Friday, July 14, 2017

 ಗೋದಾಮಿನಿಂದ ಕಾಫಿ ಕಳವು:

      ಕಾಫಿ ಗೋದಾಮಿನ ಬೀಗವನ್ನು ಮುರಿದು ಕಾಫಿ ಕಳ್ಳತನ ಮಾಡಿದ ಘಟನೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಬೇಟೋಳಿ ಗ್ರಾಮದ ನಿವಾಸಿ ಬಿ.ಎಸ್. ಆನಂದರಾವ್ ಎಂಬವರು ಅದೇ ಗ್ರಾಮದ ತಿಮ್ಮಯ್ಯ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಆರ್ಜಿ ಕಾಫಿ ಕ್ಯೂರಿಂಗ್ ವರ್ಕ್ಸ್ ಎಂಬ ಕಾಫಿ ಸಂಸ್ಕರಣಾ ಕೇಂದ್ರವನ್ನು ನಡೆಸುತ್ತಿದ್ದು ಸದರಿ ಕೇಂದ್ರದ ಶೆಟ್ಟರ್ಸ್ ಗೆ ಹಾಕಿದ ಬೀಗವನ್ನು ದಿನಾಂಕ 12-7-2017 ರಂದು ರಾತ್ರಿ ಯಾರೋ ಕಳ್ಳರು ಒಡೆದು  ಸಂಸ್ಕರಣಾ ಕೇಂದ್ರದಲ್ಲಿ ಶೇಖರಿಸಿಟ್ಟಿದ್ದ 520 ಕಾಫಿ ಚೀಲಗಳ ಪೈಕಿ 3 ಕಾಫಿ ತುಂಬಿದ ಚೀಲಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು:

    ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಡುಗಂಗಳೂರು ಗ್ರಾಮದ ನಿವಾಸಿ ಶ್ರೀಮತಿ ರೇಣುಕಾ ಬಸವರಾಜ ಶೆಟ್ಟಿ ಎಂಬವರು ದಿನಾಂಕ 13.07.2017 ರಂದು ಬೆಳಿಗ್ಗೆ ಸಮಯ ಸುಮಾರು 10.30 ಗಂಟೆಗೆ ತಮ್ಮ ಮನೆಗೆ ಡೋರ್ ಲಾಕ್ ಮಾಡಿಕೊಂಡು ಧರ್ಮಸ್ಥಳ ಸಂಘದ ಹಣವನ್ನು ಕಟ್ಟುವಂತೆ ಸದಸ್ಯ್ರರಿಗೆ ತಿಳಿಸುವ ಸಲುವಾಗಿ ಮದಲಾಪುರ ಗ್ರಾಮಕ್ಕೆ ಹೋಗಿ ವಾಪಾಸ್ಸು ಸಮಯ ಸುಮಾರು 13.00 ಗಂಟೆಗೆ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಮುಂಭಾಗದ ಬಾಗಿಲನ್ನು ಮೀಟಿ ಮುರಿದು ಒಳನುಗ್ಗಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್ ಮತ್ತು ವಾಲ್ ರೋಬ್ ಗಳ ಬಾಗಿಲನ್ನು ತೆಗೆದು ಅದರಲ್ಲಿದ್ದ ಅಂದಾಜು ರೂ. 2,50,000/- ಬೆಲೆಯ ಚಿನ್ನಾಭರಣ, ರೂ.20,000/- ಬೆಲೆಬಾಳುವ ಬೆಳ್ಳಿಯ ವಸ್ತುಗಳು ಹಾಗೂ ನಗದು ಹಣ ರೂ.70,000/- ಸೇರಿ ಒಟ್ಟು ರೂ.3,40,000/- ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಡಿಗೆ ಹಣ ನೀಡದ ವಂಚನೆ:
      ಕುಶಾಲನಗರದ ತ್ಯಾಗರಾಜ ರಸ್ತೆಯಲ್ಲಿರುವ ಕಾಶಿಪತಿ ಎಂಬವರು ವಾಸವಾಗಿದ್ದು ಅವರಿಗೆ ಸೇರಿದ ಮನೆಯನ್ನು ಲಕ್ಷ್ಮಣ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಸದರಿಯವರು ಕುಶಾಲನಗರ ಸರಕಾರಿ ಆಸ್ಪತ್ರೆಯ ಶವಾಗಾರದ ಕಾಮಗಾರಿ ಕೆಲಸವನ್ನು ನಿರ್ವಹಿಸುತ್ತಿದ್ದು, ದಿನಾಂಕ 20-4-2014 ರಿಂದ ಸದರಿ ಮನೆಯಲ್ಲಿ ವಾಸವಾಗಿದ್ದುಕೊಂಡು ಬಾಡಿಗೆ ಹಣವನ್ನು ಸರಿಯಾಗಿ ನೀಡದೆ ಸುಮಾರು 82,000 ರೂ. ಬಾಡಿಗೆ ಹಣವನ್ನು ನೀಡದೆ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.


ಕತ್ತಿಯಿಂದ ಕಡಿದು ವ್ಯಕ್ತಿ ಕೊಲೆಗೆ ಯತ್ನ:

      ಮಡಿಕೇರಿ ತಾಲೋಕು ತಣ್ಣಿಮಾನಿ ಗ್ರಾಮದ ನಿವಾಸಿ ಡಿ.ಎಸ್. ಪೂಣಚ್ಚ ಎಂಬವರು ದಿನಾಂಕ 13-7-2017 ರಂದು ತಮ್ಮ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಅದೇ ಗ್ರಾಮದ ವಾಸಿ ವೇಗೇಂದ್ರ ಎಂಬವರು ಅಲ್ಲಿಗೆ ಬಂದು ಏಕೆ ನಮ್ಮ ಜಾಗಕ್ಕೆ ಬಂದೆ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಡಿ.ಎಸ್. ಪೂಣಚ್ಚನವರ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







ವ್ಯಕ್ತಿಯ ಮೇಲೆ ಹಲ್ಲೆ:







ಕುಟ್ಟ ಠಾಣಾ ವ್ಯಾಪ್ತಿಯ ನಾಥಂಗಾಲ ಗ್ರಾಮದ ನಿವಾಸಿ ಶ್ರೀಮತಿ ಸುಶೀಲ ಎಂಬವರ ಮಗನಾದ ಪ್ರಜೀಸ್ ಎಂಬವ ಮೇಲೆ ಅದೇ ಗ್ರಾಮದ ನಿವಾಸಿ ದಾಸ ಎಂಬವರು ಕೈಗಳನ್ನು ಬೆನ್ನಿನ ಹಿಂದಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು ಸದರಿಯವರು ಕುಟ್ಟ ನಗರದ ವಿವೇಕ್ ರಾವ್ ರವರ ಕ್ಲೀನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚುಬ ಚಿಕಿತ್ಸೆಗಾಗಿ ದಿನಾಂಕ 13-07-2017 ರಂದು ಕುಟ್ಟ ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಶ್ರೀಮತಿ ಸುಶೀಲ ರವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.