Sunday, July 9, 2017

ವ್ಯಕ್ತಿಯ ಆತ್ಮಹತ್ಯೆ 
                ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆಟ್ಟಳ್ಳಿಯಲ್ಲಿ ವರದಿಯಾಗಿದೆ. ಚೆಟ್ಟಳ್ಳಿಯ ನಿವಾಸಿ ಚಂದ್ರರವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 08-07-2017 ರಂದು ಮನೆಯಲ್ಲಿ ವಿಷ ಕುಡಿದು ಬ್ಲೇಡಿನಿಂದ ಕೈ ಮತ್ತು ಕುತ್ತಿಗೆ ಕುಯಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ಉಮೇಶರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಪ್ರವೇಶ 
                  ದಿನಾಂಕ 08-07-2017 ರಂದು ಕುಶಾಲನಗರದ ಗ್ರೇಟ್ ಕಾಫಿ ಕ್ಯುರಿಂಗ್ ಕಾರ್ಖಾನೆಯಲ್ಲಿ ಪ್ರಕಾಶ ಎಂಬುವವರು ಇತರೊಂದಿಗೆ ಕೆಲಸ ಮಾಡುತ್ತಿರುವಾಗ ನಿಶಾಂತ್ ಕಾಫಿ ಕ್ಯೂರಿಂಗ್ ಕಾರ್ಖಾನೆಯ ಮಾಲಿಕ ಸುರೇಶ ಎಂಬುವವರು ಮೂರು ಜನರೊಂದಿಗೆ ಅಕ್ರಮ ಪ್ರವೇಶ ಮಾಡಿ ನಿನ್ನ ಸಾಹುಕಾರನ ಮಗ 18 ಲಕ್ಷ ಕೊಡಬೇಕಿದ್ದು ನೀವು ಹೊರ ಹೋಗಿ ಎಂದು ಹೇಳಿ ಎಲ್ಲರನ್ನೂ ಹೊರ ಹಾಕಿ ಕಾರ್ಖಾನೆಗೆ ಬೀಗ ಹಾಕಿರುವುದಾಗಿ ಪ್ರಕಾಶರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಬಸ್ಸಿನಲ್ಲಿ ವ್ಯಕ್ತಿಯ ಮರಣ 
                      ದಿನಾಂಕ 08-07-2017 ರಂದು ತಿರುಮಲ ಬಸ್ಸಿಗೆ ಚಿಕ್ಕಮಂಡೂರುವಿನಿಂದ ಬೆಕ್ಕೆಸೊಡ್ಲೂರು ಗ್ರಾಮದ ನಿವಾಸಿ ಕಿಟ್ಟು ಎಂಬ ಮಧ್ಯವಯಸ್ಕ ವ್ಯಕ್ತಿ ಹತ್ತಿದ್ದು, ಬಸ್ಸಿನಲ್ಲಿ ಕುಳಿತ್ತಿದ್ದವರು ಬಿಕ್ಕಳಿಸುತ್ತಿದ್ದಾಗ ಬಸ್ಸಿನ ನಿರ್ವಾಹಕ ಅಪ್ಪಣ್ಣ ಎಂಬುವವರು ನೀರನ್ನು ಕುಡಿಸಿದಾಗ ನೀರನ್ನು ಕುಡಿಯದೇ ನೀರು ಹೊರಕ್ಕೆ ಬಂದಿದ್ದು, ಕಿಟ್ಟುರವರು ಬಸ್ಸಿನ ಒಳಗೇ ಮೃತಪಟ್ಟಿದ್ದು, ಈ ಬಗ್ಗೆ ನಿರ್ವಾಹಕ ಅಪ್ಪಣ್ಣ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.