Saturday, July 15, 2017

 ಕ್ಷುಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

     ವ್ಯಕ್ತಿಯೋರ್ವರು ನೀರಿನ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಮೇಲೆ ಮೂವರು ಸೇರಿ ಹಲ್ಲೆನಡೆಸಿದ ಬಗ್ಗೆ ವರದಿಯಾಗಿದೆ. ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ನಿವಾಸಿ ಡಿ.ಎಸ್. ವೇಗೇಂದ್ರ ಎಂಬವರು ದಿನಾಂಕ 13-7-2017 ರಂದು ನೀರಿನ ಕಣಿವಯಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಪೂಣಚ್ಚ, ರಮೇಶ ಮತ್ತು ತುಳಸಿ ಎಂಬವರುಗಳು ಅಲ್ಲಿಗೆ ಬಂದು ‘ಏಕೆ ಕಲ್ಲನ್ನು ಒಡಿಯುತ್ತೀಯಾ ಎಂದು ಜಗಳ ಮಾಡಿ ಕತ್ತಿಯಿಂದ ಕಡಿದು ಗಾಯಪಡಿಸಿದ್ದಲ್ಲದೆ ಗುದ್ದಲಿಯಿಂದ ಹಲ್ಲೆ ನಡೆಸಿರುತ್ತಾರೆಂದು ಜಿಲ್ಲಾಸ್ಪತ್ರೆ, ಮಡಿಕೇರಿಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ಕಕ್ಕಟಕಾಡು ಎಂಬಲ್ಲಿ ದಿನಾಂಕ 14-7-2017 ರಂದು ಯಾರೋ ಅಪರಿಚಿತ ವ್ಯಕ್ತಿಗಳು ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟಮಾಡುತ್ತಿದ್ದಾರೆಂಬ ಮಾಹಿತಿ   ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಶ್ರೀ ಜಿ.ಕೆ. ಸುಬ್ರಮಣ್ಯರವರಿಗೆ ಬಂದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.