಗೆ ಗಾಯ:

     ಮೋಟಾರ್ ಸೈಕಲಿಗೆ ಬಸ್ಸು ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ದಿನಾಂಕ 30-6-2017 ರಂದು ಫಿರ್ಯಾದಿ ಹೆಚ್.ಇ. ಜಯಪ್ಪ ಹಾಗು ಸಿಗೆಮರೂರು ಗ್ರಾಮದ ನಿವಾಸಿ ನಾಗರಾಜು ರವರು ಮೋಟಾರ್ ಸೈಕಲಿನಲ್ಲಿ ಶನಿವಾರಸಂತೆ ನಗರದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕಿನ ಸವಾರಿ ಮಾಡುತ್ತಿದ್ದ ಹೆಚ್.ಇ. ಜಯಪ್ಪ ಹಾಗು ನಾಗರಾಜುರವರು ಗಾಯಗೊಂಡಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ:
     ದಿನಾಂಕ 30.06.17 ರಂದು ಸಮಯ 04.00 ಗಂಟೆಗೆ ಸುಂಟಿಕೊಪ್ಪದ ನಿವಾಸಿ ಎ.ಜಿ. ಶ್ರೀನಿವಾಸ ಎಂಬವರು ತಮ್ಮ ಬಾಪ್ತು ಸಿಪ್ಟ್ ಕಾರ್ ನಂ KA12-Z-2315 ರನ್ನು ಸುಂಟಿಕೊಪ್ಪ ನಗರದ ಮುಖ್ಯ ರಸ್ತೆಯ ಕುಶಾಲನಗರ-ಮಡಿಕೇರಿ ರಾಷ್ಟೀಯ ಹೆದ್ದಾರಿಯಲ್ಲಿ ವಿಜಯಿ ಪ್ಲಾಟೇಶನ್ ಸಪ್ಲೆಯಸ್ ಅಂಗಡಿ ಮುಂದೆ ನಿಲ್ಲಿಸಿ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ್ಗೆ ಸುಂಟಿಕೊಪ್ಪ ಸರ್ಕಾರಿ ಆಸ್ವತ್ರೆ ಕಡೆಗೆ ಹೋಗುವ ರಸ್ತೆ ಕಡೆಯಿಂದ ಈಯಾನೋ ಕಾರ್ ನಂ KA-12 –Z-0243 ರ ಕಾರನ್ನು ಅದರ ಚಾಲಕ ವೇಗ ಮತ್ತು ಅಜಾಗ್ರೂಕತೆಯಿಂದ ಚಲಾಯಿಸಿಕೊಂಡು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ವಿಪ್ಟ್ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಿಪ್ಟ್ ಕಾರು ಸಂಪೂರ್ಣ ಜಖ್ಖಂಗೊಂಡಿರುವುದಾಗಿ ಎ.ಜಿ. ಶ್ರೀನಿವಾಸ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.